ತವರು ಮೈದಾನದಲ್ಲಿ ಮುಂದುವರೆದ ಸೋಲಿನ ಸರಪಳಿ; ಐಪಿಎಲ್‌ನಲ್ಲಿ ಆರ್‌ಸಿಬಿಯಿಂದ ಮತ್ತೊಂದು ಮುಜುಗರದ ದಾಖಲೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತವರು ಮೈದಾನದಲ್ಲಿ ಮುಂದುವರೆದ ಸೋಲಿನ ಸರಪಳಿ; ಐಪಿಎಲ್‌ನಲ್ಲಿ ಆರ್‌ಸಿಬಿಯಿಂದ ಮತ್ತೊಂದು ಮುಜುಗರದ ದಾಖಲೆ

ತವರು ಮೈದಾನದಲ್ಲಿ ಮುಂದುವರೆದ ಸೋಲಿನ ಸರಪಳಿ; ಐಪಿಎಲ್‌ನಲ್ಲಿ ಆರ್‌ಸಿಬಿಯಿಂದ ಮತ್ತೊಂದು ಮುಜುಗರದ ದಾಖಲೆ

  • ಪಂಜಾಬ್‌ ಕಿಂಗ್ಸ್‌ ವಿರುದ್ಧ ಬೆಂಗಳೂರಿನಲ್ಲೇ ಪಂದ್ಯ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮತ್ತೊಂದು ಕಳಪೆ ದಾಖಲೆ ಬರೆದಿದೆ. ಐಪಿಎಲ್‌ನಲ್ಲಿ ಒಂದೇ ಮೈದಾನದಲ್ಲಿ ಅತಿ ಹೆಚ್ಚು ಪಂದ್ಯ ಸೋತ ಮೊದಲ ತಂಡವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ 46 ಐಪಿಎಲ್ ಪಂದ್ಯಗಳನ್ನು ಸೋತಿದೆ. ಈ ಋತುವಿನಲ್ಲಿ ಈವರೆಗೆ ಆಡಿದ ಎಲ್ಲಾ 3 ಪಂದ್ಯಗಳನ್ನು ಸೋತಿದೆ.

ಆರ್‌ಸಿಬಿ ಅತ್ಯಂತ ಮುಜುಗರದ ದಾಖಲೆ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮುಜುಗರದ ದಾಖಲೆ ಮಾಡಿದೆ. ಆರ್‌ಸಿಬಿ ತನ್ನ ತವರು ಮೈದಾನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡವಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಋತುವಿನಲ್ಲಿ ಈವರೆಗೆ ಆರ್‌ಸಿಬಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ.
icon

(1 / 6)

ಆರ್‌ಸಿಬಿ ಅತ್ಯಂತ ಕಳಪೆ ಪ್ರದರ್ಶನ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೆ ಬೆಂಗಳೂರಿನ ತನ್ನ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 94 ಪಂದ್ಯಗಳನ್ನು ಆಡಿದೆ. ಇದರಲ್ಲಿ ಆರ್‌ಸಿಬಿ 46 ಪಂದ್ಯಗಳಲ್ಲಿ ಸೋತಿದೆ. ಐಪಿಎಲ್ ಇತಿಹಾಸದಲ್ಲಿ ಬೇರೆ ಯಾವುದೇ ತಂಡವು ತನ್ನ ತವರು ನೆಲದಲ್ಲಿ ಇಂತಹ ದಾಖಲೆಯನ್ನು ಹೊಂದಿಲ್ಲ.
icon

(2 / 6)

(bcci ipl)

ಡೆಲ್ಲಿ ಕ್ಯಾಪಿಟಲ್ಸ್ ವೈಫಲ್ಯ: ಪಟ್ಟಿಯಲ್ಲಿ ಎರಡನೇ ಸ್ಥಾನ ಡೆಲ್ಲಿ ಕ್ಯಾಪಿಟಲ್ಸ್ ತಂಡದ್ದು, ಇದು ತನ್ನ ತವರು ನೆಲವಾದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಒಟ್ಟು 45 ಪಂದ್ಯಗಳನ್ನು ಸೋತಿದೆ. ದೆಹಲಿ ತಂಡ ತನ್ನ ತವರು ನೆಲದಲ್ಲಿ ಒಟ್ಟು 83 ಐಪಿಎಲ್ ಪಂದ್ಯಗಳನ್ನು ಆಡಿದೆ.
icon

(3 / 6)

(Surjeet Yadav ANI)

ಕೋಲ್ಕತಾದಲ್ಲಿ ಕೆಕೆಆರ್ ಸೋಲು: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತವರು ನೆಲದಲ್ಲಿ ಅತಿ ಹೆಚ್ಚು ಸೋಲು ಕಂಡ ಮೂರನೇ ತಂಡವಾಗಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ಇದುವರೆಗೆ 38 ಪಂದ್ಯಗಳಲ್ಲಿ ಕೆಕೆಆರ್ ಸೋತಿದೆ. ಕೆಕೆಆರ್ ಕೋಲ್ಕತ್ತಾದಲ್ಲಿ ಒಟ್ಟು 91 ಪಂದ್ಯಗಳನ್ನು ಆಡಿದೆ.
icon

(4 / 6)

(AFP)

ಮುಂಬೈ ಇಂಡಿಯನ್ಸ್ ದಾಖಲೆ ಕೂಡ ಕೆಟ್ಟದಾಗಿದೆ: ಈ ಪಟ್ಟಿಯಲ್ಲಿ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ಸೇರಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇದುವರೆಗೆ ಒಟ್ಟು 84 ಪಂದ್ಯಗಳನ್ನು ಆಡಿದ್ದು, 34 ಪಂದ್ಯಗಳಲ್ಲಿ ಸೋತಿದೆ.
icon

(5 / 6)

ಪಂಜಾಬ್ ಕಿಂಗ್ಸ್ ತಂಡವು ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಆಡಿದ ಸುಮಾರು 50 ಪ್ರತಿಶತ ಪಂದ್ಯಗಳನ್ನು ಸೋತಿದೆ. ಮೊಹಾಲಿಯಲ್ಲಿ ಪಂಜಾಬ್ 61 ಪಂದ್ಯಗಳಲ್ಲಿ 30ರಲ್ಲಿ ಸೋತಿದೆ.
icon

(6 / 6)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು