ಆರ್​ಸಿಬಿ ಪರ 300 ಸಿಕ್ಸರ್, ಭಾರತದಲ್ಲಿ 9500 ಟಿ20 ರನ್; ಸಿಎಸ್​ಕೆ ವಿರುದ್ಧ ವಿರಾಟ್ ಕೊಹ್ಲಿ ದಾಖಲೆಗಳ ಸುರಿಮಳೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್​ಸಿಬಿ ಪರ 300 ಸಿಕ್ಸರ್, ಭಾರತದಲ್ಲಿ 9500 ಟಿ20 ರನ್; ಸಿಎಸ್​ಕೆ ವಿರುದ್ಧ ವಿರಾಟ್ ಕೊಹ್ಲಿ ದಾಖಲೆಗಳ ಸುರಿಮಳೆ

ಆರ್​ಸಿಬಿ ಪರ 300 ಸಿಕ್ಸರ್, ಭಾರತದಲ್ಲಿ 9500 ಟಿ20 ರನ್; ಸಿಎಸ್​ಕೆ ವಿರುದ್ಧ ವಿರಾಟ್ ಕೊಹ್ಲಿ ದಾಖಲೆಗಳ ಸುರಿಮಳೆ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಸಿಎಸ್​ಕೆ ವಿರುದ್ಧ ವಿರಾಟ್ ಕೊಹ್ಲಿ ದಾಖಲೆಗಳ ಸುರಿಮಳೆಗೈದಿದ್ದಾರೆ. ಆರ್​ಸಿಬಿ ಪರ 300 ಸಿಕ್ಸರ್ ಮತ್ತು ಭಾರತದಲ್ಲಿ 9500 ಟಿ20 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ದಾಖಲೆ ಬೇಟೆ ಮುಂದುವರೆಸಿದ್ದಾರೆ. ಸಿಎಸ್​ಕೆ ವಿರುದ್ಧ ಸಿಕ್ಸರ್ ಬಾರಿಸುತ್ತಿದ್ದಂತೆ ವಿಶೇಷ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
icon

(1 / 9)

(PTI)

ಸಿಕ್ಸರ್​​ಗಳ ವಿಚಾರದಲ್ಲಿ ಮಾತ್ರವಲ್ಲ, ರನ್​ಗಳ ವಿಚಾರದಲ್ಲೂ ಐತಿಹಾಸಿಕ ದಾಖಲೆಯೊಂದನ್ನು ಬರೆದಿದ್ದಾರೆ. 10 ರನ್ ಗಳಿಸಿದ್ದಾಗ ಭಾರತದಲ್ಲಿ ಅತ್ಯಧಿಕ ಟಿ20 ರನ್​ಗಳ ದಾಖಲೆಯನ್ನೂ ತನ್ನದಾಗಿಸಿಕೊಂಡಿದ್ದಾರೆ.
icon

(2 / 9)

(AFP)

ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ 3ನೇ ಓವರ್​​ನ 5ನೇ ಎಸೆತದಲ್ಲಿ ಕೊಹ್ಲಿ ಸಿಕ್ಸರ್​ ಬಾರಿಸುತ್ತಿದ್ದಂತೆ ಈ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
icon

(3 / 9)

ಬೆಂಗಳೂರು ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಆರ್​​ಸಿಬಿ ತಂಡದ ಪರ ವಿರಾಟ್ ಕೊಹ್ಲಿ 300 ಸಿಕ್ಸರ್​ ಪೂರ್ಣಗೊಳಿಸಿದ್ದಾರೆ.
icon

(4 / 9)

(REUTERS)

ಆರ್​​ಸಿಬಿ ಪರ ಐಪಿಎಲ್ ಜೊತೆಗೆ ಚಾಂಪಿಯನ್ಸ್ ಟಿ20 ಲೀಗ್​ನಲ್ಲಿ 300 ಸಿಕ್ಸರ್​ಗಳನ್ನು ಪೂರ್ಣಗೊಳಿಸಿದ್ದಾರೆ. ಬೆಂಗಳೂರು ಪರ 300 ಸಿಕ್ಸ್ ಬಾರಿಸಿದ ಆಟಗಾರನಾಗಿ ವಿಶ್ವದ ಮೊದಲ ಆಟಗಾರನೂ ಹೌದು.
icon

(5 / 9)

ಅಲ್ಲದೆ, ಭಾರತದಲ್ಲಿ ಟಿ20 ಕ್ರಿಕೆಟ್​​ನಲ್ಲಿ ವಿರಾಟ್ 9500 ರನ್‌ಗಳ ಮೈಲಿಗಲ್ಲನ್ನೂ ತಲುಪಿದ್ದಾರೆ. ಅವರಿಗೆ ಈ ದಾಖಲೆ ನಿರ್ಮಿಸಲು ಕೇವಲ 10 ರನ್‌ಗಳು ಬೇಕಿತ್ತು.
icon

(6 / 9)

ಇದೀಗ ಸಿಎಸ್​ಕೆ ವಿರುದ್ಧ ಕೊಹ್ಲಿ 10 ರನ್​ ಗಳಿಸುವುದರೊಂದಿಗೆ ಟಿ20ಐಗಳಲ್ಲಿ (ಭಾರತದಲ್ಲಿ ಆಡಿದ ಪಂದ್ಯಗಳು ಮತ್ತು ಐಪಿಎಲ್ ಅಂತಾರಾಷ್ಟ್ರೀಯ ಟಿ20 ಒಳಗೊಂಡಂತೆ) 9,500 ರನ್‌ ತಲುಪಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ.
icon

(7 / 9)

ಟಿ20 ಕ್ರಿಕೆಟ್​ನಲ್ಲಿ ಒಂದೇ ಮೈದಾನದಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಆ ಮೂಲಕ ಕ್ರಿಸ್​ಗೇಲ್ ದಾಖಲೆಯನ್ನು ಮುರಿದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ 152 + ಸಿಕ್ಸರ್​​ ಬಾರಿಸಿದ್ದಾರೆ. ಕ್ರಿಸ್​ಗೇಲ್ ಇದೇ ಮೈದಾನದಲ್ಲಿ 151 ಸಿಕ್ಸರ್ ಸಿಡಿಸಿದ್ದರು. ಇದೀಗ ಈ ದಾಖಲೆ ಕೊಹ್ಲಿ ಪಾಲಾಗಿದೆ.
icon

(8 / 9)

(AP)

ವಿಶ್ವದ ಯಾವೊಬ್ಬ ಬ್ಯಾಟರ್​ ಕೂಡ ಈ ಸಾಧನೆ ಮಾಡಿಲ್ಲ. ಒಂದೇ ಮೈದಾನದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ (152+, ಬೆಂಗಳೂರು) ಅಗ್ರಸ್ಥಾನ ಪಡೆದಿದ್ದಾರೆ. ಗೇಲ್ (151, ಬೆಂಗಳೂರು), ಗೇಲ್ (138, ಮೀರ್​ಪುರ), ಅಲೆಕ್ಸ್​ ಹೇಲ್ಸ್ (135, ನಾಟಿಂಗ್​ಹ್ಯಾಮ್​), ರೋಹಿತ್​ ಶರ್ಮಾ (122, ವಾಂಖೆಡೆ) ನಂತರದ ಸ್ಥಾನದಲ್ಲಿದ್ದಾರೆ.
icon

(9 / 9)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು