ಕೆಕೆಆರ್ ತಂಡದಿಂದ ಬರುತ್ತಿಲ್ಲ ಹಾಲಿ ಚಾಂಪಿಯನ್ ಆಟ; ಈ ಐವರು ಆಟಗಾರರು ಅಬ್ಬರ ಮರೆತಿರುವುದೇ ಸೋಲಿನ ಸರಣಿಗೆ ಕಾರಣ
- ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು, ತಮ್ಮ ಪಟ್ಟಕ್ಕೆ ಅನುಸಾರವಾಗಿ ಈ ಬಾರಿ ಆಡುತ್ತಿಲ್ಲ. ತಂಡದಲ್ಲಿ ಬಹುತೇಕ ಕೊನೆಯ ಆವೃತ್ತಿಯಲ್ಲಿ ಆಡಿದ ಆಟಗಾರರೇ ಇದ್ದಾರೆ. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ತಂಡ ಪ್ರಮುಖ ಐದು ಆಟಗಾರು ಅಬ್ಬರ ಮರೆತಿದ್ದಾರೆ.
- ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು, ತಮ್ಮ ಪಟ್ಟಕ್ಕೆ ಅನುಸಾರವಾಗಿ ಈ ಬಾರಿ ಆಡುತ್ತಿಲ್ಲ. ತಂಡದಲ್ಲಿ ಬಹುತೇಕ ಕೊನೆಯ ಆವೃತ್ತಿಯಲ್ಲಿ ಆಡಿದ ಆಟಗಾರರೇ ಇದ್ದಾರೆ. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ತಂಡ ಪ್ರಮುಖ ಐದು ಆಟಗಾರು ಅಬ್ಬರ ಮರೆತಿದ್ದಾರೆ.
(1 / 6)
ಕೆಕೆಆರ್ ಸೋಲಿಗೆ ಇದೇ ಕಾರಣ: ಕೋಲ್ಕತ್ತಾ ನೈಟ್ ರೈಡರ್ಸ್ ಹಾಲಿ ಐಪಿಎಲ್ ಚಾಂಪಿಯನ್ಸ್. 2024ರ ಸೀಸನ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗೆದ್ದಿತ್ತು, ಆದರೆ ಪ್ರಸ್ತುತ ತಂಡ ಕೆಟ್ಟ ಸ್ಥಿತಿಯಲ್ಲಿದೆ. ಐಪಿಎಲ್ 2025ರ ಪಾಯಿಂಟ್ ಪಟ್ಟಿಯಲ್ಲಿ ಕೆಕೆಆರ್ 7ನೇ ಸ್ಥಾನದಲ್ಲಿದೆ. ಕೆಕೆಆರ್ 8 ಪಂದ್ಯಗಳಲ್ಲಿ ರಲ್ಲಿ ಸೋತಿದೆ. ಹಾಗಿದ್ದರೆ ತಂಡಕ್ಕೆ ಯಾವ ಆಟಗಾರರು ಸಮಸ್ಯೆಯಾಗುತ್ತಿದ್ದಾರೆ ಎಂಬುದನ್ನು ನೋಡೋಣ.
(PTI)(2 / 6)
ಕೆಕೆಆರ್ ಪರ ರಸೆಲ್: ಒಂದು ಕಾಲದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬಲವಾಗಿದ್ದ ಆಂಡ್ರೆ ರಸೆಲ್, ಈ ಬಾರಿ ದೊಡ್ಡ ಸಮಸ್ಯೆಯಾಗಿದ್ದಾರೆ. ಈ ಬಾರಿ ಅವರು 8 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಬಂದು ಕೇವಲ 55 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ಅವರ ಅತ್ಯಧಿಕ ಸ್ಕೋರ್ 21. ಅವರ ಸರಾಸರಿ 9.17 ಮತ್ತು ಅವರ ಸ್ಟ್ರೈಕ್ ರೇಟ್ 119.56. ಇದು ಅವರ ವೃತ್ತಿಜೀವನದ ಸ್ಟ್ರೈಕ್ ರೇಟ್‌ಗಿಂತ ತುಂಬಾ ಕಡಿಮೆಯಾಗಿದೆ.
(PTI)(3 / 6)
ರಿಂಕು ಸಿಂಗ್ ಸಮಸ್ಯೆ ಸೃಷ್ಟಿಸಿದ್ದಾರೆ: ಕೆಕೆಆರ್ ತಂಡಕ್ಕೆ ಹಲವು ಪಂದ್ಯಗಳನ್ನು ಫಿನಿಶಿಂಗ್ ಮಾಡಿದ್ದ ರಿಂಕು ಸಿಂಗ್, ಈ ಬಾರಿ ಅಬ್ಬರಿಸುತ್ತಿಲ್ಲ. ಅವರು 8 ಪಂದ್ಯಗಳ ಏಳು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ಗೆ ಬಂದು ಒಟ್ಟು 133 ರನ್ ಮಾತ್ರ ಗಳಿಸಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ 38 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ ಉತ್ತಮವಾಗಿದ್ದರೂ, ಕಳೆದ ಬಾರಿಯಂತೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿಲ್ಲ.
(REUTERS)(4 / 6)
ವೆಂಕಟೇಶ್ ಅಯ್ಯರ್: ವೆಂಕಟೇಶ್ ಅಯ್ಯರ್ ಫಾರ್ಮ್ ಕೂಡಾ ತಂಡದ ಕಳವಳಕ್ಕೆ ಕಾರಣವಾಗಿದೆ. ಕಳೆದ ಆವೃತ್ತಿಯ ಹಲವು ಪಂದ್ಯಗಳಲ್ಲಿ ಸ್ಟ್ಯಾಂಡಿಂಗ್ ಪ್ರದರ್ಶನ ನೀಡಿದ್ದ ಅಯ್ಯರ್, ಈ ಬಾರಿ 8 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 135 ರನ್ ಮಾತ್ರ ಗಳಿಸಿದ್ದಾರೆ. ಅವರ ಸರಾಸರಿ 22.50, ಸ್ಟ್ರೈಕ್ ರೇಟ್ 139.17. ಈ ಋತುವಿನಲ್ಲಿ ಕೆಕೆಆರ್ ತಂಡದ ಅತ್ಯಂತ ದುಬಾರಿ ಆಟಗಾರ. ಕೆಕೆಆರ್ 23.75 ಕೋಟಿ ರೂ.ಗೆ ಖರೀದಿಸಿತು. ಆದರೆ ಅವರ ಪ್ರದರ್ಶನ ತುಂಬಾ ಕಳಪೆಯಾಗಿದೆ.
(Surjeet Yadav)(5 / 6)
ಡಿ ಕಾಕ್: ಕ್ವಿಂಟನ್ ಡಿ ಕಾಕ್ ಕೂಡ ಆಡಿದ 7 ಇನ್ನಿಂಗ್ಸ್‌ಗಳಲ್ಲಿ 143 ರನ್ ಗಳಿಸಿದರು. ಇದರಲ್ಲಿ ಒಂದೇ ಪಂದ್ಯದಲ್ಲಿ ಅವರು 97 ರನ್ ಗಳಿಸಿದ್ದರು. ಉಳಿದ ಪಂದ್ಯಗಳಲ್ಲಿ ಕಳಪೆ ಆಟ ಮುಂದುವರೆಸಿದ್ದಾರೆ. ಅವರ ಸರಾಸರಿ 23.83 ಮತ್ತು ಸ್ಟ್ರೈಕ್ ರೇಟ್ 137.50. ಇದೀಗ ಇವರ ಸ್ಥಾನದಲ್ಲಿ ಬದಲಿ ಆರಂಭಿಕರಾಗಿ ರಹಮಾನಲ್ಲಾ ಗುರ್ಬಾಜ್ ಆಡುತ್ತಿದ್ದಾರೆ.
(PTI)ಇತರ ಗ್ಯಾಲರಿಗಳು