ಜಸ್ಪ್ರೀತ್ ಬುಮ್ರಾ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ; 6 ವರ್ಷಗಳ ಬರ ನೀಗಿಸಿದ ವೇಗಿ, ಈವರೆಗೆ ಐಸಿಸಿ ಗೌರವ ಪಡೆದ ಭಾರತೀಯರಿವರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಸ್ಪ್ರೀತ್ ಬುಮ್ರಾ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ; 6 ವರ್ಷಗಳ ಬರ ನೀಗಿಸಿದ ವೇಗಿ, ಈವರೆಗೆ ಐಸಿಸಿ ಗೌರವ ಪಡೆದ ಭಾರತೀಯರಿವರು

ಜಸ್ಪ್ರೀತ್ ಬುಮ್ರಾ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ; 6 ವರ್ಷಗಳ ಬರ ನೀಗಿಸಿದ ವೇಗಿ, ಈವರೆಗೆ ಐಸಿಸಿ ಗೌರವ ಪಡೆದ ಭಾರತೀಯರಿವರು

  • ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಜಸ್ಪ್ರೀತ್ ಬುಮ್ರಾ ಅವರನ್ನು 2024ರ ವರ್ಷದ ಟೆಸ್ಟ್ ಕ್ರಿಕೆಟಿಗ ಎಂದು ಆಯ್ಕೆ ಮಾಡಿದೆ. ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ಗೆದ್ದ ಆರನೇ ಭಾರತೀಯ ಎಂಬ ಹೆಗ್ಗಳಿಕೆಗೆ ವೇಗದ ಬೌಲರ್‌ ಪಾತ್ರರಾಗಿದ್ದಾರೆ. ಹಾಗಿದ್ದರೆ, ಈವರೆಗೆ ಯಾವೆಲ್ಲಾ ಭಾರತೀಯರು ಈ ಗೌರವ ಪಡೆದಿದ್ದಾರೆ ಎಂಬುದನ್ನು ನೋಡೋಣ.

ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ 2024ರ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕಳೆದ ವರ್ಷ ಅವರು ಅತಿ ಹೆಚ್ಚು, ಅಂದರೆ 71 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಬುಮ್ರಾ ಈ ಪ್ರಶಸ್ತಿಯನ್ನು ಗೆದ್ದ ಆರನೇ ಭಾರತೀಯ ಆಟಗಾರ. 6 ವರ್ಷಗಳ ಬಳಿಕ ಭಾರತಕ್ಕೆ ಈ ಪ್ರಶಸ್ತಿ ಬಂದಿದ್ದು, ಬುಮ್ರಾ ಬರ ನೀಗಿಸಿದ್ದಾರೆ.
icon

(1 / 7)

(AFP)

ವಿರಾಟ್ ಕೊಹ್ಲಿ: ಬುಮ್ರಾಗಿಂತ ಮೊದಲು ವಿರಾಟ್ ಕೊಹ್ಲಿ ಐಸಿಸಿ ಪುರುಷರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದರು. ಕೊಹ್ಲಿ 2018ರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆಗ ಕೊಹ್ಲಿ 13 ಟೆಸ್ಟ್‌ಗಳಲ್ಲಿ 55.08ರ ಸರಾಸರಿಯಲ್ಲಿ ಐದು ಶತಕಗಳು ಮತ್ತು ಐದು ಅರ್ಧಶತಕಗಳೊಂದಿಗೆ 1322 ರನ್ ಗಳಿಸಿದ್ದರು.
icon

(2 / 7)

ರಾಹುಲ್ ದ್ರಾವಿಡ್: ರಾಹುಲ್ ದ್ರಾವಿಡ್ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ. ಮಾಜಿ ದಂತಕಥೆ 2004ರಲ್ಲಿ ಐದು ಪಂದ್ಯಗಳಲ್ಲಿ 100.37ರ ಸರಾಸರಿಯಲ್ಲಿ 803 ರನ್ ಗಳಿಸಿದ್ದರು. ಅವರು 10 ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದರು.
icon

(3 / 7)

(ICC)

ಗೌತಮ್ ಗಂಭೀರ್:‌ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್, 2009ರಲ್ಲಿ ವರ್ಷದ ಟೆಸ್ಟ್ ಕ್ರಿಕೆಟಿಗ ಎಂದು ಹೆಸರಿಸಲ್ಪಟ್ಟರು. ಅವರು ಐದು ಪಂದ್ಯಗಳಲ್ಲಿ ನಾಲ್ಕು ಶತಕ ಮತ್ತು ಒಂದು ಅರ್ಧಶತಕದ ಸಹಾಯದಿಂದ 727 ರನ್ ಗಳಿಸಿದ್ದರು. ಆ ವರ್ಷ ಗಂಭೀರ್ ಅವರ ಬ್ಯಾಟಿಂಗ್ ಸರಾಸರಿ 90.87 ಆಗಿತ್ತು.
icon

(4 / 7)

ವೀರೇಂದ್ರ ಸೆಹ್ವಾಗ್:‌ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ 2010ರಲ್ಲಿ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದರು. ಭಾರತ ಪರ 14 ಟೆಸ್ಟ್ ಪಂದ್ಯಗಳಲ್ಲಿ ಸೆಹ್ವಾಗ್ 1422 ರನ್ ಗಳಿಸಿದ್ದು, ಐದು ಶತಕ ಮತ್ತು ಎಂಟು ಅರ್ಧಶತಕಗಳನ್ನು ಗಳಿಸಿದ್ದಾರೆ.
icon

(5 / 7)

ರವಿಚಂದ್ರನ್ ಅಶ್ವಿನ್: ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ನಾಲ್ಕನೇ ಭಾರತೀಯ ಆಟಗಾರ. ಅವರು 2016ರಲ್ಲಿ ಪ್ರಶಸ್ತಿಯನ್ನು ಪಡೆದರು. 12 ಪಂದ್ಯಗಳಲ್ಲಿ 72 ವಿಕೆಟ್‌ ಪಡೆದಿದ್ದ ಅಶ್ವಿನ್, 612 ರನ್‌ ಕೂಡಾ ಕಲೆ ಹಾಕಿದ್ದರು.
icon

(6 / 7)

(PTI)

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಎಚ್‌ಟಿ ಕನ್ನಡ ಸುದ್ದಿತಾಣಕ್ಕೆ ಭೇಟಿ ನೀಡಿ
icon

(7 / 7)

ಇತರ ಗ್ಯಾಲರಿಗಳು