Most Runs in 2024: ಈ ವರ್ಷ ಅತಿ ಹೆಚ್ಚು ರನ್ ಸಿಡಿಸಿದ ಟಾಪ್-5 ಬ್ಯಾಟರ್​ಗಳು ಇವರೇ; ಜೈಸ್ವಾಲ್​ಗೆ 2ನೇ ಸ್ಥಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Most Runs In 2024: ಈ ವರ್ಷ ಅತಿ ಹೆಚ್ಚು ರನ್ ಸಿಡಿಸಿದ ಟಾಪ್-5 ಬ್ಯಾಟರ್​ಗಳು ಇವರೇ; ಜೈಸ್ವಾಲ್​ಗೆ 2ನೇ ಸ್ಥಾನ

Most Runs in 2024: ಈ ವರ್ಷ ಅತಿ ಹೆಚ್ಚು ರನ್ ಸಿಡಿಸಿದ ಟಾಪ್-5 ಬ್ಯಾಟರ್​ಗಳು ಇವರೇ; ಜೈಸ್ವಾಲ್​ಗೆ 2ನೇ ಸ್ಥಾನ

  • 2024 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟೆಸ್ಟ್​, ಏಕದಿನ, ಟಿ20ಐ) ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ. ಒಬ್ಬ ಭಾರತೀಯ, ಶ್ರೀಲಂಕಾ ಮತ್ತು ಇಂಗ್ಲೆಂಡ್‌ನ ತಲಾ ಇಬ್ಬರು ಆಟಗಾರರು ಈ ಪಟ್ಟಿಯಲ್ಲಿದ್ದಾರೆ.

ಶ್ರೀಲಂಕಾದ ವಿಕೆಟ್‌ಕೀಪರ್-ಬ್ಯಾಟರ್​ ಕುಸಾಲ್ ಮೆಂಡಿಸ್ ಅವರು ಈ ವರ್ಷ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 48 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು, 37.20ರ ಬ್ಯಾಟಿಂಗ್ ಸರಾಸರಿಯಲ್ಲಿ 1860 ರನ್ ಗಳಿಸಿದ್ದಾರೆ. 2 ಶತಕ, 11 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಮೆಂಡಿಸ್ 9 ಟೆಸ್ಟ್, 17 ಏಕದಿನ, 22 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
icon

(1 / 5)

(AFP)

2024ರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಯಶಸ್ವಿ ಜೈಸ್ವಾಲ್ 2ನೇ ಸ್ಥಾನದಲ್ಲಿದ್ದಾರೆ. ಯುವ ಆರಂಭಿಕ ಆಟಗಾರ 23 ಪಂದ್ಯಗಳಲ್ಲಿ 52.08ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಶತಕ, 11 ಅರ್ಧಶತಕ ಸಹಿತ 1771 ರನ್‌ ಗಳಿಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿರುವ ನಾಲ್ಕು ಟೆಸ್ಟ್‌ಗಳಲ್ಲಿ 359 ರನ್ ಗಳಿಸಿದ್ದಾರೆ. ಈ ವರ್ಷ ಅವರು 15 ಟೆಸ್ಟ್, 7 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅವರಿನ್ನೂ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿಲ್ಲ.
icon

(2 / 5)

ಶ್ರೀಲಂಕಾ ಬ್ಯಾಟ್ಸ್‌ಮನ್ ಪಾಥುಮ್ ನಿಸ್ಸಾಂಕಾ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಅವರು 2024ರಲ್ಲಿ 37 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 44.63ರ ಸರಾಸರಿಯಲ್ಲಿ ನಾಲ್ಕು ಶತಕ ಮತ್ತು 9 ಅರ್ಧ ಶತಕ ಸಹಿತ 1,696 ರನ್ ಗಳಿಸಿದ್ದಾರೆ. ನಿಸ್ಸಾಂಕ ಅವರು 6 ಟೆಸ್ಟ್, 12 ಏಕದಿನ ಮತ್ತು 19 ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.
icon

(3 / 5)

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 27 ಪಂದ್ಯಗಳಲ್ಲಿ 58.33ರ ಬ್ಯಾಟಿಂಗ್ ಸರಾಸರಿಯಲ್ಲಿ 5 ಶತಕ, 6 ಅರ್ಧಶತಕ ಸಹಿತ 1575 ರನ್ ಗಳಿಸಿದ್ದಾರೆ. ಬ್ರೂಕ್ ಈ ವರ್ಷ 12 ಟೆಸ್ಟ್, 5 ಏಕದಿನ, 10 ಟಿ20 ಪಂದ್ಯಗಳನ್ನು ಆಡಿದ್ದಾರೆ.
icon

(4 / 5)

ಇಂಗ್ಲೆಂಡ್‌ನ ದಿಗ್ಗಜ ಬ್ಯಾಟ್ಸ್‌ಮನ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5ನೇ ಆಟಗಾರನಾಗಿದ್ದು, 17 ಪಂದ್ಯಗಳಲ್ಲಿ 1556 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 55.57. ಈ ವರ್ಷ ಅವರು 6 ಶತಕ, ಐದು ಅರ್ಧಶತಕ ಸಿಡಿಸಿದ್ದಾರೆ. ರೂಟ್ ಈ ವರ್ಷ ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿದ್ದಾರೆ.
icon

(5 / 5)

(AP)

ಇತರ ಗ್ಯಾಲರಿಗಳು