ಒಂದೇ ಮೈದಾನದಲ್ಲಿ ಅತ್ಯಧಿಕ ಸಿಕ್ಸರ್​; ಕ್ರಿಸ್ ಗೇಲ್​ರನ್ನೇ ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಂದೇ ಮೈದಾನದಲ್ಲಿ ಅತ್ಯಧಿಕ ಸಿಕ್ಸರ್​; ಕ್ರಿಸ್ ಗೇಲ್​ರನ್ನೇ ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ

ಒಂದೇ ಮೈದಾನದಲ್ಲಿ ಅತ್ಯಧಿಕ ಸಿಕ್ಸರ್​; ಕ್ರಿಸ್ ಗೇಲ್​ರನ್ನೇ ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ

  • ಒಂದೇ ಮೈದಾನದಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿರುವ ಲೆಕ್ಕಾಚಾರದಲ್ಲಿ ಕ್ರಿಸ್ ಗೇಲ್ ಅವರ ವಿಶ್ವದಾಖಲೆಯನ್ನೇ ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ. ಆ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಸಿಕ್ಸರ್​ಗಳ ಮೂಲಕವೇ ವಿಶ್ವದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
icon

(1 / 8)

(REUTERS)

ವಿಶ್ವ ಕ್ರಿಕೆಟ್​ನಲ್ಲಿ ಸಿಕ್ಸರ್​ಗಳ ಕಿಂಗ್ ಎಂದೇ ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್​ ಗೇಲ್ ಅವರನ್ನೇ ಹಿಂದಿಕ್ಕುವ ಮೂಲಕ ನಯಾ ಸಿಕ್ಸರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
icon

(2 / 8)

ಮೈದಾನವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿರುವ ಬ್ಯಾಟ್ಸ್​ಮನ್ ಎಂಬ ಐತಿಹಾಸಿಕ ದಾಖಲೆಗೆ ವಿರಾಟ್ ಕೊಹ್ಲಿ ಒಳಗಾಗಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ 154 ಸಿಕ್ಸರ್ ಸಿಡಿಸಿ ಗೇಲ್ ದಾಖಲೆ ಮುರಿದಿದ್ದಾರೆ.
icon

(3 / 8)

(PTI)

ಚಿನ್ನಸ್ವಾಮಿ ಮೈದಾನದಲ್ಲೇ 151 ಸಿಕ್ಸರ್​ ಬಾರಿಸಿದ್ದ ಗೇಲ್, ಮೈದಾನ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ್ದ ವಿಶ್ವದಾಖಲೆ ಹೊಂದಿದ್ದರು. ಇದೀಗ ಆ ದಾಖಲೆಯನ್ನು ಕೊಹ್ಲಿ ಪಾಲಾಗಿದೆ. ವಿರಾಟ್ ಅಗ್ರಸ್ಥಾನ ಪಡೆದಿದ್ದರೆ, ನಂತರದ ಸ್ಥಾನದಲ್ಲಿ ಯಾರಿದ್ದಾರೆ? ಇಲ್ಲಿದೆ ವಿವರ.
icon

(4 / 8)

ಮೈದಾನವೊಂದರಲ್ಲಿ ಅತ್ಯಧಿಕ ಹೆಚ್ಚು ಸಿಕ್ಸರ್​​ ಬಾರಿಸಿದವರ ಪಟ್ಟಿಯಲ್ಲಿ ಕ್ರಿಸ್​ಗೇಲ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರು ಚಿನ್ನಸ್ವಾಮಿ ಮೈದಾನದಲ್ಲಿ 151 ಸಿಕ್ಸರ್​ ಬಾರಿಸಿದ್ದಾರೆ.
icon

(5 / 8)

ಮೂರನೇ ಸ್ಥಾನದಲ್ಲೂ ಕ್ರಿಸ್​ಗೇಲ್ ಅವರೇ ಸ್ಥಾನ ಪಡೆದಿದ್ದಾರೆ. ಅವರು ಬಾಂಗ್ಲಾದೇಶ ಮೀರ್​ಪುರ್ ಕ್ರಿಕೆಟ್ ಮೈದಾನದಲ್ಲಿ 138 ಸಿಕ್ಸರ್ ಬಾರಿಸಿದ್ದಾರೆ.
icon

(6 / 8)

ಇಂಗ್ಲೆಂಡ್​ನ ಸ್ಟಾರ್​ ಬ್ಯಾಟರ್ ಅಲೆಕ್ಸ್ ಹೇಲ್ಸ್​ ಇಂಗ್ಲೆಂಡ್​ನ ನಾಟಿಂಗ್​ಹ್ಯಾಮ್​​ ಮೈದಾನದಲ್ಲಿ 135 ಸಿಕ್ಸರ್​ ಬಾರಿಸಿದ್ದು, ನಾಲ್ಕನೇ ಸ್ಥಾನ ಪಡೆದಿದ್ದಾರೆ.
icon

(7 / 8)

ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್​ ಶರ್ಮಾ ಐದನೇ ಸ್ಥಾನ ಪಡೆದಿದ್ದಾರೆ. ಅವರು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ 122 ಸಿಕ್ಸರ್​ ಚಚ್ಚಿದ್ದಾರೆ.
icon

(8 / 8)

(Surjeet )

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು