ದಾಖಲೆಗಳ ಬೇಟೆ ಆರಂಭಿಸಿದ ಸನ್ರೈಸರ್ಸ್ ಹೈದರಾಬಾದ್; ಪವರ್ಪ್ಲೇನಲ್ಲಿ ಮತ್ತೊಂದು ಗರಿಷ್ಠ ಸ್ಕೋರ್
- 2025ರ ಐಪಿಎಲ್ ಅನ್ನು ಅದ್ಧೂರಿಯಾಗಿ ಆರಂಭಿಸಿದ ಸನ್ರೈಸರ್ಸ್ ಹೈದರಾಬಾದ್, ದಾಖಲೆಗಳ ಬೇಟೆ ಆರಂಭಿಸಿದೆ. ಪವರ್ಪ್ಲೇನಲ್ಲಿ ಮತ್ತೊಂದು ದಾಖಲೆಯನ್ನು ಬರೆಯುವಲ್ಲಿ ಯಶಸ್ವಿಯಾಗಿದೆ.
- 2025ರ ಐಪಿಎಲ್ ಅನ್ನು ಅದ್ಧೂರಿಯಾಗಿ ಆರಂಭಿಸಿದ ಸನ್ರೈಸರ್ಸ್ ಹೈದರಾಬಾದ್, ದಾಖಲೆಗಳ ಬೇಟೆ ಆರಂಭಿಸಿದೆ. ಪವರ್ಪ್ಲೇನಲ್ಲಿ ಮತ್ತೊಂದು ದಾಖಲೆಯನ್ನು ಬರೆಯುವಲ್ಲಿ ಯಶಸ್ವಿಯಾಗಿದೆ.
(1 / 9)
ಸನ್ರೈಸರ್ಸ್ ಹೈದರಾಬಾದ್ 2025ರ ಐಪಿಎಲ್ ಟೂರ್ನಿಯನ್ನು ಅದ್ದೂರಿಯಾಗಿ ಆರಂಭಿಸಿದೆ. ಮಾರ್ಚ್ 23ರ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದಲೇ ದಾಖಲೆ ಬೇಟೆ ಆರಂಭಿಸಿದೆ.
(PTI)(2 / 9)
ಸುನಾಮಿ ಬ್ಯಾಟಿಂಗ್ಗೆ ಹೆಸರುವಾಸಿಯಾದ ಸನ್ರೈಸರ್ಸ್ ನೂತನ ಆವೃತ್ತಿಯ ಮೊದಲ ಪಂದ್ಯದಲ್ಲೇ ವಿಶೇಷ ದಾಖಲೆ ನಿರ್ಮಿಸಿದೆ. ಪವರ್ ಪ್ಲೇ ಅಂದರೆ ಮೊದಲ 6 ಓವರ್ಗಳಲ್ಲಿ ಹೈದರಾಬಾದ್ 94/1 ಸ್ಕೋರ್ ಮಾಡಿದ್ದು, ಪಂಜಾಬ್ ದಾಖಲೆ ಮುರಿದು 5ನೇ ಸ್ಥಾನಕ್ಕೆ ಏರಿದೆ.
(REUTERS)(3 / 9)
ಇದು ಐಪಿಎಲ್ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ದಾಖಲಾದ ಐದನೇ ಅತಿ ದೊಡ್ಡ ಮೊತ್ತವಾಗಿದೆ. ಅಲ್ಲದೆ, ಟಾಪ್-5ನಲ್ಲಿ ಹೈದರಾಬಾದ್ ತಂಡವೇ ಮೂರು ಸ್ಥಾನ ಪಡೆದಿರುವುದು ವಿಶೇಷ.
(AFP)(4 / 9)
2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 6 ಓವರ್ಗಳಲ್ಲಿ 125/0 ಸ್ಕೋರ್ ಮಾಡುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆ ಹೊಂದಿದೆ.
(REUTERS)(5 / 9)
ಪವರ್ಪ್ಲೇನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದವರ ಪಟ್ಟಿಯಲ್ಲಿ ಸನ್ರೈಸರ್ಸ್ 2ನೇ ಸ್ಥಾನದಲ್ಲಿದೆ. ಆರಂಭಿಕ ಆಟಗಾರರಾದ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಆರ್ಭಟದಿಂದ ತಂಡವು 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 107/0 ಸ್ಕೋರ್ ಮಾಡಿತ್ತು.
(AP)(6 / 9)
ಕೆಕೆಆರ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 2017ರಲ್ಲಿ ಆರ್ಸಿಬಿ ವಿರುದ್ಧ ಪವರ್ಪ್ಲೇನಲ್ಲಿ 105 ರನ್ ಗಳಿಸಿತ್ತು. ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆದಿತ್ತು.
(REUTERS)(7 / 9)
ನಾಲ್ಕನೇ ಸ್ಥಾನದಲ್ಲಿರುವ ಸಿಎಸ್ಕೆ 2014ರಲ್ಲಿ ಪಂಜಾಬ್ ಕಿಂಗ್ಸ್ ಎದುರು 100/2 ಸ್ಕೋರ್ ಮಾಡಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ಜರುಗಿತ್ತು.
(PTI)(8 / 9)
ಇದೀಗ ಐದನೇ ಸ್ಥಾನಕ್ಕೆ ಜಂಪ್ ಆಗಿರುವ ಹೈದರಾಬಾದ್ ತಂಡವು ಆರ್ಆರ್ ವಿರುದ್ಧ ಪವರ್ಪ್ಲೇನಲ್ಲಿ 94/1 ರನ್ ಗಳಿಸಿದೆ. ಇದಕ್ಕೂ ಈ ಸ್ಥಾನದಲ್ಲಿ ಪಂಜಾಬ್ ಇತ್ತು. 2024ರಲ್ಲಿ ಕೆಕೆಆರ್ ವಿರುದ್ಧ 93/1 ರನ್ ಗಳಿಸಿತ್ತು.
(PTI)ಇತರ ಗ್ಯಾಲರಿಗಳು