ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಯಕನಾಗಿ ಧೋನಿ, ರೋಹಿತ್ ಶರ್ಮಾ ಮಾಡದ ವಿಶಿಷ್ಠ ದಾಖಲೆ ಮಾಡಿದ ಶ್ರೇಯಸ್ ಅಯ್ಯರ್

ನಾಯಕನಾಗಿ ಧೋನಿ, ರೋಹಿತ್ ಶರ್ಮಾ ಮಾಡದ ವಿಶಿಷ್ಠ ದಾಖಲೆ ಮಾಡಿದ ಶ್ರೇಯಸ್ ಅಯ್ಯರ್

  • ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್‌ 2024ರ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೆಕೆಆರ್‌ ಗೆದ್ದು ಬೀಗಿತು. ಇದರೊಂದಿಗೆ ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿತು. ಆ ಮೂಲಕ ತಂಡದ ನಾಯಕ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಎಂಎಸ್‌ ಧೋನಿ ಕೂಡಾ ಇಂಥಾ ಸಾಧನೆ ಮಾಡಿಲ್ಲ.

ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸುವ ಮೂಲಕ ಶ್ರೇಯಸ್ ಅಯ್ಯರ್ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ, ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಮಾಡದ ಸಾಧನೆಯನ್ನು ಅಯ್ಯರ್‌ ಮಾಡಿದ್ದಾರೆ. ಐಪಿಎಲ್‌ನಲ್ಲಿ ಎರಡು ವಿಭಿನ್ನ ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಅಯ್ಯರ್‌ ನಾಯಕತ್ವದಲ್ಲಿ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ತಲುಪಿತು. ಈಗ ಕೆಕೆಆರ್ ಫೈನಲ್ ತಲುಪಿದೆ.
icon

(1 / 5)

ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸುವ ಮೂಲಕ ಶ್ರೇಯಸ್ ಅಯ್ಯರ್ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ, ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಮಾಡದ ಸಾಧನೆಯನ್ನು ಅಯ್ಯರ್‌ ಮಾಡಿದ್ದಾರೆ. ಐಪಿಎಲ್‌ನಲ್ಲಿ ಎರಡು ವಿಭಿನ್ನ ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಅಯ್ಯರ್‌ ನಾಯಕತ್ವದಲ್ಲಿ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ತಲುಪಿತು. ಈಗ ಕೆಕೆಆರ್ ಫೈನಲ್ ತಲುಪಿದೆ.(AFP)

2020ರಲ್ಲಿ ಶ್ರೇಯಸ್ ಡಿಸಿ ನಾಯಕನಾಗಿದ್ದರೂ, ಐಪಿಎಲ್ ಟ್ರೋಫಿ ಗೆಲುವು ಸಾಧ್ಯವಾಗಲಿಲ್ಲ. ಈ ಬಾರಿ ಕೆಕೆಆರ್ ತಂಡದ ಮೂಲಕ ಮೊದಲ ಟ್ರೋಫಿ ಗೆಲುವು ಸಾಧ್ಯವೇ ಎಂಬ ಪ್ರಶ್ನೆಗೆ ಮೇ 26ರಂದು ಉತ್ತರ ಸಿಗಲಿದೆ. ಚೆನ್ನೈನಲ್ಲಿ ಐಪಿಎಲ್ ಫೈನಲ್ ನಡೆಯಲಿದೆ.
icon

(2 / 5)

2020ರಲ್ಲಿ ಶ್ರೇಯಸ್ ಡಿಸಿ ನಾಯಕನಾಗಿದ್ದರೂ, ಐಪಿಎಲ್ ಟ್ರೋಫಿ ಗೆಲುವು ಸಾಧ್ಯವಾಗಲಿಲ್ಲ. ಈ ಬಾರಿ ಕೆಕೆಆರ್ ತಂಡದ ಮೂಲಕ ಮೊದಲ ಟ್ರೋಫಿ ಗೆಲುವು ಸಾಧ್ಯವೇ ಎಂಬ ಪ್ರಶ್ನೆಗೆ ಮೇ 26ರಂದು ಉತ್ತರ ಸಿಗಲಿದೆ. ಚೆನ್ನೈನಲ್ಲಿ ಐಪಿಎಲ್ ಫೈನಲ್ ನಡೆಯಲಿದೆ.(AFP)

ನಾಯಕನಾಗಿ ಐಪಿಎಲ್ ಪ್ಲೇಆಫ್‌ನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದವರ ಪಟ್ಟಿಯಲ್ಲಿ ಶ್ರೇಯಸ್ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಅವರು ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಿದ್ದಾರೆ. ಐಪಿಎಲ್ ಪ್ಲೇ ಆಫ್‌ನಲ್ಲಿ ಧೋನಿ ದಾಖಲೆಯ 17 ಪಂದ್ಯಗಳನ್ನು ಗೆದ್ದಿದ್ದಾರೆ. ರೋಹಿತ್ ಶರ್ಮಾ (11 ಪಂದ್ಯ ಗೆದ್ದು ಎರಡನೇ ಸ್ಥಾನದಲ್ಲಿದ್ದಾರೆ. ಗೌತಮ್ ಗಂಭೀರ್ ಐದು ಪಂದ್ಯ ಗೆದ್ದಿದ್ದಾರೆ.
icon

(3 / 5)

ನಾಯಕನಾಗಿ ಐಪಿಎಲ್ ಪ್ಲೇಆಫ್‌ನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದವರ ಪಟ್ಟಿಯಲ್ಲಿ ಶ್ರೇಯಸ್ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಅವರು ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಿದ್ದಾರೆ. ಐಪಿಎಲ್ ಪ್ಲೇ ಆಫ್‌ನಲ್ಲಿ ಧೋನಿ ದಾಖಲೆಯ 17 ಪಂದ್ಯಗಳನ್ನು ಗೆದ್ದಿದ್ದಾರೆ. ರೋಹಿತ್ ಶರ್ಮಾ (11 ಪಂದ್ಯ ಗೆದ್ದು ಎರಡನೇ ಸ್ಥಾನದಲ್ಲಿದ್ದಾರೆ. ಗೌತಮ್ ಗಂಭೀರ್ ಐದು ಪಂದ್ಯ ಗೆದ್ದಿದ್ದಾರೆ.(AFP)

ಎಂ ಎಸ್‌ ಧೋನಿ ನಾಯಕನಾಗಿ ಚೆನ್ನೈ ತಂಡವನ್ನು ಹಲವಾರು ಬಾರಿ ಫೈನಲ್‌ಗೆ ಕೊಂಡೊಯ್ದಿದ್ದಾರೆ. ಆದರೆ, ಅವರು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾಗ, ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ.
icon

(4 / 5)

ಎಂ ಎಸ್‌ ಧೋನಿ ನಾಯಕನಾಗಿ ಚೆನ್ನೈ ತಂಡವನ್ನು ಹಲವಾರು ಬಾರಿ ಫೈನಲ್‌ಗೆ ಕೊಂಡೊಯ್ದಿದ್ದಾರೆ. ಆದರೆ, ಅವರು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾಗ, ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ.(AFP)

ಐಪಿಎಲ್‌ 2024ರಲ್ಲಿ ಮೊದಲ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿದ್ದ ಕೆಕೆಆರ್‌, ಇದೀಗ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಹಾಕಿದೆ. ಮೇ 26ರಂದು ಫೈನಲ್‌ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. 
icon

(5 / 5)

ಐಪಿಎಲ್‌ 2024ರಲ್ಲಿ ಮೊದಲ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿದ್ದ ಕೆಕೆಆರ್‌, ಇದೀಗ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಹಾಕಿದೆ. ಮೇ 26ರಂದು ಫೈನಲ್‌ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. 


ಇತರ ಗ್ಯಾಲರಿಗಳು