ಆಸ್ಟ್ರೇಲಿಯಾದಲ್ಲಿ 46 ವರ್ಷ ಹಳೆಯ ಟೆಸ್ಟ್ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ; ಬಿಶನ್ ಸಿಂಗ್ ಬೇಡಿ ರೆಕಾರ್ಡ್‌ ಬ್ರೇಕ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಸ್ಟ್ರೇಲಿಯಾದಲ್ಲಿ 46 ವರ್ಷ ಹಳೆಯ ಟೆಸ್ಟ್ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ; ಬಿಶನ್ ಸಿಂಗ್ ಬೇಡಿ ರೆಕಾರ್ಡ್‌ ಬ್ರೇಕ್

ಆಸ್ಟ್ರೇಲಿಯಾದಲ್ಲಿ 46 ವರ್ಷ ಹಳೆಯ ಟೆಸ್ಟ್ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ; ಬಿಶನ್ ಸಿಂಗ್ ಬೇಡಿ ರೆಕಾರ್ಡ್‌ ಬ್ರೇಕ್

  • ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ದಾಖಲೆಗಳ ಸರಮಾಲೆ ಮುಂದುವರೆಸಿದ್ದಾರೆ. ಭಾರತ ತಂಡದ ಹಂಗಾಮಿ ನಾಯಕ, ಆಸೀಸ್ ವಿರುದ್ಧದ 5ನೇ ಟೆಸ್ಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕಾಂಗರೂ ನಾಡಿನಲ್ಲಿ ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ರೆಕಾರ್ಡ್‌ ಮಾಡಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದ 2ನೇ ದಿನದಂದು ಬುಮ್ರಾ ಈ ಸಾಧನೆ ಮಾಡಿದ್ದಾರೆ. ಎರಡನೇ ದಿನದಾಟದ ಆರಂಭದಲ್ಲೇ ತಮ್ಮ ಎರಡನೇ ಓವರ್‌ನಲ್ಲಿ ಮಾರ್ನಸ್ ಲಬುಶೇನ್‌ ಅವರನ್ನು ಔಟ್ ಮಾಡಿದ ಬುಮ್ರಾ, ಈ ಐತಿಹಾಸಿಕ ದಾಖಲೆ ನಿರ್ಮಿಸಿದರು.
icon

(1 / 10)

(AP)

ಲಬುಶೇನ್‌ ಅವರ ಬ್ಯಾಟ್‌ನಿಂದ ಎಡ್ಜ್‌ ಆದ ಚೆಂಡು ಸ್ಟಂಪ್‌ನ ಹಿಂದಿದ್ದ ರಿಷಬ್ ಪಂತ್ ಕೈಸೇರಿತು. ಆನ್-ಫೀಲ್ಡ್ ಅಂಪೈರ್ ಔಟ್‌ ನೀಡಲಿಲ್ಲ. ಈ ವೇಳೆ ಡಿಆರ್‌ಎಸ್‌ ಮೂಲಕ ಮೂರನೇ ಅಂಪೈರ್ ಜೋಯಲ್ ವಿಲ್ಸನ್  ಔಟ್‌ ಎಂಬುದನ್ನು ಖಚಿತಪಡಿಸಿದರು.
icon

(2 / 10)

(AFP)

ಬುಮ್ರಾ, ಇನ್ನಿಂಗ್ಸ್‌ನ ಎರಡನೇ ವಿಕೆಟ್ ಪಡೆಯುವುದರೊಂದಿಗೆ, ಪ್ರಸಕ್ತ ಸರಣಿಯಲ್ಲಿ ತಮ್ಮ ವಿಕೆಟ್‌ಗಳ ಸಂಖ್ಯೆಯನ್ನು 32ಕ್ಕೇರಿಸಿದರು. ಇದು ಆಸ್ಟ್ರೇಲಿಯಾದಲ್ಲಿ ಒಂದೇ ಸರಣಿಯಲ್ಲಿ ಭಾರತೀಯ ಬೌಲರ್‌ ಒಬ್ಬರು ಪಡೆದ ಅತ್ಯಧಿಕ ವಿಕೆಟ್‌ಗಳಾಗಿವೆ.
icon

(3 / 10)

ಇದರೊಂದಿಗೆ ಬುಮ್ರಾ ಹೊಸ ದಾಖಲೆ ಮಾಡಿದ್ದಾರೆ. 1977-78ರ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ 31 ವಿಕೆಟ್‌ಗಳನ್ನು ಕಬಳಿಸಿದ್ದ ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಅವರನ್ನು ಹಿಂದಿಕ್ಕಿದ್ದಾರೆ.
icon

(4 / 10)

ಇದಕ್ಕೂ ಮೊದಲು, ಪಂದ್ಯದ ಮೊದಲ ದಿನದಾಟದ ಕೊನೆಯ ಎಸೆತದಲ್ಲಿ ಉಸ್ಮಾನ್ ಖವಾಜಾ ಅವರನ್ನು ಬುಮ್ರಾ ಔಟ್ ಮಾಡಿದ್ದರು. ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಅವರೊಂದಿಗಿನ ಮಾತಿನ ಚಕಮಕಿ ನಂತರ ಆಸ್ಟ್ರೇಲಿಯನ್ ಓಪನರ್ ಬುಮ್ರಾ ಹೆಣೆದ ಬಲೆಗೆ ಬಿದ್ದರು.
icon

(5 / 10)

ಆಸೀಸ್‌ ನೆಲದಲ್ಲಿ ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ದಾಖಲೆ ಈಗ ಬುಮ್ರಾ ಹೆಸರಿನಲ್ಲಿದೆ. 31 ವಿಕೆಟ್‌ ಪಡೆದ ಬಿಶನ್ ಬೇಡಿ ಎರಡನೇ ಸ್ಥಾನದಲ್ಲಿದ್ದಾರೆ.
icon

(6 / 10)

1977/78ರಲ್ಲಿ 28 ವಿಕೆಟ್‌ ಪಡೆದ ಬಿ.ಎಸ್.ಚಂದ್ರಶೇಖರ್ ಮೂರನೇ ಸ್ಥಾನದಲ್ಲಿದ್ದರೆ, 1967/68ರ ಸರಣಿಯಲ್ಲಿ 25 ವಿಕೆಟ್‌ ಪಡೆದ ಇಎಎಸ್ ಪ್ರಸನ್ನ ನಾಲ್ಕನೇ ಸ್ಥಾನ ಪಡೆದಿದ್ದಾರೆ.  1991/92ರ ಸರಣಿ ವೇಳೆ 25 ವಿಕೆಟ್‌ ಪಡೆದ ಕಪಿಲ್ ದೇವ್ ಐದನೇ ಸ್ಥಾನ ಪಡೆದಿದ್ದಾರೆ.
icon

(7 / 10)

ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಬುಮ್ರಾ, ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ಪ್ರಸ್ತುತ 907 ರೇಟಿಂಗ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಟೆಸ್ಟ್‌ ಇತಿಹಾಸದಲ್ಲೇ ಭಾರತೀಯ ಬೌಲರ್‌ ಒಬ್ಬರು ಪಡೆದ ಅತ್ಯುತ್ತಮ ಶ್ರೇಯಾಂಕವಾಗಿದೆ.
icon

(8 / 10)

2024ರ ವರ್ಷವನ್ನು ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳೊಂದಿಗೆ ಮುಗಿಸಿದರು. 13 ಪಂದ್ಯಗಳ 26 ಇನ್ನಿಂಗ್ಸ್‌ಗಳಿಂದ 14.92ರ ಸರಾಸರಿಯಲ್ಲಿ 5 ಬಾರಿ ಐದು ವಿಕೆಟ್‌ಗಳ ಸಾಧನೆಯೊಂದಿಗೆ 71 ವಿಕೆಟ್‌ಗಳನ್ನು ಪಡೆದಿದ್ದಾರೆ.
icon

(9 / 10)

ಪ್ರಸಕ್ತ ಕ್ಯಾಲೆಂಡರ್‌ ವರ್ಷದಲ್ಲೂ ಬುಮ್ರಾ ತಮ್ಮ ಫಾರ್ಮ್ ಮುಂದುವರೆಸಲು ಉತ್ಸುಕರಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ ರೇಸ್‌ನಲ್ಲಿ ಉಳಿಯಲು ಭಾರತಕ್ಕೆ ಸಿಡ್ನಿ ಟೆಸ್ಟ್‌ ಗೆಲುವು ಅಗತ್ಯವಿದೆ.
icon

(10 / 10)

ಇತರ ಗ್ಯಾಲರಿಗಳು