ಪ್ರಸಕ್ತ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು; ಅಗ್ರ-5 ಸ್ಥಾನಗಳಲ್ಲಿ ನಾಲ್ವರು ಭಾರತೀಯರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರಸಕ್ತ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು; ಅಗ್ರ-5 ಸ್ಥಾನಗಳಲ್ಲಿ ನಾಲ್ವರು ಭಾರತೀಯರು

ಪ್ರಸಕ್ತ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು; ಅಗ್ರ-5 ಸ್ಥಾನಗಳಲ್ಲಿ ನಾಲ್ವರು ಭಾರತೀಯರು

ಇಂಡಿಯನ್ ಪ್ರೀಮಿಯರ್ ಲೀಗ್​​​​ 2025ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್​ಗಳ ಪಟ್ಟಿಯಲ್ಲಿ ಯಾರಿದ್ದಾರೆ ನೋಡೋಣ. ಇಲ್ಲಿ ಭಾರತದ ನಾಲ್ವರೇ ಸ್ಥಾನ ಪಡೆದಿರುವುದು ವಿಶೇಷ.

ಐಪಿಎಲ್ 2025ರಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಗುಜರಾತ್ ಟೈಟಾನ್ಸ್​​ ತಂಡದ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದಾರೆ. 15 ಇನ್ನಿಂಗ್ಸ್​​ಗಳಲ್ಲಿ 54.21ರ ಬ್ಯಾಟಿಂಗ್ ಸರಾಸರಿಯಲ್ಲಿ 1 ಶತಕ ಮತ್ತು 6 ಅರ್ಧಶತಕ ಸಹಿತ ಒಟ್ಟು 759 ರನ್ ಗಳಿಸಿದ್ದಾರೆ. ಔಟಾಗದೆ 108 ರನ್ ಗಳಿಸಿದ್ದು ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 88 ಬೌಂಡರಿ ಮತ್ತು 21 ಸಿಕ್ಸರ್​​ಗಳನ್ನೂ ಬಾರಿಸಿ ಗಮನ ಸೆಳೆದಿದ್ದಾರೆ.
icon

(1 / 5)

ಮುಂಬೈ ಇಂಡಿಯನ್ಸ್​​ನ ಸೂರ್ಯಕುಮಾರ್ ಯಾದವ್ ಐಪಿಎಲ್ 2025ರಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಆಡಿದ 16 ಇನ್ನಿಂಗ್ಸ್​​ಗಳಲ್ಲಿ 65.18 ಸರಾಸರಿಯಲ್ಲಿ 5 ಅರ್ಧಶತಕ ಸಹಿತ 717 ರನ್ ಗಳಿಸಿದರು. ಅವರ ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಔಟಾಗದೆ 73 ರನ್ ಆಗಿದೆ. 69 ಬೌಂಡರಿ, 38 ಸಿಕ್ಸರ್ ಸಿಡಿಸಿದ್ದಾರೆ.
icon

(2 / 5)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ 2025ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​​ಮನ್​ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 15 ಇನ್ನಿಂಗ್ಸ್​​ಗಳಲ್ಲಿ 54.75 ಸರಾಸರಿಯಲ್ಲಿ 8 ಅರ್ಧಶತಕ ಸಹಿತ 657 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಔಟಾಗದೆ 73 ರನ್ ಆಗಿದೆ. 66 ಬೌಂಡರಿ ಮತ್ತು 19 ಸಿಕ್ಸರ್ ಸಿಡಿಸಿದ್ದಾರೆ.
icon

(3 / 5)

ಐಪಿಎಲ್ 2025 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ 4ನೇ ಸ್ಥಾನದಲ್ಲಿದ್ದಾರೆ. 15 ಇನ್ನಿಂಗ್ಸ್​​ಗಳಲ್ಲಿ 50ರ ಸರಾಸರಿಯಲ್ಲಿ ಆರು ಅರ್ಧಶತಕ ಸಹಿತ 650 ರನ್ ಗಳಿಸಿದರು. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಔಟಾಗದೆ 93 ರನ್ ಆಗಿದೆ. 62 ಬೌಂಡರಿ ಮತ್ತು 24 ಸಿಕ್ಸರ್ ಬಾರಿಸಿದ್ದಾರೆ.
icon

(4 / 5)

ಐಪಿಎಲ್ 2025ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್​​ನ ಮಿಚೆಲ್ ಮಾರ್ಷ್ 5ನೇ ಸ್ಥಾನದಲ್ಲಿದ್ದಾರೆ. 13 ಇನ್ನಿಂಗ್ಸ್​​​ಗಳಲ್ಲಿ 48.23 ಸರಾಸರಿಯಲ್ಲಿ  1 ಶತಕ ಮತ್ತು 6 ಅರ್ಧಶತಕ ಸಹಿತ 627 ರನ್ ಗಳಿಸಿದರು. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 117 ರನ್. ಅವರು 56 ಬೌಂಡರಿ ಮತ್ತು 37 ಸಿಕ್ಸರ್ ಬಾರಿಸಿದ್ದಾರೆ.
icon

(5 / 5)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು