ಐಪಿಎಲ್-2025ರಲ್ಲಿ ಅತಿ ಹೆಚ್ಚು ವೈಡ್ ಎಸೆದ ಬೌಲರ್ಗಳಿವರು; ರಾಜಸ್ಥಾನ್ ರಾಯಲ್ಸ್ ತಂಡದವರೇ ನಾಲ್ವರು
ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ವೈಡ್ ಬಾಲ್ಗಳನ್ನು ಎಸೆದಿರುವ ಬೌಲರ್ಗಳ ಪಟ್ಟಿಯನ್ನು ನೋಡೋಣ. ಈ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ನ ನಾಲ್ವರೇ ಸ್ಥಾನ ಪಡೆದಿರುವುದು ಅಚ್ಚರಿ!
(1 / 10)
2025ರ ಐಪಿಎಲ್ನಲ್ಲಿ ಈವರೆಗೆ 57 ಪಂದ್ಯಗಳು ನಡೆದಿವೆ. ಆದರೆ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಕಾರಣ ಐಪಿಎಲ್ ಅನ್ನು ರದ್ದುಪಡಿಸಲಾಗಿತ್ತು. ಈ ಅವಧಿವರೆಗೆ ಪ್ರಸಕ್ತ ಆವೃತ್ತಿಯಲ್ಲಿ ಯಾವ ಬೌಲರ್ ಹೆಚ್ಚು ವೈಡ್ಗಳನ್ನು ಎಸೆದಿದ್ದಾರೆ ಎಂಬ ವಿವರ ತಿಳಿಯೋಣ.
(2 / 10)
ಈ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಮತೀಶಾ ಪತಿರಾಣ ಅಗ್ರಸ್ಥಾನದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ ಹೆಸರೂ ಈ ಪಟ್ಟಿಗೆ ಸೇರಿದೆ. ಟಾಪ್-8ರಲ್ಲಿ ಸ್ಥಾನ ಪಡೆದಿರುವ 4 ಬೌಲರ್ಗಳು ರಾಜಸ್ಥಾನ್ ರಾಯಲ್ಸ್ಗೆ ಸೇರಿದವರಾಗಿದ್ದಾರೆ. ಹಾಗಿದ್ದರೆ ಇನ್ಯಾರಿದ್ದಾರೆ.
(REUTERS)(3 / 10)
1. ಮತೀಶಾ ಪತಿರಾಣ: ಐಪಿಎಲ್ 2025ರಲ್ಲಿ ಇದುವರೆಗೆ ಅತಿ ಹೆಚ್ಚು ವೈಡ್ ಬಾಲ್ಗಳನ್ನು ಸಿಎಸ್ಕೆ ವೇಗಿ ಮತೀಶಾ ಪತಿರಾಣ ಎಸೆದಿದ್ದಾರೆ. 10 ಪಂದ್ಯಗಳಲ್ಲಿ ಪತಿರಾಣ 29 ವೈಡ್ ಹಾಕಿದ್ದಾರೆ. ಈ ಋತುವಿನಲ್ಲಿ ಬೇರೆ ಯಾವುದೇ ಬೌಲರ್ 21ಕ್ಕಿಂತ ಹೆಚ್ಚು ವೈಡ್ ಎಸೆದಿಲ್ಲ.
(AP)(4 / 10)
2. ಶಾರ್ದೂಲ್ ಠಾಕೂರ್: ಲಕ್ನೋ ಸೂಪರ್ ಜೈಂಟ್ಸ್ ಪರ ಬದಲಿ ಆಟಗಾರನಾಗಿ ಬಂದ ಶಾರ್ದೂಲ್ ಠಾಕೂರ್ ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಶಾರ್ದೂಲ್ ಈವರೆಗೆ ಆಡಿದ 9 ಪಂದ್ಯಗಳಲ್ಲಿ 21 ವೈಡ್ ಬಾಲ್ ಎಸೆದಿದ್ದಾರೆ.
(AP)(5 / 10)
3. ತುಷಾರ್ ದೇಶಪಾಂಡೆ: ರಾಜಸ್ಥಾನ್ ರಾಯಲ್ಸ್ ವೇಗಿ ತುಷಾರ್ ಕೇವಲ 8 ಪಂದ್ಯಗಳಲ್ಲಿ 19 ವೈಡ್ ಬಾಲ್ಗಳನ್ನು ಎಸೆದಿದ್ದಾರೆ. ಈ ಋತುವಿನಲ್ಲಿ ಅತಿ ಹೆಚ್ಚು ವೈಡ್ ಬೌಲಿಂಗ್ ಮಾಡಿದ ಬೌಲರ್ಗಳ ಪಟ್ಟಿಯಲ್ಲಿ ಅವರು 3ನೇ ಸ್ಥಾನದಲ್ಲಿದ್ದಾರೆ.
(AP)(6 / 10)
4. ಮೊಹಮ್ಮದ್ ಸಿರಾಜ್: ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಮೊಹಮ್ಮದ್ ಸಿರಾಜ್ ಕೂಡ ಈ ಋತುವಿನಲ್ಲಿ ಹೆಚ್ಚು ವೈಡ್ ಹಾಕಿದ ಬೌಲರ್ಗಳ ಪಟ್ಟಿಗೆ ಸೇರಿದ್ದು, ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅವರು 11 ಪಂದ್ಯಗಳಲ್ಲಿ 19 ವೈಡ್ ಎಸೆದಿದ್ದಾರೆ.
(AFP)(7 / 10)
5. ಸಂದೀಪ್ ಶರ್ಮಾ: ರಾಜಸ್ಥಾನ್ ರಾಯಲ್ಸ್ ವೇಗಿ ಸಂದೀಪ್ ಶರ್ಮಾ ಅವರ ಹೆಸರು ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಗಾಯಗೊಂಡು ಐಪಿಎಲ್ನಿಂದ ಹೊರಬಿದ್ದಿರುವ ವೇಗಿ, 10 ಪಂದ್ಯಗಳಲ್ಲಿ 19 ವೈಡ್ ಬಾಲ್ ಹಾಕಿದ್ದಾರೆ.
(AP)(8 / 10)
6. ಜೋಫ್ರಾ ಆರ್ಚರ್: ರಾಜಸ್ಥಾನ್ ರಾಯಲ್ಸ್ನ ಮತ್ತೊಬ್ಬ ವೇಗಿ ಟಾಪ್-8ರಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ 2025ರ 12 ಪಂದ್ಯಗಳಲ್ಲಿ ಜೋಫ್ರಾ ಆರ್ಚರ್ 17 ವೈಡ್ ಎಸೆದಿದ್ದಾರೆ. ಈ ಪಟ್ಟಿಯಲ್ಲಿ ಅವರು 6ನೇ ಸ್ಥಾನದಲ್ಲಿದ್ದಾರೆ.
(REUTERS)(9 / 10)
7. ಮಹೀಶಾ ತೀಕ್ಷಾಣ: ಐಪಿಎಲ್ 2025 ರಲ್ಲಿ ಮಹೀಶಾ ತೀಕ್ಷಾಣ 17 ವೈಡ್ ಬಾಲ್ ಎಸೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಭಾಗವಾಗಿರುವ ಸ್ಪಿನ್ನರ್ 11 ಪಂದ್ಯಗಳನ್ನು ಆಡಿದ್ದಾರೆ. ಅವರು 7ನೇ ಸ್ಥಾನದಲ್ಲಿದ್ದಾರೆ.
(Surjeet Yadav)ಇತರ ಗ್ಯಾಲರಿಗಳು