ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆರಂಭಿಕ ಆಟಗಾರ ಯಾರು? ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ
- ಇಂಡಿಯನ್ ಪ್ರೀಮಿಯರ್ ಲೀಗ್ನ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ -6 ಭಾರತೀಯ ಆರಂಭಿಕರು ಯಾರು? ವಿರಾಟ್ ಕೊಹ್ಲಿ ನೂತನ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.
- ಇಂಡಿಯನ್ ಪ್ರೀಮಿಯರ್ ಲೀಗ್ನ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ -6 ಭಾರತೀಯ ಆರಂಭಿಕರು ಯಾರು? ವಿರಾಟ್ ಕೊಹ್ಲಿ ನೂತನ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.
(1 / 7)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು 2025ರ ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಹಾದಿಯಲ್ಲಿದ್ದಾರೆ. ಐಪಿಎಲ್‌ನಲ್ಲಿ ಭಾರತದ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ಸಿಕ್ಸರ್ ಬಾರಿಸುವ ಹೆಗ್ಗಳಿಕೆಗೆ ಪಾತ್ರರಾಗುವ ಅವಕಾಶ ಅವರ ಮುಂದಿದೆ.
(PTI)(2 / 7)
ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಆರಂಭಿಕನಾಗಿ 171 ಸಿಕ್ಸರ್ ಬಾರಿಸಿದ್ದು, ಓಪನರ್ ಆಗಿ ಅತ್ಯಧಿಕ ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಕೆಎಲ್ ರಾಹುಲ್ ದಾಖಲೆ ಮುರಿದು ಮೊದಲ ಸ್ಥಾನ ಪಡೆಯಲು ಕೊಹ್ಲಿಗೆ ಕೇವಲ 4 ಸಿಕ್ಸರ್ಗಳು ಬೇಕಿವೆಯಷ್ಟೆ.
(AFP)(3 / 7)
ಐಪಿಎಲ್‌ನಲ್ಲಿ ಭಾರತೀಯ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಪ್ರಸ್ತುತ ಕೆಎಲ್ ರಾಹುಲ್ ಹೆಸರಿನಲ್ಲಿದೆ. ಕೆಎಲ್ ಆರಂಭಿಕರಾಗಿ 174 ಸಿಕ್ಸರ್ ಬಾರಿಸಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ರಾಹುಲ್, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಕೊಹ್ಲಿ, ರಾಹುಲ್ ದಾಖಲೆಯನ್ನು ಶೀಘ್ರದಲ್ಲೇ ಮುರಿಯಬಹುದು.
(PTI)(4 / 7)
ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 143 ಸಿಕ್ಸರ್ ಬಾರಿಸಿದ್ದಾರೆ. ಧವನ್ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.
(X)(5 / 7)
ಮುಂಬೈ ಇಂಡಿಯನ್ಸ್ ಪರ ಆಡುವ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. 'ಹಿಟ್‌ಮ್ಯಾನ್' ಎಂದೇ ಕರೆಯಲ್ಪಡುವ ರೋಹಿತ್ ಐಪಿಎಲ್‌ನಲ್ಲಿ ಆರಂಭಿಕನಾಗಿ 135 ಸಿಕ್ಸರ್ ಬಾರಿಸಿದ್ದಾರೆ.
(Hindustan Times)(6 / 7)
ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸೆಹ್ವಾಗ್ 104 ಸಿಕ್ಸರ್ ಬಾರಿಸಿದ್ದಾರೆ. ಅವರು 2015 ರಲ್ಲಿ ತಮ್ಮ ಕೊನೆಯ ಐಪಿಎಲ್ ಪಂದ್ಯ ಆಡಿದ್ದರು.
(AFP)ಇತರ ಗ್ಯಾಲರಿಗಳು