ಐಪಿಎಲ್ 18ನೇ ಆವೃತ್ತಿಗೆ ಅದ್ಧೂರಿ ಚಾಲನೆ; ದಿಶಾ ಡಾನ್ಸ್, ಶ್ರೇಯಾ ಸಾಂಗ್‌, ಮಿಂಚಿದ ಶಾರುಖ್, ಕೊಹ್ಲಿ -Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ 18ನೇ ಆವೃತ್ತಿಗೆ ಅದ್ಧೂರಿ ಚಾಲನೆ; ದಿಶಾ ಡಾನ್ಸ್, ಶ್ರೇಯಾ ಸಾಂಗ್‌, ಮಿಂಚಿದ ಶಾರುಖ್, ಕೊಹ್ಲಿ -Photos

ಐಪಿಎಲ್ 18ನೇ ಆವೃತ್ತಿಗೆ ಅದ್ಧೂರಿ ಚಾಲನೆ; ದಿಶಾ ಡಾನ್ಸ್, ಶ್ರೇಯಾ ಸಾಂಗ್‌, ಮಿಂಚಿದ ಶಾರುಖ್, ಕೊಹ್ಲಿ -Photos

  • ಐಪಿಎಲ್‌ 18ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಕೆಕೆಆರ್‌ ತಂಡದ ಮಾಲೀಕ ಶಾರುಖ್ ಖಾನ್ ಉದ್ಘಾಟನಾ ಸಮಾರಂಭ ನಡೆಸಿಕೊಟ್ಟರು. ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸ್ಟಾರ್‌ ಸೆಲೆಬ್ರಿಟಿಗಳು ಕಾಣಿಸಿಕೊಂಡರು. ಶ್ರೇಯಾ ಘೋಷಾಲ್‌, ದಿಶಾ ಪಟಾನಿ, ಕರಣ್ ಔಜ್ಲಾ ಮನರಂಜನಾ ಕಾರ್ಯಕ್ರಮ ನೀಡಿದರು.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಶಾರುಖ್‌ ಖಾನ್‌ ಅವರು ವಿರಾಟ್‌ ಕೊಹ್ಲಿಯನ್ನು ವೇದಿಕೆಗೆ ಕರೆತಂದರು. ಈ ಬಾರಿ 18ನೇ ಆವೃತ್ತಿಯ ಐಪಿಎಲ್‌ ನಡೆಯುತ್ತಿದೆ. ವಿರಾಟ್‌ ಕೊಹ್ಲಿ ಈ ಎಲ್ಲಾ ಆವೃತ್ತಿಗಳಲ್ಲೂ ಆಡಿರುವುದು ವಿಶೇಷ, ಅಲ್ಲದೆ ವಿರಾಟ್‌ ಜೆರ್ಸಿ ಸಂಖ್ಯೆಯೂ 18.
icon

(1 / 8)

(REUTERS)

ವಿರಾಟ್‌ ಕೊಹ್ಲಿ ಮತ್ತು ಶಾರುಖ್‌ ಖಾನ್‌ ಒಟ್ಟಿಗೆ ಡಾನ್ಸ್‌ ಮಾಡಿ ಸಂಭ್ರಮಿಸಿದ್ದಾರೆ, ಇದಕ್ಕೂ ಮುನ್ನ ರಿಂಕು ಸಿಂಗ್‌ ಜೊತೆಗೂ ಶಾರುಖ್‌ ಡಾನ್ಸ್‌ ಮಾಡಿದರು.
icon

(2 / 8)

ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಗಾಯಕಿ ಶ್ರೇಯಾ ಘೋಷಾಲ್‌ ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
icon

(3 / 8)

ನಟಿ ದಿಶಾ ಪಟಾನಿ ಅವರ ನೃತ್ಯ ಅಭಿಮಾನಿಗಳ ಮನಸೂರೆಗೆದ್ದಿತು. ಶ್ವೇತವಸ್ತ್ರ ಧರಿಸಿ ಸೊಂಟ ಬಳುಕಿಸಿ ಐಪಿಎಲ್‌ ಉದ್ಘಾಟನಾ ವೇದಿಕೆಯಲ್ಲಿ ದಿಶಾ ಕುಣಿದರು,
icon

(4 / 8)

ಶ್ರೇಯಾ ಘೋಷಾಲ್ ಅವರು ಪಿಟೀಲು ವಾದಕರು ಮತ್ತು ಗಾಯಕರ ತಂಡದೊಂದಿಗೆ ಹಾಡಿ ರಂಜಿಸಿದರು. ಸಾರ್ವಕಾಲಿಕ ಜನಪ್ರಿಯ ಗೀತೆ 'ವಂದೇ ಮಾತರಂ' ನೊಂದಿಗೆ ತಮ್ಮ ಪ್ರದರ್ಶನವನ್ನು ಮುಕ್ತಾಯಗೊಳಿಸಿದರು.
icon

(5 / 8)

ಬಾಘಿ 3 ಜನಪ್ರಿಯ ಗೀತೆಗೆ ದಿಶಾ ಹೆಜ್ಜೆ ಹಾಕಿದರು.
icon

(6 / 8)

ಬಾಘಿ 3 ಜನಪ್ರಿಯ ಗೀತೆಗೆ ದಿಶಾ ಹೆಜ್ಜೆ ಹಾಕಿದರು.
(REUTERS)

ಕರಣ್ ಔಜ್ಲಾ ಅವರ ಜನಪ್ರಿಯ 'ತೌಬಾ-ತೌಬಾ' ಹಾಡು ಈಡನ್ ಗಾರ್ಡನ್ಸ್‌ನಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಯ್ತು. ಪಂಜಾಬಿ ಪಾಪ್ ತಾರೆಗೆ ಭಾರತದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಇವರು ಐಪಿಎಲ್‌ ಉದ್ಘಾಟನಾ ಸಮಾರಂಭದ ವೇದಿಕೆಗೆ ಇನ್ನಷ್ಟು ಜೋಶ್‌ ತುಂಬಿದರು.
icon

(7 / 8)

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ, ಲೀಗ್‌ನ 18ನೇ ಆವೃತ್ತಿಯ ವಿಶೇಷಾರ್ಥವಾಗಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕೇಕ್ ಕತ್ತರಿಸಿದರು.
icon

(8 / 8)

(PTI)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು