ಭಾರತಕ್ಕೆ ಗೆಲುವಿನ ತಿಲಕವನ್ನಿಟ್ಟ ತಿಲಕ್ ವರ್ಮಾ ದಾಖಲೆ; ಕೊಹ್ಲಿ-ಸ್ಯಾಮ್ಸನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಹೈದರಾಬಾದ್ ಆಟಗಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತಕ್ಕೆ ಗೆಲುವಿನ ತಿಲಕವನ್ನಿಟ್ಟ ತಿಲಕ್ ವರ್ಮಾ ದಾಖಲೆ; ಕೊಹ್ಲಿ-ಸ್ಯಾಮ್ಸನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಹೈದರಾಬಾದ್ ಆಟಗಾರ

ಭಾರತಕ್ಕೆ ಗೆಲುವಿನ ತಿಲಕವನ್ನಿಟ್ಟ ತಿಲಕ್ ವರ್ಮಾ ದಾಖಲೆ; ಕೊಹ್ಲಿ-ಸ್ಯಾಮ್ಸನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಹೈದರಾಬಾದ್ ಆಟಗಾರ

  • ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಅಜೇಯ 72 ರನ್ ಗಳಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ 22 ವರ್ಷದ ಯುವ ಆಟಗಾರ ತಿಲಕ್ ವರ್ಮಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟಿ20ಐ ಪಂದ್ಯದಲ್ಲಿ 55 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 72 ರನ್​ಗಳ ಇನ್ನಿಂಗ್ಸ್ ಕಟ್ಟಿದ ಯುವ ಆಟಗಾರ ತಿಲಕ್ ವರ್ಮಾ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
icon

(1 / 8)

(REUTERS)

ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದ ತಿಲಕ್ ವರ್ಮಾ ಭಾರತದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದು ಮಾತ್ರವಲ್ಲದೆ, ಇತಿಹಾಸವನ್ನೂ ಸೃಷ್ಟಿಸಿದರು. ಅವರೀಗ ಭಾರತ ಪರ ಸತತ 5 ಟಿ20ಐ ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
icon

(2 / 8)

(PTI)

ಈ ದಾಖಲೆಯ ಪಟ್ಟಿಯಲ್ಲಿದ್ದ ಬ್ಯಾಟಿಂಗ್ ಸೂಪರ್​ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. ಹಾಗಿದ್ದರೆ, ಟೀಮ್ ಇಂಡಿಯಾ ಪರ ಸತತ 5 ಟಿ20ಐ ಇನ್ನಿಂಗ್ಸ್‌ಗಳಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್ ಯಾರು?
icon

(3 / 8)

ಇಂಗ್ಲೆಂಡ್ ವಿರುದ್ಧ 72 ರನ್‌ಗಳ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದ ತಿಲಕ್ ವರ್ಮಾ ಈಗ ಸತತ 5 ಇನ್ನಿಂಗ್ಸ್‌ಗಳಲ್ಲಿ 338 ರನ್‌ ಗಳಿಸಿದ್ದಾರೆ. ಹೈದರಾಬಾದ್​ನ ಆಟಗಾರ ಈ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
icon

(4 / 8)

ಕೇರಳದ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಸತತ 5 ಟಿ20ಐ ಇನ್ನಿಂಗ್ಸ್​​ಗಳಲ್ಲಿ 327 ರನ್ ಗಳಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ತಿಲಕ್ ವರ್ಮಾ ಕಸಿದುಕೊಂಡಿದ್ದಾರೆ.
icon

(5 / 8)

(AFP)

ಭಾರತೀಯ ಟಿ20 ತಂಡದಿಂದ ಹೊರಗುಳಿದಿರುವ ಕೆಎಲ್ ರಾಹುಲ್, ಸತತ 5 ಇನ್ನಿಂಗ್ಸ್‌ಗಳಲ್ಲಿ 303 ರನ್ ಗಳಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
icon

(6 / 8)

ಟಿ20ಐ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಸತತ 5 ಇನ್ನಿಂಗ್ಸ್‌ಗಳಲ್ಲಿ 295 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
icon

(7 / 8)

ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಸತತ 5 ಟಿ20ಐ ಇನ್ನಿಂಗ್ಸ್​ಗಳಲ್ಲಿ 294 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
icon

(8 / 8)

(ANI)

ಇತರ ಗ್ಯಾಲರಿಗಳು