ಸೋತರೂ ಇಂಗ್ಲೆಂಡ್ ಪರ ದಾಖಲೆ ಬರೆದ ಜೋ ರೂಟ್; ಈ ಸಾಧನೆ ಮಾಡಿದ ಆಂಗ್ಲರ ಮೊದಲ ಆಟಗಾರ
- ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೋ ರೂಟ್ ಅವರು ಭರ್ಜರಿ ಅರ್ಧಶತಕ ಬಾರಿಸಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
- ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೋ ರೂಟ್ ಅವರು ಭರ್ಜರಿ ಅರ್ಧಶತಕ ಬಾರಿಸಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(1 / 5)
ಕಟಕ್ನಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಅವರ ಸಾರ್ವಕಾಲಿಕ ದಾಖಲೆ ಮುರಿದಿದ್ದಾರೆ.
(2 / 5)
ಕಟಕ್ನಲ್ಲಿ ಜೋ ರೂಟ್ 72 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ 69 ರನ್ ಸಿಡಿಸಿದ ಅವರು ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಹೊರನಡೆದರು.
(3 / 5)
ಏಕದಿನ ಕ್ರಿಕೆಟ್ನಲ್ಲಿ 40 ಅರ್ಧಶತಕ, 16 ಶತಕ ಗಳಿಸಿರುವ ಜೋ ರೂಟ್ ಒಟ್ಟು 56 ಇನ್ನಿಂಗ್ಸ್ಗಳಲ್ಲಿ 56 ಬಾರಿ 50 ಪ್ಲಸ್ ರನ್ ಗಡಿ ದಾಟಿದ್ದಾರೆ. ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು 50 ಪ್ಲಸ್ ರನ್ ಗಳಿಸಿದ ದಾಖಲೆ ಜೋ ರೂಟ್ ಪಾಲಾಗಿದೆ. ಇದರೊಂದಿಗೆ ಇಯಾನ್ ಮಾರ್ಗನ್ ಅವರ ದಾಖಲೆ ಮುರಿದಿದ್ದಾರೆ.
(4 / 5)
2019 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ತಮ್ಮ ಒಡಿಐ ವೃತ್ತಿಜೀವನದಲ್ಲಿ 55 ಇನ್ನಿಂಗ್ಸ್ಗಳಲ್ಲಿ 50 ಪ್ಲಸ್ ರನ್ಗಳ ಗಡಿ ದಾಟಿದ್ದಾರೆ. ಅವರು 42 ಅರ್ಧಶತಕ, 13 ಶತಕ ಗಳಿಸಿದ್ದಾರೆ. ಇದೀಗ ಜೋ ರೂಟ್ ಈ ದಾಖಲೆ ಬ್ರೇಕ್ ಮಾಡಿದ್ದಾರೆ.
ಇತರ ಗ್ಯಾಲರಿಗಳು