ಫೆಬ್ರವರಿ 6ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಭಾರತ ತಂಡ ಪ್ರಕಟ; ಯಾರಿಗೆಲ್ಲಾ ಸಿಕ್ಕಿದೆ ಅವಕಾಶ?
- Indias Squad: ಫೆಬ್ರವರಿ 6ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಯಾರಿಗೆಲ್ಲಾ ಸಿಕ್ಕಿದೆ ಅವಕಾಶ? ಇಲ್ಲಿದೆ ವಿವರ.
- Indias Squad: ಫೆಬ್ರವರಿ 6ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಯಾರಿಗೆಲ್ಲಾ ಸಿಕ್ಕಿದೆ ಅವಕಾಶ? ಇಲ್ಲಿದೆ ವಿವರ.
(1 / 8)
ಫೆಬ್ರವರಿ 19ರಿಂದ ಆರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಜತೆಗೆ ಫೆಬ್ರವರಿ 6ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
(2 / 8)
ಚಾಂಪಿಯನ್ಸ್ ಟ್ರೋಫಿಗೂ ಮತ್ತು ಏಕದಿನ ಸರಣಿಗೆ ಪ್ರಕಟವಾದ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಅಪ್ಡೇಟ್ ತಿಳಿದು ಬರದ ಕಾರಣ ಇಂಗ್ಲೆಂಡ್ ಸರಣಿಗೆ ಅವರನ್ನು ಕೈಬಿಡಲಾಗಿದ್ದು, ಐಸಿಸಿ ಟೂರ್ನಿಗೆ ಆಯ್ಕೆಯಾಗಿದ್ದಾರೆ.
(3 / 8)
ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೆ ಬುಮ್ರಾ ಬದಲಿಗೆ ವೇಗಿ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಫೆಬ್ರವರಿ ಆರಂಭದಲ್ಲಿ ಬಿಸಿಸಿಐ ವೈದ್ಯಕೀಯ ತಂಡ ಬುಮ್ರಾ ಅವರ ಫಿಟ್ನೆಸ್ ಕುರಿತು ಮಾಹಿತಿ ನೀಡಲಿದೆ.
(4 / 8)
ಒಂದು ವೇಳೆ ಬುಮ್ರಾ ಅನ್ಫಿಟ್ ಆಗಿದ್ದರೆ ಚಾಂಪಿಯನ್ಸ್ ಟ್ರೋಫಿಯಿಂದಲೂ ಹಿಂದೆ ಸರಿಯಬೇಕಾಗುತ್ತದೆ. ಆಗ ಅವರ ಬದಲಿಗೆ ಮತ್ತೊಬ್ಬ ಆಟಗಾರರನಿಗೆ ಅವಕಾಶ ಸಿಗಲಿದೆ. ತಂಡದ ಬದಲಾವಣೆಗೆ ಫೆಬ್ರವರಿ 13ರ ತನಕ ಅವಕಾಶ ಇರಲಿದೆ.
(5 / 8)
ಹರ್ಷಿತ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಏಕದಿನ ಕ್ರಿಕೆಟ್ ತಂಡದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದಿದ್ದಾರೆ. ಜೈಸ್ವಾಲ್ ಬ್ಯಾಕಪ್ ಓಪನರ್ ಆಗಿದ್ದರೆ, ಬುಮ್ರಾ ಸ್ಥಾನಕ್ಕೆ ರಾಣಾ ಆಯ್ಕೆಯಾಗಿದ್ದಾರೆ.
(AFP)(6 / 8)
ಇದೇ ಶುಭ್ಮನ್ ಗಿಲ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಮೊಹಮ್ಮದ್ ಶಮಿ ಕಂಬ್ಯಾಕ್ ಮಾಡಿದ್ದಾರೆ. ನಾಲ್ವರು ಆಲ್ರೌಂಡರ್ಗಳು ಆಯ್ಕೆಯಾಗಿದ್ದಾರೆ.
(7 / 8)
ಫೆಬ್ರವರಿ 6ರಂದು ಮೊದಲ ಏಕದಿನ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಫೆಬ್ರವರಿ 9ರಂದು ಎರಡನೇ ಏಕದಿನ ಪಂದ್ಯ ಕಟಕ್ನಲ್ಲಿ, ಫೆಬ್ರವರಿ 12ರಂದು ಮೂರನೇ ಏಕದಿನ ಪಂದ್ಯ ಅಹ್ಮದಾಬಾದ್ನಲ್ಲಿ ನಡೆಯಲಿದೆ.
ಇತರ ಗ್ಯಾಲರಿಗಳು