ಐಪಿಎಲ್ ತಂಡವನ್ನು ಮುನ್ನಡೆಸುವುದು ಭಾರತ ನಾಯಕತ್ವಕ್ಕಿಂತ ಕಠಿಣ: ಆರ್‌ಸಿಬಿ ನಾಯಕ ರಜತ್ ಪಾಟೀದಾರ್‌ಗೆ ಹರ್ಭಜನ್ ಎಚ್ಚರಿಕೆ
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025ರಲ್ಲಿ ಹೊಸತನದೊಂದಿಗೆ ಕಣಕ್ಕಿಳಿಯಲಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಫ್ರಾಂಚೈಸಿಯು ರಜತ್ ಪಾಟೀದಾರ್ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ. ಹರಾಜಿಗೂ ಮುಂಚಿತವಾಗಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿದ ನಂತರ, ಪಾಟೀದಾರ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025ರಲ್ಲಿ ಹೊಸತನದೊಂದಿಗೆ ಕಣಕ್ಕಿಳಿಯಲಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಫ್ರಾಂಚೈಸಿಯು ರಜತ್ ಪಾಟೀದಾರ್ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ. ಹರಾಜಿಗೂ ಮುಂಚಿತವಾಗಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿದ ನಂತರ, ಪಾಟೀದಾರ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.
(1 / 7)
ತಂಡದಲ್ಲಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಕೂಡಾ ಇದ್ದು, ದಿಗ್ಗಜ ಆಟಗಾರ ನಾಯಕನ ಪಾತ್ರದಿಂದ ದೂರ ಉಳಿದಿದ್ದಾರೆ. ವಿರಾಟ್ ಕೊಹ್ಲಿ ಖಂಡಿತವಾಗಿಯೂ ನಾಯಕತ್ವದ ಪಾತ್ರದ ಭಾಗವಾಗಲಿದ್ದಾರೆ. ಮೈದಾನದಲ್ಲಿ ನಿರ್ಧಾರ ಕೈಗೊಳ್ಳುವಾಗ ಪಾಟೀದಾರ್‌ಗೆ ಸಹಾಯ ಮಾಡಬಹುದು. ಆದರೆ, 31 ವರ್ಷದ ಪಾಟೀದಾರ್‌ಗೆ ನಾಯಕತ್ವ ಸುಲಭದ ಕೆಲಸವಲ್ಲ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
(2 / 7)
ಐಪಿಎಲ್‌ನ ಕೆಲವು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿರುವ ಹರ್ಭಜನ್ ಸಿಂಗ್, ಟೀಮ್ ಇಂಡಿಯಾವನ್ನು ಮುನ್ನಡೆಸುವುದಕ್ಕಿಂತ ಐಪಿಎಲ್ ತಂಡವನ್ನು ಮುನ್ನಡೆಸುವುದು "ಕಠಿಣ" ಎಂದು ಹೇಳಿಕೊಂಡಿದ್ದಾರೆ.
(RCB-X)(3 / 7)
ಪಾಟೀದಾರ್ ಅವರಂತಹ ಆಟಗಾರರಿಗೆ ಇದು ದೊಡ್ಡ ಸವಾಲಾಗಿದೆ. ದೊಡ್ಡ ತಂಡವನ್ನು ಮುನ್ನಡೆಸುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಲ್ಲ. ಯಾರು ಆಡುತ್ತಿದ್ದಾರೆ, ಯಾರು ಯಾವ ಹಂತದಲ್ಲಿ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ಅರಿಯಬೇಕು. ಪಾಟೀದಾರ್ ಈ ಮೊದಲು ಯಾವುದೇ ತಂಡವನ್ನು ಮುನ್ನಡೆಸಿಲ್ಲ. ಹೀಗಾಗಿ ಅವರಿಗೆ ಕಷ್ಟವಾಗಲಿದೆ ಎಂದು ಟರ್ಬನೇಟರ್ ಹೇಳಿದ್ದಾರೆ.
(4 / 7)
ಭಾರತವನ್ನು ಮುನ್ನಡೆಸುವುದು ಅತ್ಯಂತ ಕಷ್ಟದ ವಿಷಯ ಎಂದು ಜನರು ಭಾವಿಸುತ್ತಾರೆ. ಆದರೆ ಫ್ರಾಂಚೈಸಿಯನ್ನು ಮುನ್ನಡೆಸುವುದು ಇನ್ನೂ ಕಠಿಣ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ನಾಯಕನಾಗಿ ಅನುಭವಿಸಿದ್ದೇನೆ" ಎಂದು ಹರ್ಭಜನ್ ಇಎಸ್‌ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.
(5 / 7)
"ಪಾಟೀದಾರ್ ಮೇಲೆ ನಿರೀಕ್ಷೆಯ ಒತ್ತಡವಿದೆ. ಏಕೆಂದರೆ ಆರ್‌ಸಿಬಿ ಒಂದೇ ಒಂದು ಋತುವಿನಲ್ಲಿಯೂ ಕಪ್ ಗೆದ್ದಿಲ್ಲ. ಅಲ್ಲಿ ಎಲ್ಲವೂ ವಿರಾಟ್ ಕೊಹ್ಲಿಯ ಸುತ್ತ ಸುತ್ತುತ್ತದೆ. ಅವರಿಗೆ ಇದು ಉತ್ತಮ ಋತುವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹರ್ಭಜನ್ ಹೇಳಿದರು.
(6 / 7)
ಪಾಟೀದಾರ್ 2021ರಿಂದ ಆರ್‌ಸಿಬಿಯ ಭಾಗವಾಗಿದ್ದಾರೆ. ಇದು ಅವರ ಪಾಲಿನ ಮೊದಲ ಐಪಿಎಲ್ ಫ್ರಾಂಚೈಸಿಯಾಗಿದೆ. ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್ ಆಗಿರುವ ಪಾಟೀದಾರ್, ಕಳೆದ ಋತುವಿನಲ್ಲಿ, 177ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 395 ರನ್ ಗಳಿಸಿದ್ದರು.
ಇತರ ಗ್ಯಾಲರಿಗಳು