ಸಿಡ್ನಿ ಟೆಸ್ಟ್: 52 ವರ್ಷಗಳ ಹಿಂದೆ ಸೃಷ್ಟಿಸಿದ್ದ ಬಿಎಸ್ ಚಂದ್ರಶೇಖರ್ ದಾಖಲೆ ಮೇಲೆ ಕಣ್ಣಿಟ್ಟ ಜಸ್ಪ್ರೀತ್ ಬುಮ್ರಾ
Most Wickets in Test Series: ಅಂತಾರಾಷ್ಟ್ರೀಯ ಕ್ರಿಕೆಟ್ನ ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತದ ಬಿಎಸ್ ಚಂದ್ರಶೇಖರ್ ಅವರ 52 ವರ್ಷಗಳ (1972-73ರಲ್ಲಿ ಇಂಗ್ಲೆಂಡ್ ವಿರುದ್ಧ) ಹಿಂದಿನ ದಾಖಲೆ ಮುರಿಯಲು ಜಸ್ಪ್ರೀತ್ ಬುಮ್ರಾ ಸಜ್ಜಾಗಿದ್ದಾರೆ.
(1 / 6)
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 30 ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾ ಇದೀಗ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ವಿಶೇಷ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.
(AP)(2 / 6)
ಬುಮ್ರಾ ಭಾರತೀಯ ಬೌಲರ್ ಆಗಿ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯ ಈ ದಾಖಲೆ ಬಿಎಸ್ ಚಂದ್ರಶೇಖರ್ ಹೆಸರಿನಲ್ಲಿದೆ.
(PTI)(3 / 6)
ಭಾರತದ ಲೆಗ್ ಸ್ಪಿನ್ನರ್ ಬಿಎಸ್ ಚಂದ್ರಶೇಖರ್ ಅವರು 1972-73ರಲ್ಲಿ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳಲ್ಲಿ 35 ವಿಕೆಟ್ ಪಡೆದಿದ್ದರು. ಕಳೆದ 52 ವರ್ಷಗಳಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆ ಹೊಂದಿದ್ದಾರೆ. ಇದೀಗ ಈ ದಾಖಲೆ ಮುರಿಯಲು ಬುಮ್ರಾ ಸಿದ್ದರಾಗಿದ್ದಾರೆ.
(4 / 6)
ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಕಪಿಲ್ ದೇವ್ 2ನೇ ಸ್ಥಾನದಲ್ಲಿದ್ದಾರೆ. 1979-80ರಲ್ಲಿ ಪಾಕಿಸ್ತಾನ ವಿರುದ್ಧದ 6 ಟೆಸ್ಟ್ಗಳಲ್ಲಿ 32 ವಿಕೆಟ್ ಪಡೆದಿದ್ದಾರೆ. ಸಿಡ್ನಿ ಟೆಸ್ಟ್ನಲ್ಲಿ ಮೂರು ವಿಕೆಟ್ ಪಡೆದರೆ ಕಪಿಲ್ ದಾಖಲೆಯನ್ನು ಬುಮ್ರಾ ಹಿಂದಿಕ್ಕಲಿದ್ದಾರೆ.
(5 / 6)
ಹರ್ಭಜನ್ ಸಿಂಗ್ ಅವರು 2000–01ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅತ್ಯಧಿಕ ವಿಕೆಟ್ ಪಡೆದ ಮೊದಲ ಬೌಲರ್ ಮತ್ತು ಟೆಸ್ಟ್ ಸರಣಿಯಲ್ಲಿ ಅಧಿಕ ವಿಕೆಟ್ ಮೂರನೇ ಬೌಲರ್ ಆಗಿದ್ದಾರೆ. ಅವರು ಈ ಸರಣಿಯಲ್ಲಿ 32 ವಿಕೆಟ್ ಕಬಳಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯಲು ಬುಮ್ರಾಗೆ ಮೂರು ವಿಕೆಟ್ ಅಗತ್ಯ ಇದೆ.
ಇತರ ಗ್ಯಾಲರಿಗಳು