ಮಾರ್ಚ್ 23ರಿಂದ ಐಪಿಎಲ್ ಪ್ರಾರಂಭ; ಕ್ವಾಲಿಫೈಯರ್​, ಎಲಿಮಿನೇಟರ್, ಫೈನಲ್ ಪಂದ್ಯಗಳು ನಡೆಯೋದು ಎಲ್ಲಿ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಾರ್ಚ್ 23ರಿಂದ ಐಪಿಎಲ್ ಪ್ರಾರಂಭ; ಕ್ವಾಲಿಫೈಯರ್​, ಎಲಿಮಿನೇಟರ್, ಫೈನಲ್ ಪಂದ್ಯಗಳು ನಡೆಯೋದು ಎಲ್ಲಿ?

ಮಾರ್ಚ್ 23ರಿಂದ ಐಪಿಎಲ್ ಪ್ರಾರಂಭ; ಕ್ವಾಲಿಫೈಯರ್​, ಎಲಿಮಿನೇಟರ್, ಫೈನಲ್ ಪಂದ್ಯಗಳು ನಡೆಯೋದು ಎಲ್ಲಿ?

  • IPL 2025: ಮಾರ್ಚ್ 23ರಿಂದ 18ನೇ ಆವೃತ್ತಿಯ ಐಪಿಎಲ್ ಪ್ರಾರಂಭವಾಗಲಿದೆ ಎಂದು ಅಧಿಕೃತವಾಗಿ ಬಹಿರಂಗವಾಗಿದೆ. ಹಾಗಾದರೆ ಕ್ವಾಲಿಫೈಯರ್​, ಎಲಿಮಿನೇಟರ್, ಫೈನಲ್ ಪಂದ್ಯಗಳು ನಡೆಯೋದು ಎಲ್ಲಿ? ಇಲ್ಲಿದೆ ವಿವರ.

18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 23ರಿಂದ ಮೆಗಾ ಟೂರ್ನಿ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಬಹಿರಂಗಪಡಿಸಿದ್ದಾರೆ. ಹಾಗಿದ್ದರೆ ಫೈನಲ್, ಕ್ವಾಲಿಫೈಯರ್​, ಎಲಿಮಿನೇಟರ್​ ಪಂದ್ಯಗಳು ಎಲ್ಲಿ ನಡೆಯಲಿವೆ? ಇಲ್ಲಿದೆ ವಿವರ.
icon

(1 / 8)

ಪೂರ್ಣ ವೇಳಾಪಟ್ಟಿ ಯಾವಾಗ ಘೋಷಿಸಲಾಗುವುದು, ಆರಂಭಿಕ ಪಂದ್ಯ ಎಲ್ಲಿ ನಡೆಯಲಿದೆ ಎನ್ನುವುದರ ಕುರಿತು ರಾಜೀವ್ ಶುಕ್ಲಾ ಯಾವುದೇ ಮಾಹಿತಿ ನೀಡಲಿಲ್ಲ. 
icon

(2 / 8)

ಆದರೆ ವರದಿಗಳ ಪ್ರಕಾರ, ಕಳೆದ ಸೀಸನ್​​ನಲ್ಲಿ ಚಾಂಪಿಯನ್​ ಆದ ತಂಡದ ತವರು ಮೈದಾನ ಅಂದರೆ ಕೋಲ್ಕತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದಿರುವ ಕಾರಣ, ಉದ್ಘಾಟನಾ ಪಂದ್ಯ ಈಡನ್ ಗಾರ್ಡನ್ಸ್​​ನಲ್ಲಿ ನಡೆಯುವ ಸಾಧ್ಯತೆ ಇದೆ.
icon

(3 / 8)

ಸ್ಪೋರ್ಟ್ಸ್ ಸ್ಟಾರ್ ವರದಿಯ ಪ್ರಕಾರ, ಐಪಿಎಲ್ ಫೈನಲ್ ಮೇ 25 ರಂದು ನಡೆಯಲಿದೆ. ಕಳೆದ ಬಾರಿ ಕೆಕೆಆರ್ ಚಾಂಪಿಯನ್ ಆಗಿದ್ದರಿಂದ ಫೈನಲ್ ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲೇ ನಡೆಯಲಿದೆ. ಕೊನೆಯ ಐಪಿಎಲ್ ಫೈನಲ್ ಚೆನ್ನೈನಲ್ಲಿ ನಡೆದಿತ್ತು. ಏಕೆಂದರೆ, 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ರಶಸ್ತಿ ಗೆದ್ದಿತ್ತು.
icon

(4 / 8)

ವರದಿಯ ಪ್ರಕಾರ, ಮೊದಲ ಕ್ವಾಲಿಫೈಯರ್ (ಮೊದಲ ಮತ್ತು 2ನೇ ಸ್ಥಾನ ಪಡೆದ ತಂಡಗಳು) ಮತ್ತು ಎಲಿಮಿನೇಟರ್ (3 ಮತ್ತು 4ನೇ ಸ್ಥಾನ ಪಡೆದ ತಂಡಗಳು) ಪಂದ್ಯಗಳು ಹೈದರಾಬಾದ್​​​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ.
icon

(5 / 8)

ಕ್ವಾಲಿಫೈಯರ್ 2 (ಕ್ವಾಲಿಫೈಯರ್ 1ರಲ್ಲಿ ಸೋತವರು ಮತ್ತು ಎಲಿಮಿನೇಟರ್ ವಿಜೇತರು) ಮತ್ತು ಫೈನಲ್ ಪಂದ್ಯ (ಕ್ವಾಲಿಫೈಯರ್ 1ರ ವಿಜೇತರು ಮತ್ತು ಕ್ವಾಲಿಫೈಯರ್ 2ರ ವಿಜೇತರು) ಕೋಲ್ಕತ್ತಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
icon

(6 / 8)

ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಪ್ರೀಮಿಯರ್ ಲೀಗ್ ಅನ್ನು ನಾಲ್ಕು ಸ್ಥಳಗಳಲ್ಲಿ ಆಯೋಜಿಸಲು ನಿರ್ಧರಿಸಿದೆ. ಕಳೆದ ಬಾರಿ ಬೆಂಗಳೂರು ಮತ್ತು ದೆಹಲಿಯಲ್ಲಿ ಆಯೋಜನೆ ಮಾಡಲಾಗಿತ್ತು.
icon

(7 / 8)

ಫೆಬ್ರವರಿ ಮೊದಲ ವಾರದಿಂದ ಡಬ್ಲ್ಯುಪಿಎಲ್ ಟೂರ್ನಿ ಪ್ರಾರಂಭವಾಗುವ ಸಾಧ್ಯತೆ ಇದೆ. ಮುಂಬೈ, ಬೆಂಗಳೂರು, ವಡೋದರಾ ಮತ್ತು ಲಕ್ನೋದಲ್ಲಿ ಪಂದ್ಯಗಳು ನಡೆಯಲಿವೆ. ಮುಂಬೈನಲ್ಲಿ ನಡೆಯಲಿರುವ ಪಂದ್ಯಗಳು ವಾಂಖೆಡೆಯಲ್ಲಿ ನಡೆಯುವುದಿಲ್ಲ. ಬದಲಿಗೆ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ ಎಂದು ವರದಿ ತಿಳಿಸಿದೆ.
icon

(8 / 8)

ಇತರ ಗ್ಯಾಲರಿಗಳು