ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಯಾರು, ಆರ್‌ಸಿಬಿ ಬೌಲರ್‌ಗೆ ಅಗ್ರಸ್ಥಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಯಾರು, ಆರ್‌ಸಿಬಿ ಬೌಲರ್‌ಗೆ ಅಗ್ರಸ್ಥಾನ

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಯಾರು, ಆರ್‌ಸಿಬಿ ಬೌಲರ್‌ಗೆ ಅಗ್ರಸ್ಥಾನ

  • ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್‌ ಬಾಲ್ ಎಸೆದ ಅಗ್ರ 6 ಆಟಗಾರರ ಪಟ್ಟಿಯಲ್ಲಿ ಐವರು ಭಾರತೀಯರೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಆರ್‌ಸಿಬಿ ವೇಗಿ ಅಗ್ರಸ್ಥಾನ ಪಡದಿದ್ದಾರೆ. ಸ್ಟಾರ್ ಸ್ಪಿನ್ನರ್ ಸುನಿಲ್ ನರೈನ್ ಏಕೈಕ ವಿದೇಶಿ ಬೌಲರ್ ಆಗಿದ್ದಾರೆ.

ಐಪಿಎಲ್‌ ಬ್ಯಾಟರ್‌ಗಳ ಆಟ ಎಂದೇ ಹೇಳುವವರು ಹೆಚ್ಚು. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಬೌಲರ್‌ಗಳನ್ನು ಕಾಡಿದ ಬ್ಯಾಟರ್‌ಗಳು ಸಾಕಷ್ಟು ಮಂದಿ ಇದ್ದಾರೆ. ಈ ನಡುವೆ ಇಂದು ನಾವು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದು ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಬೌಲರ್‌ಗಳನ್ನು ನೋಡೋಣ. ಹೆಚ್ಚು ಡಾಟ್‌ ಬಾಲ್‌ ಎಸೆದ ಟಾಪ್-6 ಬೌಲರ್‌ಗಳಲ್ಲಿ 5 ಮಂದಿ ಭಾರತೀಯರೇ.
icon

(1 / 7)

ಜಸ್ಪ್ರೀತ್ ಬುಮ್ರಾ: ಗಾಯದಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿರುವ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ 1292 ಎಸೆತಗಳೊಂದಿಗೆ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.
icon

(2 / 7)

ಹರ್ಭಜನ್ ಸಿಂಗ್: 2021ರಲ್ಲಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ ಭಜ್ಜಿ 1312 ಡಾಟ್ ಬಾಲ್‌ಗಳೊಂದಿಗೆ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
icon

(3 / 7)

ಪಿಯೂಷ್ ಚಾವ್ಲಾ: ಈ ಪಟ್ಟಿಯಲ್ಲಿರುವ ಏಕೈಕ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ, ಅವರು ಐಪಿಎಲ್ ಇತಿಹಾಸದಲ್ಲಿ 1358 ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ್ದಾರೆ.
icon

(4 / 7)

ಆರ್ ಅಶ್ವಿನ್: ಭಾರತದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ 1612 ಎಸೆತಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಈ ವರ್ಷ ಸಿಎಸ್‌ಕೆ ತಂಡದ ಪರ ಮತ್ತೆ ಆಡುತ್ತಿದ್ದಾರೆ.
icon

(5 / 7)

ಸುನಿಲ್ ನರೈನ್: ಕೆಕೆಆರ್‌ ತಂಡ ಶಕ್ತಿಶಾಲಿ ಸ್ಪಿನ್ನರ್ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ವಿದೇಶಿ ಬೌಲರ್. ನರೈನ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 1636 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.
icon

(6 / 7)

ಭುವನೇಶ್ವರ್ ಕುಮಾರ್ ನಂ.1: ಈ ವರ್ಷ ಆರ್‌ಸಿಬಿ ಸೇರಿದ ಭುವನೇಶ್ವರ್ ಕುಮಾರ್ ಗರಿಷ್ಠ 1729 ಡಾಟ್ ಬಾಲ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭುವಿ ಟೂರ್ನಿಯ ಇತಿಹಾಸದಲ್ಲಿ ಒಟ್ಟು 3910 ಎಸೆತಗಳನ್ನು ಎಸೆದಿದ್ದು, ಅದರಲ್ಲಿ ಶೇ 44ರಷ್ಟು ಡಾಟ್ ಬಾಲ್‌ಗಳಾಗಿವೆ.
icon

(7 / 7)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು