ಡೆಲ್ಲಿ ಕ್ಯಾಪಿಟಲ್ಸ್ ಮಾತ್ರವಲ್ಲ; ಐಪಿಎಲ್ ಇತಿಹಾಸದಲ್ಲಿ 1 ವಿಕೆಟ್‌ನಿಂದ ರೋಚಕವಾಗಿ ಗೆದ್ದ ತಂಡಗಳಿವು
- ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯವು ರೋಚಕ ಅಂತ್ಯ ಕಂಡಿತು. ಮಾರ್ಚ್ 24ರಂದು ವೈಜಾಗ್‌ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ 1 ವಿಕೆಟ್ ರೋಚಕ ಗೆಲುವು ದಾಖಲಿಸಿತು. ಐಪಿಎಲ್ ಇತಿಹಾಸದಲ್ಲಿ ಇಂತಹ 1 ವಿಕೆಟ್ ಗೆಲುವು ಇದೇ ಮೊದಲಲ್ಲ. ಈ ಹಿಂದೆಯೂ ಆಗಿವೆ.
- ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯವು ರೋಚಕ ಅಂತ್ಯ ಕಂಡಿತು. ಮಾರ್ಚ್ 24ರಂದು ವೈಜಾಗ್‌ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ 1 ವಿಕೆಟ್ ರೋಚಕ ಗೆಲುವು ದಾಖಲಿಸಿತು. ಐಪಿಎಲ್ ಇತಿಹಾಸದಲ್ಲಿ ಇಂತಹ 1 ವಿಕೆಟ್ ಗೆಲುವು ಇದೇ ಮೊದಲಲ್ಲ. ಈ ಹಿಂದೆಯೂ ಆಗಿವೆ.
(1 / 5)
2025ರ ಐಪಿಎಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಡಬಲ್ ಉತ್ಸಾಹ ತುಂಬಿತು. ಸೋಮವಾರ (ಮಾರ್ಚ್ 24) ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ 1 ವಿಕೆಟ್‌ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿತು. 210 ರನ್‌ಗಳ ಗುರಿ ಬೆನ್ನಟ್ಟುವಾಗ ಅಶುತೋಷ್ ಶರ್ಮಾ ಅಮೋಘ ಅರ್ಧಶತಕ ಬಾರಿಸಿದರು. 31 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿದರು. ಇದು ಐಪಿಎಲ್ ಇತಿಹಾಸದ ಆರನೇ 1 ವಿಕೆಟ್ ಗೆಲುವು ಆಗಿದೆ.
(Surjeet Yadav)(2 / 5)
2023 ರ ಐಪಿಎಲ್ ಋತುವಿನಲ್ಲಿ ಲಕ್ನೋ ಕೂಡಾ ಇದೇ ರೀತಿಯ 1 ವಿಕೆಟ್ ರೋಮಾಂಚಕ ವಿಜಯ ದಾಖಲಿಸಿತ್ತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 1 ವಿಕೆಟ್‌ನಿಂದ ಎಲ್‌ಎಸ್‌ಜಿ ಸೋಲಿಸಿತ್ತು. ಸ್ಟೋಯ್ನಿಸ್ (30 ಎಸೆತಗಳಲ್ಲಿ 65 ರನ್), ಪೂರನ್ (19 ಎಸೆತಗಳಲ್ಲಿ 62 ರನ್) ಮತ್ತು ಆಯುಷ್ ಬದೋನಿ (24 ಎಸೆತಗಳಲ್ಲಿ 30 ರನ್) ರನ್ ಗಳಿಸಿದ್ದರು.
(x/Cric_records45)(3 / 5)
2018ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 1 ವಿಕೆಟ್ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಚೇಸಿಂಗ್ ಮಾಡಿದ ಸನ್ ರೈಸರ್ಸ್ ದಿಢೀರ್ ಕುಸಿತಕ್ಕೊಳಗಾಯ್ತು. ಅಜೇಯ 32 ರನ್ ಗಳಿಸಿದ ದೀಪಕ್ ಹೂಡಾ ಅಂತಿಮ ಓವರ್‌ನಲ್ಲಿ ನಿರ್ಣಾಯಕ ಸಿಕ್ಸರ್ ಬಾರಿಸಿದರು. ತಂಡ ರೋಚಕ ಜಯ ಸಾಧಿಸಿತು.
(IPL Twitter)(4 / 5)
2018ರ ಋತುವಿನಲ್ಲಿ ಮತ್ತೊಂದು ಬಾರಿ ಮುಂಬೈ 1 ವಿಕೆಟ್ ಸೋಲು ಕಂಡಿತು. ಎರಡು ವರ್ಷಗಳ ನಿಷೇಧದ ನಂತರ ಲೀಗ್‌ಗೆ ಮರಳಿದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು 1 ವಿಕೆಟ್‌ನಿಂದ ಸೋಲಿಸಿತು. 166 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ 5 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತ್ತು. ಕೊನೆಯಲ್ಲಿ ಬ್ಯಾಟಿಂಗ್‌ನಿಂದ ನಿವೃತ್ತರಾಗಿದ್ದ ಕೇದಾರ್ ಜಾಧವ್ ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದರು. ಬೌಂಡರಿಯೊಂದಿಗೆ ತಂಡವನ್ನು ಗೆಲ್ಲಿಸಿದರು.
(x/CskIPLTeam)(5 / 5)
2015ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 1 ವಿಕೆಟ್ ಜಯ ಸಾಧಿಸಿತ್ತು. 184 ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್ ಪರ ರಸೆಲ್ ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಕೇವಲ 21 ಎಸೆತಗಳಲ್ಲಿ 51 ರನ್ ಗಳಿಸಿದರು. ಕೊನೆಯಲ್ಲಿ ಪ್ರಮುಖ ಬ್ಯಾಟರ್‌ಗಳು ಔಟಾಗಿದ್ದರಿಂದ ತಂಡ ಸೋಲುವ ಹಂತದಲ್ಲಿತ್ತು. ಆದರೆ ನರೈನ್ ವಿನ್ನಿಂಗ್ ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
(x/Rokte_Amarr_KKR)ಇತರ ಗ್ಯಾಲರಿಗಳು