ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್; ಸಚಿನ್​ರ 15 ವರ್ಷಗಳ ದಾಖಲೆ ಮುರಿದ ಸೂರ್ಯಕುಮಾರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್; ಸಚಿನ್​ರ 15 ವರ್ಷಗಳ ದಾಖಲೆ ಮುರಿದ ಸೂರ್ಯಕುಮಾರ್

ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್; ಸಚಿನ್​ರ 15 ವರ್ಷಗಳ ದಾಖಲೆ ಮುರಿದ ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ ಅವರು ಸಚಿನ್ ತೆಂಡೂಲ್ಕರ್ ಅವರ 15 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. ಅವರು ಒಂದೇ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಸೂರ್ಯ ಪ್ರಸಕ್ತ ಋತುವಿನಲ್ಲಿ 14 ಇನ್ನಿಂಗ್ಸ್​ಗಳಲ್ಲಿ 640 ರನ್ ಕಲೆ ಹಾಕುವುದರೊಂದಿಗೆ ಸಚಿನ್ ತೆಂಡೂಲ್ಕರ್ ಅವರ 15 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. 2025ರ ಐಪಿಎಲ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 3ನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸಕ್ತ ಋತುವಿನಲ್ಲಿ ಸೂರ್ಯ 5 ಅರ್ಧಶತಕ ಸಿಡಿಸಿದ್ದಾರೆ.
icon

(1 / 6)

(AP)

2010ರಲ್ಲಿ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಅವರು ಒಂದೇ ಆವೃತ್ತಿಯಲ್ಲಿ 618 ರನ್ ಗಳಿಸಿದ್ದರು. ಮುಂಬೈ ಇಂಡಿಯನ್ಸ್​​ನ ಮಾಜಿ ಬ್ಯಾಟರ್​ ಸಚಿನ್ ಅವರ ಈ ದಾಖಲೆ ಇದೀಗ ಬ್ರೇಕ್ ಆಗಿದೆ. ಮುಂಬೈ ಪರ ಸೂರ್ಯ 640 ರನ್ ಗಳಿಸಿ ಈ ದಾಖಲೆ ಅಳಿಸಿದ್ದಾರೆ.
icon

(2 / 6)

ಐಪಿಎಲ್ 2025ರಲ್ಲಿ ಸೂರ್ಯ ಮುಂಬೈ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೂರ್ಯ 640 ರನ್ ಸಿಡಿಸಿದ್ದಾರೆ. ತನ್ನ ಐಪಿಎಲ್ ವೃತ್ತಿಜೀವನದಲ್ಲಿ 2ನೇ ಬಾರಿಗೆ 600 ಪ್ಲಸ್ ಸ್ಕೋರ್ ಮಾಡಿದ್ದಾರೆ. 2023ರಲ್ಲಿ ಈ ಮೊದಲು ಸಾಧನೆ ಮಾಡಿದ್ದರು.
icon

(3 / 6)

(AFP)

ಐಪಿಎಲ್ 2010ರ ನಂತರ ಸಚಿನ್ ತೆಂಡೂಲ್ಕರ್ ಐಪಿಎಲ್​​ನ 4ನೇ ಋತುವಿನಲ್ಲಿ ಸಾಕಷ್ಟು ರನ್ ಗಳಿಸಿದರು. ಆ ಋತುವಿನಲ್ಲಿ ಅವರು 553 ರನ್ ಗಳಿಸಿದ್ದರು. ಇದು ಮುಂಬೈ ಪರ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಗೆ ಸೇರಿಸಿದೆ.
icon

(4 / 6)

ಲೆಂಡ್ಲ್ ಸಿಮನ್ಸ್ 2015ರಲ್ಲಿ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ್ದರು. ಎಂಟನೇ ಆವೃತ್ತಿಯಲ್ಲಿ ಸಿಮನ್ಸ್ 540 ರನ್ ಗಳಿಸಿದ್ದರು.
icon

(5 / 6)

2013ರಲ್ಲಿ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಬಾರಿಸಿದ್ದರು. ರೋಹಿತ್ 538 ರನ್ ಗಳಿಸಿದ್ದರು. ಮುಂಬೈ ಪರ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಗೆ ಸೇರಿಸಿದೆ.
icon

(6 / 6)

(PTI)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು