ಲಕ್ನೋ ಸೂಪರ್ ಜೈಂಟ್ಸ್ ಪರ ರಿಷಭ್ ಪಂತ್ ಪದಾರ್ಪಣೆ; ಯುವರಾಜ್ ಸಿಂಗ್, ಸ್ಮಿತ್ ಹಿಂದಿಕ್ಕಲಿದ್ದಾರೆ ಎಲ್‌ಎಸ್‌ಜಿ ನಾಯಕ
- ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಪರ ರಿಷಭ್ ಪಂತ್ ಪದಾರ್ಪಣೆ ಪಂದ್ಯವಾಡಲು ಸಜ್ಜಾಗಿದ್ದಾರೆ. ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಲಕ್ನೋ ಪರ ಪಂತ್ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಆಡಲಿದ್ದಾರೆ. ಇಂದು (ಮಾ.24) ಲಕ್ನೋ ನಾಯಕತ್ವ ವಹೊಸುವ ಮೂಲಕ ಪಂತ್ ಹೊಸ ದಾಖಲೆ ನಿರ್ಮಿಸಲಿದ್ದಾರೆ.
- ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಪರ ರಿಷಭ್ ಪಂತ್ ಪದಾರ್ಪಣೆ ಪಂದ್ಯವಾಡಲು ಸಜ್ಜಾಗಿದ್ದಾರೆ. ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಲಕ್ನೋ ಪರ ಪಂತ್ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಆಡಲಿದ್ದಾರೆ. ಇಂದು (ಮಾ.24) ಲಕ್ನೋ ನಾಯಕತ್ವ ವಹೊಸುವ ಮೂಲಕ ಪಂತ್ ಹೊಸ ದಾಖಲೆ ನಿರ್ಮಿಸಲಿದ್ದಾರೆ.
(1 / 8)
ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಪಂತ್, ಬರೋಬ್ಬರಿ 27 ಕೋಟಿ ರೂ. ದಾಖಲೆಯ ಬೆಲೆಗೆ ಲಕ್ನೋ ಫ್ರಾಂಚೈಸಿ ಸೇರಿಕೊಂಡರು. ಅದರ ಬೆನ್ನಲ್ಲೇ ನಿರೀಕ್ಷೆಯಂತೆಯೇ ತಂಡದ ನಾಯಕನಾಗಿ ನೇಮಕಗೊಂಡರು.
(HT_PRINT)(2 / 8)
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ, ಇಂದು ತಮ್ಮ ಹಳೆಯ ತಂಡದ ವಿರುದ್ಧ ಎಲ್‌ಎಸ್‌ಜಿ ಪರ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
(HT_PRINT)(3 / 8)
ಡಿಸಿ ವಿರುದ್ಧ ಆಡುವ ಮೂಲಕ ರಿಷಭ್ ಅವರು ಯುವರಾಜ್ ಸಿಂಗ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಲಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ನಾಯಕರ ಪಟ್ಟಿಯಲ್ಲಿ ಈ ಇಬ್ಬರನ್ನು ಪಂತ್ ಹಿಂದಿಕ್ಕಲಿದ್ದಾರೆ.
(HT_PRINT)(4 / 8)
ಯುವರಾಜ್, ಸ್ಮಿತ್ ಮತ್ತು ದಿನೇಶ್ ಕಾರ್ತಿಕ್ ನಾಯಕರಾಗಿ 43 ಪಂದ್ಯಗಳನ್ನು ಆಡಿದ್ದಾರೆ. 2021ರಲ್ಲಿ ಐಪಿಎಲ್ ನಾಯಕನಾಗಿ ಚೊಚ್ಚಲ ಪಂದ್ಯವಾಡಿದ ರಿಷಭ್, ಸೋಮವಾರ (ಮಾರ್ಚ್ 24) ನಾಯಕನಾಗಿ ತಮ್ಮ 44ನೇ ಪಂದ್ಯ ಆಡಲಿದ್ದಾರೆ.
(AFP)(5 / 8)
ಐಪಿಎಲ್ 2021ರ ಮೊದಲ ಹಂತದಲ್ಲಿ ರಿಷಭ್ ಐಪಿಎಲ್ ನಾಯಕನಾದರು. ಭುಜದ ಸಮಸ್ಯೆಯಿಂದಾಗಿ ಋತುವಿನಿಂದ ಹೊರಗುಳಿದ ಶ್ರೇಯಸ್ ಅಯ್ಯರ್ ಅವರ ಬದಲಿಗೆ ನಾಯಕನಾಗಿ ಆಯ್ಕೆಯಾದರು. ಅಯ್ಯರ್ ಎರಡನೇ ಹಂತಕ್ಕೆ ತಂಡಕ್ಕೆ ಮರಳಿದಾಗಲೂ ರಿಷಭ್ ನಾಯಕತ್ವ ಉಳಿಸಿಕೊಂಡರು.
(AFP)(6 / 8)
ಐಪಿಎಲ್ 2022ರ ಮೆಗಾ-ಹರಾಜಿಗೂ ಮೊದಲು ಡೆಲ್ಲಿ ತಂಡ ರಿಷಭ್ ಅವರನ್ನು ಉಳಿಸಿಕೊಂಡಿತು. ಜೊತೆಗೆ ನಾಯಕತ್ವವನ್ನೂ ಮುಂದುವರೆಸಿತು. ಐಪಿಎಲ್ 2024ರಲ್ಲಿ ಮತ್ತೆ ತಂಡದ ನಾಯಕನಾಗಿ ಮರಳಿದರು.
(AFP)(7 / 8)
ಐಪಿಎಲ್ 2025ರ ಆವೃತ್ತಿಗೆ ಮೆಗಾ ಹರಾಜಿಗೆ ನಿಂತ ಪಂತ್, ದಾಖಲೆಯ ಮೊತ್ತಕ್ಕೆ ಎಲ್ಎಸ್‌ಜಿ ಸೇರಿಕೊಂಡರು. ಡೆಲ್ಲಿ ಕೂಡಾ ಪಂತ್‌ಗೆ ಬಿಡ್ ಮಾಡಿತು. ಆದರೆ, ದುಬಾರಿ ಮೊತ್ತ ನೀಡಲು ಫ್ರಾಂಚೈಸಿಯಿಂದ ಸಾಧ್ಯವಾಗಲಿಲ್ಲ.
(Bibhash Lodh)ಇತರ ಗ್ಯಾಲರಿಗಳು