ಈತ ಪಂಜಾಬ್ ತಂಡದ ನಿಜವಾದ ಕಿಂಗ್; ಐಪಿಎಲ್‌ನಲ್ಲಿ 14 ವರ್ಷಗಳ ಹಳೆಯ ದಾಖಲೆ ಮುರಿದ ಅರ್ಷದೀಪ್ ಸಿಂಗ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಇತಿಹಾಸ ನಿರ್ಮಿಸಿದ್ದಾರೆ. ಆರ್‌ಸಿಬಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಫಿಲ್ ಸಾಲ್ಟ್ ವಿಕೆಟ್ ಪಡೆದರು. ಈ ವಿಕೆಟ್‌ನೊಂದಿಗೆ ಇತಿಹಾಸ ಬರೆದರು. ಪಂದ್ಯದಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಕೂಡಾ ಔಟ್ ಮಾಡಿದರು.
- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಇತಿಹಾಸ ನಿರ್ಮಿಸಿದ್ದಾರೆ. ಆರ್‌ಸಿಬಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಫಿಲ್ ಸಾಲ್ಟ್ ವಿಕೆಟ್ ಪಡೆದರು. ಈ ವಿಕೆಟ್‌ನೊಂದಿಗೆ ಇತಿಹಾಸ ಬರೆದರು. ಪಂದ್ಯದಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಕೂಡಾ ಔಟ್ ಮಾಡಿದರು.
(1 / 7)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿಯಾಯ್ತು. ಹೀಗಾಗಿ ಪಂದ್ಯವನ್ನು 14 ಓವರ್‌ಗೆ ಇಳಿಸಲಾಯ್ತು. ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆಯೇ ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಇತಿಹಾಸ ಬರೆದಿದ್ದಾರೆ. ಫೋಟೋ: ಎಪಿ
(2 / 7)
ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಇದೀಗ ಅರ್ಷದೀಪ್ ಪಾತ್ರರಾಗಿದ್ದಾರೆ. ಅವರು ಪಿಯೂಷ್ ಚಾವ್ಲಾ ದಾಖಲೆ ಮುರಿದಿದ್ದಾರೆ. ಆರ್‌ಸಿಬಿ ವಿರುದ್ಧ ಅರ್ಷದೀಪ್ ಮೂರು ಓವರ್‌ಗಳಲ್ಲಿ 23 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಆ ಮೂಲಕ ಪಂಜಾಬ್ ಕಿಂಗ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಅರ್ಷ್ ಪಾತ್ರರಾಗಿದ್ದಾರೆ. ಪಂಜಾಬ್ ಪರ ಅವರು ಈವರೆಗೆ 86 ವಿಕೆಟ್ ಕಬಳಿಸಿದ್ದಾರೆ. 84 ವಿಕೆಟ್ ಪಡೆದಿರುವ ಪಿಯೂಷ್ ಚಾವ್ಲಾ ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಚಿತ್ರ: ಎಎನ್ಐ
(3 / 7)
ಪಂಜಾಬ್ ಪರ ಸಂದೀಪ್ ಶರ್ಮಾ 73 ವಿಕೆಟ್ ಕಬಳಿಸಿದ್ದಾರೆ. ಅಕ್ಷರ್ ಪಟೇಲ್ 61 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಶಮಿ 58 ವಿಕೆಟ್ ಪಡೆದಿದ್ದಾರೆ. ಫೋಟೋ: ಎಪಿ
(4 / 7)
ಅರ್ಷದೀಪ್ ಸಿಂಗ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪಂಜಾಬ್ ಕಿಂಗ್ಸ್ ತಂಡದೊಂದಿಗೆ ಪ್ರಾರಂಭಿಸಿದರು. ಅವರು ಮೊದಲು 2019ರಲ್ಲಿ ತಂಡದ ಪರ ಆಡಿದರು. 20 ಲಕ್ಷ ರೂ.ಗಳ ಮೂಲ ಬೆಲೆಗೆ ತಂಡಕ್ಕೆ ಆಯ್ಕೆ ಮಾಡಲಾಯಿತು. ಮೂರು ವರ್ಷಗಳ ಕಾಲ ಸ್ಥಿರ ಪ್ರದರ್ಶನ ನೀಡಿದ ನಂತರ, ಟೀಮ್ ಇಂಡಿಯಾಗೆ ಆಯ್ಕೆಯಾದರು. ಫೋಟೋ: ಪಿಟಿಐ
(5 / 7)
ಈ ಋತುವಿನಲ್ಲಿಯೂ ವೇಗದ ಬೌಲರ್ ಪ್ರದರ್ಶನವು ಸಾಕಷ್ಟು ಗಮನ ಸೆಳೆದಿದೆ. ಆಡಿದ 7 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಫೋಟೋ: ಪಿಟಿಐ
(6 / 7)
2025ರ ಐಪಿಎಲ್ ಮೇಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡವು ಅರ್ಷದೀಪ್ ಸಿಂಗ್ ಅವರನ್ನು 18 ಕೋಟಿ ರೂ.ಗೆ ಖರೀದಿಸಿತು. ವೇಗಿಯು ಫ್ರಾಂಚೈಸಿಯನ್ನು ಇಲ್ಲಿಯವರೆಗೆ ನಿರಾಶೆಗೊಳಿಸಿಲ್ಲ.
(REUTERS)ಇತರ ಗ್ಯಾಲರಿಗಳು