ಎಸ್​ಆರ್​​ಹೆಚ್​ ಮಣಿಸಿ ಅಗ್ರಸ್ಥಾನಕ್ಕೇರುವ ತವಕದಲ್ಲಿ ಆರ್​ಸಿಬಿ; ಪ್ರಮುಖ ಪಂದ್ಯದ 10 ಮುಖ್ಯಾಂಶಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಸ್​ಆರ್​​ಹೆಚ್​ ಮಣಿಸಿ ಅಗ್ರಸ್ಥಾನಕ್ಕೇರುವ ತವಕದಲ್ಲಿ ಆರ್​ಸಿಬಿ; ಪ್ರಮುಖ ಪಂದ್ಯದ 10 ಮುಖ್ಯಾಂಶಗಳು

ಎಸ್​ಆರ್​​ಹೆಚ್​ ಮಣಿಸಿ ಅಗ್ರಸ್ಥಾನಕ್ಕೇರುವ ತವಕದಲ್ಲಿ ಆರ್​ಸಿಬಿ; ಪ್ರಮುಖ ಪಂದ್ಯದ 10 ಮುಖ್ಯಾಂಶಗಳು

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್​ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಪಂದ್ಯದ ಪ್ರಮುಖ 10 ಅಂಶಗಳನ್ನು ಮುಂದೆ ನೋಡೋಣ.

1. ಸನ್​ರೈಸರ್ಸ್ ಹೈದರಾಬಾದ್ ಪಾಲಿಗೆ ಇದು ಕೇವಲ ಔಪಚಾರಿಕ ಪಂದ್ಯವಷ್ಟೆ. ಆದರೆ ಆರ್​​ಸಿಬಿಗೆ ಮಹತ್ವದ ಪಂದ್ಯ. ಏಕೆಂದರೆ ಅಂಕ ಪಟ್ಟಿಯಲ್ಲಿ ಅಗ್ರ 2ರಲ್ಲಿ ಉಳಿಯಬೇಕಿರುವುದು ಅನಿವಾರ್ಯ. ಅಂದರೆ ಮೊದಲ ಎರಡು ತಂಡಗಳು ಮೊದಲ ಕ್ವಾಲಿಫೈಯರ್​​ನಲ್ಲಿ ಸೆಣಸಾಟ ನಡೆಸಲಿದ್ದು, ಸೋತ ಯಾವುದೇ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಹೀಗಾಗಿ ಆರ್​ಸಿಬಿ ಅಗ್ರ-2ರೊಳಗೆ ಉಳಿಯಲು ನಿರ್ಧರಿಸಿದೆ.
icon

(1 / 10)

2. ಇದು ಸಾಧ್ಯವಾಗಬೇಕೆಂದರೆ ಆರ್​ಸಿಬಿ, ಎಸ್​ಆರ್​ಹೆಚ್​ ವಿರುದ್ಧ ಗೆಲ್ಲುವುದರ ಜೊತೆಗೆ ಅಂತಿಮ ಲೀಗ್​ ಪಂದ್ಯದಲ್ಲೂ ಎಲ್​ಎಸ್​ಜಿ ವಿರುದ್ಧ ಜಯಿಸಬೇಕು. ಮತ್ತೊಂದೆಡೆ ತನಗೆ ಸ್ಪರ್ಧಿಯಾದ ಮತ್ತು ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಪಂಜಾಬ್​ ತಂಡದ ಸೋಲಿಗೂ ಆರ್​ಸಿಬಿ ಪ್ರಾರ್ಥಿಸಬೇಕಾಗುತ್ತದೆ. ಮತ್ತೊಂದೆಡೆ ಆರ್​ಸಿಬಿ ಉಳಿದ ಎರಡಲ್ಲೂ ಸೋತರೆ, ಮುಂಬೈ ಉಳಿದೊಂದನ್ನೂ ಗೆದ್ದರೆ ಅಗ್ರ-2ರೊಳಗೆ ಪ್ರವೇಶಿಸುವ ಕನಸು ಭಗ್ನವಾಗಬಹುದು.
icon

(2 / 10)

3. ಆರ್​ಸಿಬಿ ಮತ್ತು ಎಸ್​ಆರ್​ಹೆಚ್​ ಐಪಿಎಲ್ ಇತಿಹಾಸದಲ್ಲಿ ಒಟ್ಟು 25 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆದರೆ ಮುಖಾಮುಖಿಯಲ್ಲಿ ಆರೆಂಜ್ ಆರ್ಮಿ ತಂಡವೇ ಮೇಲುಗೈ ಸಾಧಿಸಿದೆ. ಆರ್​ಸಿಬಿ 11 ಗೆಲುವು, ಎಸ್​ಆರ್​ಹೆಚ್​ 13 ಜಯ ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ. ಕಳೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಆರ್​ಸಿಬಿ 3 ಗೆಲುವು, ಎಸ್​ಆರ್​​ಹೆಚ್​ 2 ಜಯ ಸಾಧಿಸಿದೆ.
icon

(3 / 10)

4. ಎಸ್​ಆರ್​​ಹೆಚ್​ ಆರ್​ಸಿಬಿ ವಿರುದ್ಧ ಅತಿ ದೊಡ್ಡ ದಾಖಲೆ ಹೊಂದಿದೆ. ಕಳೆದ ಐಪಿಎಲ್​ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಬೆಂಗಳೂರು ವಿರುದ್ಧ ಸಾರ್ವಕಾಲಿಕ ಮೊತ್ತ ದಾಖಲಿಸಿತ್ತು. ಅಂದು ಹೈದರಾಬಾದ್​ 287 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಗಳಿಸಿರುವ ಗರಿಷ್ಠ ಮೊತ್ತ. ಇದಕ್ಕೆ ಪ್ರತ್ಯುತ್ತರವಾಗಿ ಆರ್​ಸಿಬಿ 262 ರನ್ ಗಳಿಸಿ ಪೈಪೋಟಿ ನೀಡಿತ್ತು.
icon

(4 / 10)

5. ಅಚ್ಚರಿ ಏನೆಂದರೆ ಹವಾಮಾನ ವೈಪರಿತ್ಯ ಕಾರಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಲಕ್ನೋದ ಏಕನಾ ಕ್ರಿಕೆಟ್ ಮೈದಾನಕ್ಕೆ ಸ್ಥಳಾಂತರಿಸಿದೆ. ಈ ಇಲ್ಲಿನ ಪಿಚ್ ಬ್ಯಾಟರ್​ಗಳು ಮತ್ತು ಬೌಲರ್​​ಗಳಿಗೆ ಇಬ್ಬರಿಗೂ ನೆರವಾಗಲಿದೆ. ಇದೇ ಮೈದಾನದಲ್ಲಿ ಆರ್​ಸಿಬಿ ತನ್ನ ಕೊನೆಯ ಲೀಗ್ ಪಂದ್ಯವನ್ನೂ ಆಡಲಿದೆ. ಆದರೆ ಈ ಪಂದ್ಯಕ್ಕೆ ಯಾವುದೇ ಮಳೆ ಅಡ್ಡಿಪಡಿಸುವುದಿಲ್ಲ.
icon

(5 / 10)

6. ಪ್ರಸ್ತುತ ಆರ್​​ಸಿಬಿ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು, 3 ಸೋತಿದೆ. 1 ಪಂದ್ಯ ಡ್ರಾಗೊಂಡಿದೆ. ಒಟ್ಟು 17 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಎಸ್​ಆರ್​​ಹೆಚ್​ 12 ಪಂದ್ಯಗಳಲ್ಲಿ 4 ಗೆಲುವು, 7 ಸೋಲು ಮತ್ತು 1 ಪಂದ್ಯ ಡ್ರಾನೊಂದಿಗೆ 9 ಅಂಕ ಗಳಿಸಿದೆ. ಇದು ಕಳೆದ ವರ್ಷ ರನ್ನರ್​ಅಪ್ ಆಗಿತ್ತು.
icon

(6 / 10)

7. ಹೇಜಲ್​ವುಡ್ ಇನ್ನೂ ತಂಡಕ್ಕೆ ಮರಳಿಲ್ಲ. ಆದರೆ ಪ್ರಸ್ತುತ ತಂಡದ ಎಲ್ಲಾ ಸದಸ್ಯರು ಲಭ್ಯವಿದೆ. ದೇವದತ್ ಪಡಿಕ್ಕಲ್ ಗಾಯದ ನಂತರ ಆರ್‌ಸಿಬಿ ತಮ್ಮ 3ನೇ ಸ್ಥಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅನುಭವಿ ಮಯಾಂಕ್ ಅಗರ್ವಾಲ್ ಅವರು ತಂಡಕ್ಕೆ ಆಯ್ಕೆಯಾಗುವ ಸೂಚನೆಗಳಿವೆ.
icon

(7 / 10)

8. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಭವನೀಯ): ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಲುಂಗಿ ಎನ್​ಗಿಡಿ, ಸುಯಾಶ್ ಶರ್ಮಾ.
icon

(8 / 10)

9. ಹೆಡ್ ಫಿಟ್ ಆಗಿದ್ದಾರೆಂದು ಘೋಷಿಸಲಾಗಿದ್ದು, ಆಡುವ 11ಕ್ಕೆ ಮರಳುವ ಸಾಧ್ಯತೆ ಇದೆ. ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಜಯದೇವ್ ಉನಾದ್ಕಟ್ ಕೂಡ ತಂಡಕ್ಕೆ ಮರಳಿದ್ದಾರೆ.
icon

(9 / 10)

10. ಸನ್ ರೈಸರ್ಸ್ ಹೈದರಾಬಾದ್ (ಸಂಭಾವ್ಯ):  ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಹರ್ಷ್ ದುಬೆ, ಇಶಾನ್ ಮಲಿಂಗ, ಜಯದೇವ್ ಉನಾದ್ಕಟ್.
icon

(10 / 10)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು