ಐಪಿಎಲ್‌ನಲ್ಲಿ ಅಣ್ಣ-ತಮ್ಮನ ಅಪರೂಪದ ದಾಖಲೆ; ಕೊನೆಗೂ ಶಾನ್ ಮಾರ್ಷ್ ಮೈಲಿಗಲ್ಲು ತಲುಪಿದ ಮಿಚೆಲ್ ಮಾರ್ಷ್
ಐಪಿಎಲ್ 18ರ ಆವೃತ್ತಿಯಲ್ಲಿ ಮಿಚೆಲ್ ಮಾರ್ಷ್ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅವರು ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 64 ಎಸೆತಗಳಲ್ಲಿ 117 ರನ್ ಗಳಿಸುವ ಮೂಲಕ ಲೀಗ್ ಇತಿಹಾಸದಲ್ಲಿ ತಮ್ಮ ಮೊದಲ ಶತಕ ಗಳಿಸಿದರು. ಇದರೊಂದಿಗೆ ವಿಶೇಷ ದಾಖಲೆಗೆ ಸಾಕ್ಷಿಯಾದರು.
(1 / 6)
2010ರ ಋತುವಿನ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದ ನಂತರ ಮಿಚೆಲ್ ತಮ್ಮ ವೃತ್ತಿಜೀವನದ ಮೊದಲ ಐಪಿಎಲ್ ಶತಕ ಸಿಡಿಸಿದರು. ಈವರೆಗೆ ಆರು ತಂಡಗಳ ಪರ ಆಡಿರುವ ಅವರು ತಮ್ಮ 54ನೇ ಪಂದ್ಯದಲ್ಲಿ ಸೆಂಚುರಿ ಬಾರಿಸಿದರು.
(AFP)(2 / 6)
2025ರ ಋತುವಿನಲ್ಲಿ ಎಲ್‌ಎಸ್‌ಜಿ ಪರ ಆಡುತ್ತಿರುವ ಅವರು, ಇದಕ್ಕೂ ಮೊದಲು ಡೆಕ್ಕನ್ ಚಾರ್ಜರ್ಸ್, ಪುಣೆ ವಾರಿಯರ್ಸ್ ಇಂಡಿಯಾ, ರೈಸಿಂಗ್ ಪುಣೆ ಸೂಪರ್‌ಜೈಂಟ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
(AFP)(3 / 6)
15 ವರ್ಷಗಳ ಕಾಯುವಿಕೆಯ ನಂತರ ಅವರು ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದರು. ಪಂದ್ಯಾವಳಿಯಲ್ಲಿ ಮೊದಲ ಪಂದ್ಯ ಹಾಗೂ ಶತಕದ ನಡುವಿನ ಸುದೀರ್ಘ ಅವಧಿ ಇದಾಗಿದೆ. ಮೊದಲ ಶತಕಕ್ಕೆ 15 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡ ವಿಶ್ವದ ಮೊದಲ ಆಟಗಾರ ಮಾರ್ಷ್.
(Surjeet Yadav)(4 / 6)
ಇದಕ್ಕೂ ಮೊದಲು ಶಿಖರ್ ಧವನ್ ಮತ್ತು ಸುನಿಲ್ ನರೈನ್ ತಮ್ಮ ಚೊಚ್ಚಲ ಶತಕವನ್ನು 12 ವರ್ಷಗಳ ನಂತರ ಗಳಿಸಿದ್ದರು. ಧವನ್ ತಮ್ಮ ಮೊದಲ ಐಪಿಎಲ್ ಶತಕಕ್ಕೂ ಮೊದಲು ಅತಿ ಹೆಚ್ಚು ಇನ್ನಿಂಗ್ಸ್ ಆಡಿದ ದಾಖಲೆಯನ್ನು (167) ಕೂಡಾ ಹೊಂದಿದ್ದಾರೆ.
(PTI)(5 / 6)
ಮಾರ್ಷ್ ಜೋಡಿಯ ದಾಖಲೆ: ಮಾರ್ಷ್ ಸಹೋದರರು ಐಪಿಎಲ್‌ನಲ್ಲಿ ಶತಕ ಗಳಿಸಿದ ಮೊದಲ ಸಹೋದರರಾಗಿದ್ದಾರೆ. 2008ರಲ್ಲಿ ನಡೆದ ಉದ್ಘಾಟನಾ ಋತುವಿನಲ್ಲಿ ಶಾನ್ ಮಾರ್ಷ್ ಶತಕ ಸಿಡಿಸಿದ್ದರು. ಆದರೆ ಮಿಚೆಲ್ ಮಾರ್ಷ್ ಈ ಮೈಲಿಗಲ್ಲನ್ನು ತಲುಪಲು ಅತಿ ಹೆಚ್ಚು ಸಮಯ (15 ವರ್ಷಗಳು) ತೆಗೆದುಕೊಂಡಿದ್ದಾರೆ.
(PTI)ಇತರ ಗ್ಯಾಲರಿಗಳು