ಎಂಸಿಜಿಯಲ್ಲಿ ಜಸ್ಪ್ರೀತ್ ಬುಮ್ರಾ ದಾಖಲೆ ಮೇಲೆ ದಾಖಲೆ; ವೇಗದ 200 ವಿಕೆಟ್ ಸಾಧನೆ, ಕಪಿಲ್ ದೇವ್ ರೆಕಾರ್ಡ್ ಬ್ರೇಕ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಂಸಿಜಿಯಲ್ಲಿ ಜಸ್ಪ್ರೀತ್ ಬುಮ್ರಾ ದಾಖಲೆ ಮೇಲೆ ದಾಖಲೆ; ವೇಗದ 200 ವಿಕೆಟ್ ಸಾಧನೆ, ಕಪಿಲ್ ದೇವ್ ರೆಕಾರ್ಡ್ ಬ್ರೇಕ್

ಎಂಸಿಜಿಯಲ್ಲಿ ಜಸ್ಪ್ರೀತ್ ಬುಮ್ರಾ ದಾಖಲೆ ಮೇಲೆ ದಾಖಲೆ; ವೇಗದ 200 ವಿಕೆಟ್ ಸಾಧನೆ, ಕಪಿಲ್ ದೇವ್ ರೆಕಾರ್ಡ್ ಬ್ರೇಕ್

  • ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿಯಲ್ಲಿ‌ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ, ಆಸ್ಟ್ರೇಲಿಯಾ ಬ್ಯಾಟರ್‌ಗಳಿಗೆ ಮಾರಕವಾಗುತ್ತಿದ್ದಾರೆ. ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಮೇಲಿಂದ ಮೇಲೆ ವಿಕೆಟ್‌ ಕಬಳಿಸಿರುವ ಬುಮ್ರಾ, ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರೊಂದಿಗೆ ದಿಗ್ಗಜ ಕ್ರಿಕೆಟಿಗ ಕಪಿಲ್‌ ದೇವ್‌ ದಾಖಲೆಯನ್ನು ಬ್ರೇಕ್‌ ಮಾಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ಮೊದಲ ವಿಕೆಟ್‌ ಪಡೆಯುವುದರೊಂದಿಗೆ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರ 32 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ಆ ಬಳಿಕ ಮೂರನೇ ವಿಕೆಟ್‌ ಪಡೆದು ಟೆಸ್ಟ್‌ನಲ್ಲಿ ಒಟ್ಟು 200 ವಿಕೆಟ್‌ ಸಾಧನೆ ಪೂರ್ಣಗೊಳಿಸಿದ್ದಾರೆ.
icon

(1 / 6)

(AFP)

ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ ಆರಂಭದಲ್ಲಿ ಬುಮ್ರಾ ಅವರು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಸ್ಯಾಮ್ ಕಾನ್ಸ್ಟಾಸ್ ವಿಕೆಟ್‌ ಪಡೆದರು. ಇದು ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಅವರ 26ನೇ ವಿಕೆಟ್. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದರೆ, ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಬೇರೆ ಯಾವುದೇ ಭಾರತೀಯ ವೇಗಿ ಇಷ್ಟು ವಿಕೆಟ್ ಪಡೆದಿಲ್ಲ. 
icon

(2 / 6)

(BCCI)

ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಕಪಿಲ್ ದೇವ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. 1991-92ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಒಟ್ಟು 25 ವಿಕೆಟ್‌ ಪಡೆದರು. ಕಪಿಲ್ 10 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.
icon

(3 / 6)

ಇದೇ ವೇಳೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬುಮ್ರಾ 200 ವಿಕೆಟ್‌ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಅತಿ ವೇಗವಾಗಿ 200 ವಿಕೆಟ್‌ ಕಬಳಿಸಿದ ಭಾರತೀಯ ವೇಗಿ ಎಂಬ ದಾಖಲೆ ಬರೆದಿದ್ದಾರೆ. ತಾವು ಆಡಿದ 44ನೇ ಟೆಸ್ಟ್‌ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
icon

(4 / 6)

ಟೆಸ್ಟ್‌ ಪಂದ್ಯಗಳ ಸಂಖ್ಯೆಗೆ ಸಂಬಂಧಿಸಿದಂತೆ, ಭಾರತದ ಪರ ವೇಗವಾಗಿ 200 ವಿಕೆಟ್‌ ಪಡೆದವರಲ್ಲಿ ಆರ್ ಅಶ್ವಿನ್ (38) ಮಾತ್ರ ಬುಮ್ರಾಗಿಂತ ಮುಂದಿದ್ದಾರೆ. ರವೀಂದ್ರ ಜಡೇಜಾ ಕೂಡ 44 ಟೆಸ್ಟ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.
icon

(5 / 6)

ಎಸೆದ ಬಾಲ್‌ಗಳ ಸಂಖ್ಯೆಯಿಂದ ವೇಗವಾಗಿ 200 ವಿಕೆಟ್‌ ಪಡೆದವರಲ್ಲಿ ಬುಮ್ರಾ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ 8484 ಎಸೆತಗಳಲ್ಲಿ 200 ವಿಕೆಟ್‌ ಪೂರ್ಣಗೊಳಿಸಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ 7725 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
icon

(6 / 6)

(AP)

ಇತರ ಗ್ಯಾಲರಿಗಳು