ಐಪಿಎಲ್‌ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ವಿಕೆಟ್ ಕೀಪರ್ಸ್; ದಿನೇಶ್ ಕಾರ್ತಿಕ್ ಹಿಂದಿಕ್ಕಿದ ಪಂತ್, ನಂಬರ್ 1 ಯಾರು?
- Most Sixes by Wicketkeeper in IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ವಿಕೆಟ್ ಕೀಪರ್ಗಳು ಯಾರು? ಅಗ್ರಸ್ಥಾನ ಯಾರಿಗೆ? ಇಲ್ಲಿದೆ ವಿವರ.
- Most Sixes by Wicketkeeper in IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ವಿಕೆಟ್ ಕೀಪರ್ಗಳು ಯಾರು? ಅಗ್ರಸ್ಥಾನ ಯಾರಿಗೆ? ಇಲ್ಲಿದೆ ವಿವರ.
(1 / 7)
2025ರ ಐಪಿಎಲ್ 30ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಅರ್ಧಶತಕ ಸಿಡಿಸಿ ಮಿಂಚಿದರು. ಈ ಆವೃತ್ತಿಯಲ್ಲಿ ಅವರ ಮೊದಲ ಅರ್ಧಶತಕ ಇದು. 49 ಎಸೆತಗಳಲ್ಲಿ 63 ರನ್ ಗಳಿಸಿದ ಪಂತ್ ಇನ್ನಿಂಗ್ಸ್ನಲ್ಲಿ 4 ಬೌಂಡರಿ, 4 ಸಿಕ್ಸರ್ಗಳಿದ್ದವು.
(AFP)(2 / 7)
ತಮ್ಮ ಅರ್ಧಶತಕದ ಇನ್ನಿಂಗ್ಸ್ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿದ ಪಂತ್, ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಕೆಟ್ ಕೀಪರ್ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ತಲುಪಿದ್ದಾರೆ. ಇದರೊಂದಿಗೆ ದಿನೇಶ್ ಕಾರ್ತಿಕ್ ಅವರನ್ನು ಹಿಂದಿಕ್ಕಿದ್ದಾರೆ.
(PTI)(3 / 7)
ರಿಷಭ್ ಪಂತ್ ಅವರು ಪ್ರಸ್ತುತ 106 ಇನ್ನಿಂಗ್ಸ್‌ಗಳಲ್ಲಿ 150 ಸಿಕ್ಸರ್ ಬಾರಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರು 147 ಸಿಕ್ಸರ್ ಸಿಡಿಸಿದ್ದಾರೆ.
(4 / 7)
ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಐಪಿಎಲ್‌ನಲ್ಲಿ 214 ಇನ್ನಿಂಗ್ಸ್‌ಗಳಲ್ಲಿ ಅವರು 147 ಸಿಕ್ಸರ್ ಬಾರಿಸಿದ್ದಾರೆ. ಕಾರ್ತಿಕ್ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರ್ಗದರ್ಶಕರಾಗಿದ್ದಾರೆ.
(X)(5 / 7)
ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಕೆಟ್‌ಕೀಪರ್ ಎಂಬ ದಾಖಲೆಯನ್ನು ಎಂಎಸ್ ಧೋನಿ ಹೊಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಧೋನಿ 230 ಇನ್ನಿಂಗ್ಸ್‌ಗಳಲ್ಲಿ 230 ಸಿಕ್ಸರ್ ಬಾರಿಸಿದ್ದಾರೆ.
(REUTERS)(6 / 7)
ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಕೆಟ್ ಕೀಪರ್ ಆಗಿ 107 ಇನ್ನಿಂಗ್ಸ್‌ಗಳಲ್ಲಿ 145 ಸಿಕ್ಸರ್ ಬಾರಿಸಿದ್ದಾರೆ.
(X)ಇತರ ಗ್ಯಾಲರಿಗಳು