Champions Trophy: 4 ಬಾರಿ ಫೈನಲ್ಗೇರಿದ್ದ ಭಾರತ ಚಾಂಪಿಯನ್ ಆಗಿರೋದು ಎಷ್ಟು ಸಲ? 1998ರಿಂದ 2017ರ ತನಕ ವಿಜೇತರ ಪಟ್ಟಿ ಇಲ್ಲಿದೆ
- ICC Champions Trophy 2025: ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಎಷ್ಟು ಬಾರಿ ಗೆದ್ದಿದೆ? ಈ ಟೂರ್ನಿಯಲ್ಲಿ ಯಾವೆಲ್ಲಾ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ? ವಿವರ ಇಂತಿದೆ.
- ICC Champions Trophy 2025: ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಎಷ್ಟು ಬಾರಿ ಗೆದ್ದಿದೆ? ಈ ಟೂರ್ನಿಯಲ್ಲಿ ಯಾವೆಲ್ಲಾ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ? ವಿವರ ಇಂತಿದೆ.
(1 / 10)
ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತ ತಂಡ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಎರಡು ಬಾರಿ ಮಾತ್ರ ಸೋತಿದೆ. 2013ರಲ್ಲಿ ಚಾಂಪಿಯನ್ ಆಗಿದ್ದರೆ, 2002ರಲ್ಲಿ ಜಂಟಿ ಚಾಂಪಿಯನ್ ಆಗಿದ್ದ ಭಾರತ, 2017ರಲ್ಲಿ ರನ್ನರ್ಅಪ್ ಆಗಿತ್ತು. ಹಾಗಾದರೆ ಯಾವ ವರ್ಷ ಯಾವ ತಂಡ ಪ್ರಶಸ್ತಿ ಗೆದ್ದಿದೆ ಎನ್ನುವುದರ ವಿವರ ಇಂತಿದೆ.
(2 / 10)
ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ನಡೆದಿದ್ದು 1998ರಲ್ಲಿ. ಉದ್ಘಾಟನಾ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿತ್ತು. ಈ ತಂಡದ ಚೊಚ್ಚಲ ಹಾಗೂ ಕೊನೆಯ ಐಸಿಸಿ ಪ್ರಶಸ್ತಿ. ಬಾಂಗ್ಲಾದೇಶದಲ್ಲಿ ಜರುಗಿದ್ದ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೌತ್ ಆಫ್ರಿಕಾ 4 ವಿಕೆಟ್ಗಳಿಂದ ಗೆದ್ದಿತ್ತು. ವಿಂಡೀಸ್ 49.3 ಓವರ್ಗಳಲ್ಲಿ 245 ರನ್ ಗಳಿಸಿತ್ತು. ಆಫ್ರಿಕಾ 47 ಓವರ್ಗಳಲ್ಲೇ 6 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿ ಜಯದ ನಗೆ ಬೀರಿತ್ತು.
(x/icc)(3 / 10)
2000ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಚಾಂಪಿಯನ್ ಆಗಿತ್ತು. ಕೀನ್ಯಾದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್ ಗೆದ್ದು ಚಾಂಪಿಯನ್ ಆಗಿತ್ತು. ಭಾರತ 6 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು. 49.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಟ್ರೋಫಿ ಗೆದ್ದು ಬೀಗಿತ್ತು.
(x/Abhishek AB)(4 / 10)
2002ರಲ್ಲಿ ಭಾರತ ತಂಡವು ಜಂಟಿ ಚಾಂಪಿಯನ್ ಆಗಿತ್ತು. ಶ್ರೀಲಂಕಾ ಜೊತೆಗೆ ಜಂಟಿ ವಿಜೇತರಾಗಿದ್ದರು. ಶ್ರೀಲಂಕಾದಲ್ಲಿ ನಡೆದ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಪಂದ್ಯದ ದಿನವು ಶ್ರೀಲಂಕಾ 50 ಓವರ್ಗಳಲ್ಲಿ ಬ್ಯಾಟಿಂಗ್ ಮಾಡಿತ್ತು. ಆದರೆ ಭಾರತ 2 ಓವರ್ ಆಡಿದ ನಂತರ ಬಿಡುವು ನೀಡದೆ ಮಳೆ ಅಡ್ಡಿಪಡಿಸಿತ್ತು.
(x/icc)(5 / 10)
ಮೀಸಲು ದಿನವೂ ಮರುದಿನ ಶ್ರೀಲಂಕಾ ಮತ್ತೆ 50 ಓವರ್ ಆಡಿತ್ತು. ಭಾರತದ ಚೇಸಿಂಗ್ನಲ್ಲಿ 9ನೇ ಓವರ್ನಲ್ಲಿ ಮತ್ತೆ ಅಡ್ಡಿಪಡಿಸಿತ್ತು. ಹೀಗಾಗಿ ಪಂದ್ಯ ಮುಂದುವರೆಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜಂಟಿ ಚಾಂಪಿಯನ್ ಎಂದು ಘೋಷಣೆ ಮಾಡಲಾಗಿತ್ತು.
(6 / 10)
2004ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿತ್ತು. ಓವಲ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 217 ರನ್ಗೆ ಆಲೌಟ್ ಆಗಿತ್ತು. ಗುರಿ ಬೆನ್ನತ್ತಿದ ವಿಂಡೀಸ್ 48.5 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತ್ತು.
(x/icc)(7 / 10)
ವಿಶ್ವ ಕ್ರಿಕೆಟ್ನಲ್ಲಿ ಪ್ರಾಬಲ್ಯ ಹೊಂದಿದ್ದ ಆಸ್ಟ್ರೇಲಿಯಾ ಕ್ರಮವಾಗಿ 2006 ಮತ್ತು 2009ರ ಚಾಂಪಿಯನ್ಸ್ ಟ್ರೋಫಿ ಗೆದ್ದಿತು. 30.4 ಓವರ್ಗಳಲ್ಲಿ 138 ರನ್ ಗಳಿಸಿ ಆಲೌಟ್ ಆಗಿತ್ತು. ಡಕ್ವರ್ಥ್ ಲೂಯಿಸ್ ನಿಯಮದ ಅಡಿ ಆಸೀಸ್ 8 ವಿಕೆಟ್ಗಳಿಂದ ಗೆದ್ದು ಬೀಗಿತ್ತು. ಈ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು.
(x/icc)(8 / 10)
ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ 2009ರ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಕಾಂಗರೂ ತಂಡವು ಪ್ರಶಸ್ತಿಯನ್ನು ಉಳಿಸಿಕೊಂಡಿತ್ತು. ಕಿವೀಸ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು. ಆಸೀಸ್ 45.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ಸತತ ಎರಡನೇ ಟ್ರೋಫಿಗೆ ಮುತ್ತಿಕ್ಕಿತ್ತು.
(9 / 10)
ಭಾರತ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಇಂಗ್ಲೆಂಡ್ನಲ್ಲಿ ನಡೆದ ಫೈನಲ್ನಲ್ಲಿ ಭಾರತ ಆತಿಥೇಯರನ್ನು ಮಣಿಸಿತ್ತು. ಮಳೆಯ ಕಾರಣ 20 ಓವರ್ಗಳಿಗೆ ಪಂದ್ಯವನ್ನು ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, 7 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತ್ತು. ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿ 5 ರನ್ಗಳಿಂದ ಗೆದ್ದು ಸೋತಿತ್ತು. ಇದು ಭಾರತ ಗೆದ್ದ ಮೊದಲ ಏಕಾಂಗಿ ಟ್ರೋಫಿ. ಜಂಟಿ ಚಾಂಪಿಯನ್ ಸೇರಿದಂತೆ ಒಟ್ಟಾರೆ 2ನೇ ಪ್ರಶಸ್ತಿ.
(x/sunrisers hyderabad)ಇತರ ಗ್ಯಾಲರಿಗಳು