ಸದ್ದು ಮಾಡುತ್ತಿಲ್ಲ ಐಪಿಎಲ್‌ನ ದುಬಾರಿ ಆಟಗಾರನ ಬ್ಯಾಟ್; ಅತಿ ಕಡಿಮೆ ಸ್ಟ್ರೈಕ್ ರೇಟ್ ಹೊಂದಿರುವ 5 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸದ್ದು ಮಾಡುತ್ತಿಲ್ಲ ಐಪಿಎಲ್‌ನ ದುಬಾರಿ ಆಟಗಾರನ ಬ್ಯಾಟ್; ಅತಿ ಕಡಿಮೆ ಸ್ಟ್ರೈಕ್ ರೇಟ್ ಹೊಂದಿರುವ 5 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ

ಸದ್ದು ಮಾಡುತ್ತಿಲ್ಲ ಐಪಿಎಲ್‌ನ ದುಬಾರಿ ಆಟಗಾರನ ಬ್ಯಾಟ್; ಅತಿ ಕಡಿಮೆ ಸ್ಟ್ರೈಕ್ ರೇಟ್ ಹೊಂದಿರುವ 5 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ

ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಹಲವು ಆಟಗಾರರು ಐಪಿಎಲ್ 2025ರಲ್ಲಿ ಮಂಕಾಗಿದ್ದಾರೆ. ಈ ಬ್ಯಾಟರ್‌ಗಳು ಈ ಬಾರಿ ಕಳಪೆ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 18ನೇ ಆವೃತ್ತಿಯಲ್ಲಿ ಕನಿಷ್ಠ 100 ಎಸೆತಗಳನ್ನು ಎದುರಿಸಿ ಕಡಿಮೆ ಸ್ಟ್ರೈಕ್‌ ರೇಟ್‌ ಇರುವ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.

ರಿಷಭ್ ಪಂತ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ. ಕಳೆದ ವರ್ಷ ಅವರನ್ನು ಲಕ್ನೋ ತಂಡ 27 ಕೋಟಿ ರೂ.ಗೆ ಖರೀದಿಸಿತು. ಆದರೆ ಈ ಋತುವಿನಲ್ಲಿ ಅವರು ತೀರಾ ಕಳಪೆ ಪ್ರದರ್ಶನ ನೀಡಿದ್ದಾರೆ.
icon

(1 / 6)

(PTI)

ಪಂತ್ ಸ್ಟ್ರೈಕ್ ರೇಟ್ 100ಕ್ಕಿಂತ ಕಡಿಮೆ ಇದೆ. ಇಲ್ಲಿಯವರೆಗೆ ಅವರು 11 ಪಂದ್ಯಗಳಲ್ಲಿ 12.8ರ ಸರಾಸರಿಯಲ್ಲಿ ಕೇವಲ 128 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 99.22.
icon

(2 / 6)

ನಿತೀಶ್ ಕುಮಾರ್ ರೆಡ್ಡಿ: ಸನ್‌ರೈಸರ್ಸ್ ಹೈದರಾಬಾದ್ ತಂಡದ ನಿತೀಶ್ ಕುಮಾರ್ ರೆಡ್ಡಿ ಅವರ ಸ್ಟ್ರೈಕ್ ರೇಟ್ ಕೇವಲ 120.14. ಐಪಿಎಲ್ 2025ರಲ್ಲಿ ಕನಿಷ್ಠ 100 ಎಸೆತಗಳನ್ನು ಆಡಿದ ಬ್ಯಾಟರ್‌ಗಳ ಪೈಕಿ ಪಂತ್ ನಂತರ ನಿತೀಶ್ ಸ್ಟ್ರೈಕ್ ರೇಟ್ ಅತ್ಯಂತ ಕೆಟ್ಟದಾಗಿದೆ. ರೆಡ್ಡಿ 10 ಪಂದ್ಯಗಳಲ್ಲಿ 173 ರನ್ ಗಳಿಸಿದ್ದಾರೆ.
icon

(3 / 6)

(AFP)

ವಿಲ್ ಜಾಕ್ಸ್: ಮುಂಬೈ ಇಂಡಿಯನ್ಸ್ ಪರ ಆಡುವ ಇಂಗ್ಲೆಂಡ್ ಬ್ಯಾಟರ್ ವಿಲ್ ಜ್ಯಾಕ್ಸ್, ಐಪಿಎಲ್ 2025ರಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಇಲ್ಲಿಯವರೆಗೆ ಅವರು 10 ಪಂದ್ಯಗಳಲ್ಲಿ 142 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 122.41.
icon

(4 / 6)

ಡೇವಿಡ್ ಮಿಲ್ಲರ್: ಐಪಿಎಲ್ 2025ರಲ್ಲಿ ಕಳಪೆ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಅಪಾಯಕಾರಿ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ಮಿಲ್ಲರ್, ಇದುವರೆಗೆ 11 ಪಂದ್ಯಗಳಲ್ಲಿ 153 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೇವಲ 127.5 ಆಗಿದೆ.
icon

(5 / 6)

ರಚಿನ್ ರವೀಂದ್ರ: ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ನ್ಯೂಜಿಲೆಂಡ್ ಬ್ಯಾಟರ್ ರಚಿನ್ ರವೀಂದ್ರ ಅವರ ಪ್ರದರ್ಶನವೂ ನಿರಾಶಾದಾಯಕವಾಗಿದೆ. ಅವರು ಇದುವರೆಗೆ 8 ಪಂದ್ಯಗಳಲ್ಲಿ 191 ರನ್ ಮಾತ್ರ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 128.19.
icon

(6 / 6)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು