ನಾವು ಸೋತಿದ್ದು ಒಳ್ಳೇದೇ ಆಯ್ತು; ಜಿತೇಶ್ ಶರ್ಮಾ ಅಚ್ಚರಿ ಮಾತು, ಪ್ಲೇಆಫ್ ಟೈಮಲ್ಲಿ ಹಿಂಗ್ಯಾಕೆ ಹೇಳಿದ್ರು?
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಾವು ಸೋತಿದ್ದು ಒಳ್ಳೇದೇ ಆಯ್ತು ಎಂದು ತಾತ್ಕಾಲಿಕ ನಾಯಕ ಜಿತೇಶ್ ಶರ್ಮಾ ಹೇಳಿರುವ ಮಾತು ಅಚ್ಚರಿ ಮೂಡಿಸಿದೆ. ಪ್ಲೇಆಫ್ ಸಮಯದಲ್ಲಿ ಹೀಗೆ ಹೇಳಲು ಕಾರಣ ಏನಿರಬಹುದು? ಇಲ್ಲಿದೆ ವಿವರ.
(1 / 9)
ಶುಕ್ರವಾರ (ಮೇ 23) ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 42 ರನ್ನಿಂದ ಸೋಲನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಪಿಎಲ್ 2025ರ ಪ್ಲೇಆಫ್‌ಗೆ ಮುಂಚಿತವಾಗಿ ಅಗ್ರ -2 ಸ್ಥಾನ ಪಡೆಯುವ ಆಸೆಗೆ ಧಕ್ಕೆ ತಂದಿದೆ.
(AFP)(2 / 9)
ಹೈಸ್ಕೋರಿಂಗ್ ಗೇಮ್ನಲ್ಲಿ ಸೋಲಿನ ಹೊರತಾಗಿಯೂ ಆರ್‌ಸಿಬಿ ತಂಡದ ತಾತ್ಕಾಲಿಕ ನಾಯಕ ಜಿತೇಶ್ ಶರ್ಮಾ ಅವರು ಪ್ರತಿಕ್ರಿಯಿಸಿ ಸೋತಿದ್ದು ಒಳ್ಳೆಯದೇ ಆಯಿತು ಎಂದು ಹೇಳಿದ್ದಾರೆ. ಈ ಹೇಳಿಕೆ ಎಲ್ಲರನ್ನೂ ದಂಗುಬಡಿಸಿದೆ.
(REUTERS)(3 / 9)
ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡವು ಇಶಾನ್ ಕಿಶನ್ (94) ಬ್ಯಾಟಿಂಗ್ ಅಬ್ಬರದಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ 189 ರನ್ಗೆ ಆಲೌಟ್ ಆಯಿತು. ಸಾಲ್ಟ್ 62, ಕೊಹ್ಲಿ 43 ರನ್ ಸಿಡಿಸಿದರು.
(AFP)(4 / 9)
ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್, ನಾಯಕ ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ನಿರಾಸೆ ಮೂಡಿಸಿದರು. 173 ರನ್ ತನಕ 3 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ 189 ರನ್ಗೆ ಸರ್ವಪತನ ಕಂಡಿತು.
(AFP)(5 / 9)
ರಜತ್ ಪಾಟೀದಾರ್ ಗಾಯಗೊಂಡಿದ್ದ ಕಾರಣ ನಾಯಕತ್ವವನ್ನು ಜಿತೇಶ್ ಶರ್ಮಾ ವಹಿಸಿಕೊಂಡಿದ್ದರು. ಪಂದ್ಯ ಸೋಲಿನ ನಂತರ ಮಾತನಾಡಿದ ಜಿತೇಶ್, ನನ್ನ ಪ್ರಕಾರ 20-30 ರನ್ ಹೆಚ್ಚುವರಿ ನೀಡಿದ್ದೇವೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
(AP)(6 / 9)
ಎದುರಾಳಿ ತಂಡದ ದಾಳಿಗೆ ನನ್ನಲ್ಲಿ ಯಾವುದೇ ಉತ್ತರ ಇರಲಿಲ್ಲ. ಆದರೆ ಈ ಪಂದ್ಯವನ್ನು ಸೋತಿದ್ದು ಒಳ್ಳೆಯದೇ ಆಯ್ತು. ಏಕೆಂದರೆ ಏನೆಲ್ಲಾ ತಪ್ಪು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಲು ಮತ್ತು ಪರಾಮರ್ಶೆ ನಡೆಸಲು ಇದು ಸಕಾಲ ಎಂದು ಹೇಳಿದ್ದಾರೆ.
(PTI)(7 / 9)
ನಿರ್ಣಾಯಕ ಪ್ಲೇಆಫ್‌ಗಳಿಗೆ ಮುಂಚಿತವಾಗಿ ತಮ್ಮನ್ನು ತಾವು ತಿದ್ದಿಕೊಳ್ಳಲು ಈ ಸೋಲು ನೆರವಾಗುತ್ತದೆ. ವಿಶ್ಲೇಷಿಸಿಕೊಳ್ಳಲು ಇದು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ ಜಿತೇಶ್ ಶರ್ಮಾ.
(PTI)(8 / 9)
ಟಿಮ್ ಡೇವಿಡ್ ಗಾಯದ ಕುರಿತು ಮಾತನಾಡಿದ ಜಿತೇಶ್, 'ನಾನು ಔಟಾದ ಬೇಸರದಲ್ಲಿದ್ದ ಕಾರಣ ಡೇವಿಡ್ ಅವರನ್ನು ಭೇಟಿಯಾಗಿಲ್ಲ. ಆದರೆ ತಾನು ಗಾಯದ ನೋವನ್ನು ಸಹಿಸಿಕೊಂಡೇ ಬ್ಯಾಟಿಂಗ್ಗೆ ತೆರಳಿದರು ಎಂದು ಹೇಳಿದ್ದಾರೆ.
(PTI)ಇತರ ಗ್ಯಾಲರಿಗಳು