ಟ್ರೋಫಿ ಗೆಲ್ಲದ ತಂಡಗಳೇ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿರೋದು; ಆರ್ಸಿಬಿ ಫಸ್ಟ್!
- ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಬಹುತೇಕ ತಂಡಗಳು ಶತಕಗಳನ್ನು ದಾಖಲಿಸಿವೆ. ಅತಿ ಹೆಚ್ಚು ಶತಕ ಬಾರಿಸಿದ ತಂಡಗಳ ಪೈಕಿ ಅಗ್ರ 4ರಲ್ಲಿ ಟ್ರೋಫಿ ಗೆಲ್ಲದ 3 ತಂಡಗಳು ಸ್ಥಾನ ಪಡೆದಿವೆ. ಅವುಗಳ ಪಟ್ಟಿ ಇಂತಿದೆ.
- ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಬಹುತೇಕ ತಂಡಗಳು ಶತಕಗಳನ್ನು ದಾಖಲಿಸಿವೆ. ಅತಿ ಹೆಚ್ಚು ಶತಕ ಬಾರಿಸಿದ ತಂಡಗಳ ಪೈಕಿ ಅಗ್ರ 4ರಲ್ಲಿ ಟ್ರೋಫಿ ಗೆಲ್ಲದ 3 ತಂಡಗಳು ಸ್ಥಾನ ಪಡೆದಿವೆ. ಅವುಗಳ ಪಟ್ಟಿ ಇಂತಿದೆ.
(1 / 7)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ತಂಡ ಗರಿಷ್ಠ ಶತಕಗಳ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ಸಿಡಿಸಿರುವ 8 ಐಪಿಎಲ್ ಶತಕಗಳೂ ಸೇರಿದಂತೆ ಆರ್ಸಿಬಿ ಒಟ್ಟು 19 ಶತಕ ಗಳಿಸಿದೆ.
(2 / 7)
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ಒಟ್ಟು 17 ಶತಕ ಬಾರಿಸಿದೆ. ಉದ್ಘಾಟನಾ ಆವೃತ್ತಿಯಲ್ಲಿ ಆರ್ಆರ್ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದಿತ್ತು.
(3 / 7)
ಪಂಜಾಬ್ ಕಿಂಗ್ಸ್ ಐಪಿಎಲ್ 2025ರಲ್ಲಿ ಭರ್ಜರಿ ಆರಂಭವನ್ನೇ ಕಂಡಿದೆ. ಪ್ರಿಯಾಂಶ್ ಆರ್ಯ ಪಂಜಾಬ್ ತಂಡದ ಪರ ಶತಕ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು ಶತಕಗಳ ಬಗ್ಗೆ ಮಾತನಾಡಿದರೆ, ಪಂಜಾಬ್ 16 ಶತಕ ಸಿಡಿಸಿದೆ. ಆದರೆ, ಆ ತಂಡ ಒಮ್ಮೆಯೂ ಐಪಿಎಲ್ ಗೆದ್ದಿಲ್ಲ.
(4 / 7)
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಒಟ್ಟು 10 ಶತಕ ಗಳಿಸಿದೆ. ಈ ತಂಡವೂ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.
(5 / 7)
ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಆದರೆ ಅತಿ ಹೆಚ್ಚು ಶತಕ ಸಿಡಿಸಿದ ತಂಡಗಳ ಪೈಕಿ 5ನೇ ಸ್ಥಾನದಲ್ಲಿದೆ. ಒಟ್ಟು 10 ಸೆಂಚುರಿಗಳನ್ನು ಸಿಡಿಸಿದೆ.
ಇತರ ಗ್ಯಾಲರಿಗಳು