ಆರ್‌ಸಿಬಿ ಸೇರಿದ ಮೊದಲ ವರ್ಷವೇ ನಾಯಕನ ಪಟ್ಟ ಪಡೆದ ಜಿತೇಶ್ ಶರ್ಮಾ; ರಜತ್ ಪಾಟೀದಾರ್ ಇಂಪ್ಯಾಕ್ಟ್ ಪ್ಲೇಯರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್‌ಸಿಬಿ ಸೇರಿದ ಮೊದಲ ವರ್ಷವೇ ನಾಯಕನ ಪಟ್ಟ ಪಡೆದ ಜಿತೇಶ್ ಶರ್ಮಾ; ರಜತ್ ಪಾಟೀದಾರ್ ಇಂಪ್ಯಾಕ್ಟ್ ಪ್ಲೇಯರ್

ಆರ್‌ಸಿಬಿ ಸೇರಿದ ಮೊದಲ ವರ್ಷವೇ ನಾಯಕನ ಪಟ್ಟ ಪಡೆದ ಜಿತೇಶ್ ಶರ್ಮಾ; ರಜತ್ ಪಾಟೀದಾರ್ ಇಂಪ್ಯಾಕ್ಟ್ ಪ್ಲೇಯರ್

ಈ ವರ್ಷವಷ್ಟೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿದ ಕ್ರಿಕೆಟಿಗನನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ 2025ರ ಪಂದ್ಯಕ್ಕೆ ನಾಯಕನಾಗಿ ನೇಮಿಸಲಾಗಿದೆ. ಎಸ್‌ಆರ್‌ಎಚ್‌ ವಿರುದ್ಧ‌ ವಿಕೆಟ್‌ ಕೀಪರ್ ಜಿತೇಶ್ ಶರ್ಮಾ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯಕ್ಕೆ ಆರ್‌ಸಿಬಿ ತಂಡ ನಾಯಕನನ್ನು ಬದಲಾಯಿಸಿದೆ. ರಜತ್ ಪಾಟೀದಾರ್ ತಂಡದಲ್ಲಿದ್ದರೂ, ಬೆಂಗಳೂರು ತಂಡವನ್ನು ಮುನ್ನಡೆಸಲು ಮತ್ತೊಬ್ಬ ಭಾರತೀಯ ತಾರೆ ಬಂದಿದ್ದಾರೆ. ರಜತ್‌ ಗಾಯದಿಂದ ಸಂಪೂರ್ಣ ಸುಧಾರಿಸದ ಕಾರಣಕ್ಕೆ ಈ ನಿರ್ಧಾರ ಬಂದಿದೆ. ಈ ಹಿಂದೆ ಕೇವಲ ಒಂದು ಐಪಿಎಲ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಇರುವ ಕ್ರಿಕೆಟಿಗನಿಗೆ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ. ಫೋಟೋ: ರಾಯಿಟರ್ಸ್.
icon

(1 / 5)

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ 2025ರ ಪಂದ್ಯದಲ್ಲಿ ಜಿತೇಶ್ ಶರ್ಮಾ ಆರ್‌ಸಿಬಿ ಪರ ಟಾಸ್‌ಗೆ ಬಂದರು. ಹಾಗಂತಾ ರಜತ್ ಹೈದರಾಬಾದ್ ವಿರುದ್ಧ ಮೈದಾನಕ್ಕಿಳಿಯುವ ಸ್ಥಿತಿಯಲ್ಲಿಲ್ಲ ಎಂದು ಅಲ್ಲ. ಪಾಟೀದಾರ್ ಇಂಪ್ಯಾಕ್ಟ್‌ ಆಟಗಾರನಾಗಿ ಬ್ಯಾಟಿಂಗ್ ಮಾಡಲಿದ್ದಾರೆ. ಹೀಗಾಗಿ ಅವರ ಬದಲಿಗೆ ಜಿತೇಶ್ ಶರ್ಮಾ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಚಿತ್ರ: ಟ್ವಿಟರ್.
icon

(2 / 5)

1 ಕೋಟಿ ಮೂಲ ಬೆಲೆ ಹೊಂದಿದ್ದ ಜಿತೇಶ್ ಶರ್ಮಾ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡವು 11 ಕೋಟಿ ರೂ.ಗೆ ಖರೀದಿಸಿತು. ಆರ್‌ಸಿಬಿ ಸೇರಿದ ಮೊದಲ ವರ್ಷದಲ್ಲಿ ಅವರು ನಾಯಕತ್ವದ ಅವಕಾಶ ಪಡೆದರು. ರಜತ್ ಪಾಟೀದಾರ್ ಪ್ಲೇ ಆಫ್‌ಗೆ ಮುನ್ನ ಸಂಪೂರ್ಣ ಫಿಟ್ ಆಗಿದ್ದರೆ ಬೆಂಗಳೂರು ತಂಡವನ್ನು ಇವರೇ ಮುನ್ನಡೆಸುವ ಸಾಧ್ಯತೆ ಇದೆ.
icon

(3 / 5)

(PTI)

ಜಿತೇಶ್ ಶರ್ಮಾ ಐಪಿಎಲ್‌ನಲ್ಲಿ ಈವರೆಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಮುನ್ನಡೆಸಿದ್ದಾರೆ. ಕಳೆದ ವರ್ಷ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಈ ಬಾರಿ ಇದೇ ಹೈದರಾಬಾದ್ ವಿರುದ್ಧ ಆರ್‌ಸಿಬಿ ತಂಡದ ನಾಯಕನಾಗಿ ಜಿತೇಶ್ ಪದಾರ್ಪಣೆ ಮಾಡಿದರು. ಕಳೆದ ವರ್ಷ ಐಪಿಎಲ್ ಪ್ರಾರಂಭವಾಗುವ ಮೊದಲು ನಾಯಕರ ಫೋಟೋಶೂಟ್‌ನಲ್ಲಿಯೂ ಜಿತೇಶ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು.
icon

(4 / 5)

ಆರ್‌ಸಿಬಿ ನಾಯಕನಾಗಿ ಜಿತೇಶ್ ಶರ್ಮಾ ಟಾಸ್ ಗೆದ್ದರು. ಟಾಸ್ ಗೆದ್ದ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್‌ಗೆ ಆರ್‌ಸಿಬಿ ಪರ ಆಡುವ ಅವಕಾಶ ಸಿಕ್ಕಿತು. ಗಾಯಗೊಂಡಿರುವ ದೇವದತ್ ಪಡಿಕ್ಕಲ್ ಬದಲಿಗೆ ಮಯಾಂಕ್ ಅಗರ್ವಾಲ್ ಅವರನ್ನು ಆರ್‌ಸಿಬಿ ಆಯ್ಕೆ ಮಾಡಿದೆ. ಚಿತ್ರ ಕೃಪೆ: ಬಿಸಿಸಿಐ.
icon

(5 / 5)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು