ಕೆಎಲ್ ರಾಹುಲ್ ಹುಟ್ಟುಹಬ್ಬ; ಪದಾರ್ಪಣೆ ಏಕದಿನ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಏಕೈಕ ಕ್ರಿಕೆಟಿಗನ ದಾಖಲೆಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೆಎಲ್ ರಾಹುಲ್ ಹುಟ್ಟುಹಬ್ಬ; ಪದಾರ್ಪಣೆ ಏಕದಿನ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಏಕೈಕ ಕ್ರಿಕೆಟಿಗನ ದಾಖಲೆಗಳಿವು

ಕೆಎಲ್ ರಾಹುಲ್ ಹುಟ್ಟುಹಬ್ಬ; ಪದಾರ್ಪಣೆ ಏಕದಿನ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಏಕೈಕ ಕ್ರಿಕೆಟಿಗನ ದಾಖಲೆಗಳಿವು

  • ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಕನ್ನಡಿಕ ಕೆಎಲ್ ರಾಹುಲ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಟೀಮ್‌ ಇಂಡಿಯಾದಲ್ಲಿ ಆರಂಭಿಕ ಆಟಗಾರನಾಗಿ, ಮಧ್ಯಮ ಕ್ರಮಾಂಕದ ಬ್ಯಾಟರ್‌ ಆಗಿ, ಫಿನಿಶರ್‌ ಆಗಿ, ವಿಶೇಷವಾಗಿ ವಿಕೆಟ್‌ ಕೀಪರ್‌ ಆಗಿಯೂ ಗುರುತಿಸಿಕೊಂಡು ಮನಮಾತಾಗಿದ್ದಾರೆ. ಇಂದು 33ನೇ ಜನ್ಮದಿನದ ಸಂಭ್ರಮದಲ್ಲಿರುವ ರಾಹುಲ್‌ ಅವರ ಕ್ರಿಕೆಟ್ ಪಯಾಣವನ್ನು ನೋಡೋಣ.

ಬಲಗೈ ಬ್ಯಾಟರ್‌ ಆಗಿರುವ ಕೆಎಲ್ ರಾಹುಲ್, ಬಹುಶಃ ಬ್ಯಾಟ್‌ ಬೀಸದ ಕ್ರಮಾಂಕವಿಲ್ಲ. ಅಗತ್ಯವಿದ್ದಾಗ ವಿಕೆಟ್ ಕೀಪಿಂಗ್ ಮಾಡುವುದಲ್ಲದೆ, ಫಿನಿಶರ್‌ ಆಗಿಯೂ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಕ್ಲಿಷ್ಟಕರ ಪಿಚ್‌ಗಳಲ್ಲಿ ಕ್ರೀಸ್‌ಕಚ್ಚಿ ಆಡುವಲ್ಲಿ ರಾಹುಲ್‌ ನಿಪುಣ ಆಟಗಾರ.
icon

(1 / 9)

(AP)

ಕೆಎಲ್ ರಾಹುಲ್ 2010ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದರು. ಅದೇ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟರು.
icon

(2 / 9)

(X)

2013-14ರ ರಣಜಿ ಟ್ರೋಫಿಯಲ್ಲಿ ಕೆಎಲ್ ರಾಹುಲ್ 1033 ರನ್ ಗಳಿಸಿದ್ದರು. ಫೈನಲ್‌ ಪಂದ್ಯದಲ್ಲಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡುವುದಲ್ಲದೆ, ಕರ್ನಾಟಕ ತಂಡವನ್ನು ಟ್ರೋಫಿ ಗೆಲುವಿನತ್ತ ಮುನ್ನಡೆಸಿದರು.
icon

(3 / 9)

2014ರ ಐಪಿಎಲ್ ಹರಾಜಿನಲ್ಲಿ ರಾಹುಲ್ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ 1 ಕೋಟಿ ರೂ.ಗೆ ಸೇರಿಕೊಂಡರು. ಆರಂಭಿಕ ಐಪಿಎಲ್‌ ಜೀವನದಲ್ಲಿ ವಿಕೆಟ್ ಕೀಪರ್-ಬ್ಯಾಟರ್‌ ಆಗಿ ಆಡಿದರು.
icon

(4 / 9)

2014-15ರ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ರಾಹುಲ್ ಎರಡು ಶತಕಗಳನ್ನು ಗಳಿಸಿದರು. ಇದು ಭಾರತ ಟೆಸ್ಟ್‌ ತಂಡಕ್ಕೆ, ಅದು ಕೂಡಾ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಾಲಿಡಲು ಕಾರಣವಾಯ್ತು.
icon

(5 / 9)

(REUTERS)

2016ರ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ ಪರ ಆಡಿದ್ದ ರಾಹುಲ್, ಆ ಬಳಿಕ ಭಾರತ ವೈಟ್‌ ಬಾಲ್‌ ಕ್ರಿಕೆಟ್‌ ತಂಡಕ್ಕೂ ಪದಾರ್ಪಣೆ ಮಾಡಿದರು.
icon

(6 / 9)

(RCB )

2016ರ ಜಿಂಬಾಬ್ವೆ ಪ್ರವಾಸದಲ್ಲಿ ಏಕದಿನ ಕ್ರಿಕೆಟ್‌ ಪದಾರ್ಪಣೆ ಮಾಡಿದ ರಾಹುಲ್‌, ಇತಿಹಾಸ ನಿರ್ಮಿಸಿದರು. ಪದಾರ್ಪಣೆ ಮಾಡಿದ ಏಕದಿನ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾದರು. ಆ ಬಳಿಕ ರಾಹುಲ್‌ ಬಹುತೇಕ ಭಾರತ ತಂಡದ ಕಾಯಂ ಸದಸ್ಯರಾದರು.
icon

(7 / 9)

ಈವರೆಗೆ 85 ಟಿ20 ಪಂದ್ಯಗಳ 79 ಇನ್ನಿಂಗ್ಸ್‌ಗಳಲ್ಲಿ ಆಡಿರುವ ರಾಹುಲ್ 139.12ರ ಸ್ಟ್ರೈಕ್ ರೇಟ್‌ನಲ್ಲಿ 2 ಶತಕಗಳು ಮತ್ತು 22 ಅರ್ಧಶತಕಗಳೊಂದಿಗೆ 2265 ರನ್ ಗಳಿಸಿದ್ದಾರೆ.
icon

(8 / 9)

(AFP)

ಟೀಮ್‌ ಇಂಡಿಯಾ ಪರ ಹಲವು ಸ್ಮರಣೀಯ ಇನ್ನಿಂಗ್ಸ್‌ಗಳಲ್ಲಿ ಆಡಿರುವ ರಾಹುಲ್, ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುತ್ತಿದ್ದಾರೆ.
icon

(9 / 9)

(PTI)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು