ಅಳಿಸಿತು ಆರು ವರ್ಷಗಳ ನಂತರ ಕಳಂಕ; ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿಶೇಷ ದಾಖಲೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಳಿಸಿತು ಆರು ವರ್ಷಗಳ ನಂತರ ಕಳಂಕ; ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿಶೇಷ ದಾಖಲೆ

ಅಳಿಸಿತು ಆರು ವರ್ಷಗಳ ನಂತರ ಕಳಂಕ; ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿಶೇಷ ದಾಖಲೆ

  • ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಪ್ಲೇಆಫ್ ರೇಸ್​ನಿಂದ ಹೊರಗುಳಿದಿರುವ ಸಿಎಸ್​​ಕೆ, ಹಾಲಿ ಚಾಂಪಿಯನ್ ಕನಸನ್ನು ಬಹುತೇಕ ಭಗ್ನಗೊಳಿಸಿದೆ. ಜೊತೆಗೆ ವಿಶೇಷ ದಾಖಲೆಯನ್ನೂ ಬರೆದಿದೆ.

2025ರ ಐಪಿಎಲ್​ನ 57ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​​ ಎರಡು ವಿಕೆಟ್​ಗಳ ಅಮೋಘ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 6 ವರ್ಷಗಳ ನಂತರ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದೆ.
icon

(1 / 7)

(AFP)

ಈಡನ್ ಗಾರ್ಡನ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್​, 6 ವಿಕೆಟ್‌ಗಳಿಗೆ 179 ರನ್ ಗಳಿಸಿತು. ಚೆನ್ನೈ 2 ಎಸೆತಗಳು ಬಾಕಿ ಇರುವಾಗ 8 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
icon

(2 / 7)

180 ಪ್ಲಸ್​ ಗುರಿಯನ್ನು ಬೆನ್ನಟ್ಟುವ ಮೂಲಕ ಸಿಎಸ್​ಕೆ 6 ವರ್ಷಗಳ ಕಳಂಕವನ್ನು ಅಳಿಸಿಕೊಂಡಿದೆ. 2019ರ ನಂತರ ಇದೇ ಮೊದಲ ಬಾರಿಗೆ 180 ಅಥವಾ ಅದಕ್ಕಿಂತ ಹೆಚ್ಚಿನ ರನ್​ಗಳ ಗುರಿ ಬೆನ್ನಟ್ಟಿದೆ.
icon

(3 / 7)

ಈ ಪಂದ್ಯಕ್ಕೂ ಮುನ್ನ, ಚೆನ್ನೈ ಸತತ 12 ಬಾರಿ 180 ಪ್ಲಸ್ ಗುರಿ ಬೆನ್ನಟ್ಟುವಾಗ ಸೋಲು ಕಂಡಿತ್ತು. ಕೊನೆಗೂ ಮಹೇಂದ್ರ ಸಿಂಗ್ ಧೋನಿ ಸೈನ್ಯ ಆ ಅನಗತ್ಯ ಅನುಕ್ರಮವನ್ನು ಭೇದಿಸಿದೆ.
icon

(4 / 7)

ಪಂಜಾಬ್ ಕಿಂಗ್ಸ್ ತಂಡವು 180 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಐಪಿಎಲ್ ಗುರಿ ಬೆನ್ನಟ್ಟುವಾಗ ಸತತ ಸೋಲುಗಳ ಅನಗತ್ಯ ದಾಖಲೆ ಹೊಂದಿದೆ. 2015 ಮತ್ತು 2021ರ ನಡುವೆ ಈ ತಂಡ ಸತತ 15 ಪಂದ್ಯಗಳಲ್ಲಿ 180+ ಗುರಿ ಬೆನ್ನಟ್ಟುವಲ್ಲಿ ವಿಫಲವಾಗಿತ್ತು.
icon

(5 / 7)

(REUTERS)

180 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಗುರಿ ಬೆನ್ನಟ್ಟುವ ವೇಳೆ ಸತತ ಅತಿ ಹೆಚ್ಚು ಸೋಲುಗಳನ್ನು ಎದುರಿಸಿದ ತಂಡಗಳಲ್ಲಿ ಆರ್‌ಸಿಬಿ ಕೂಡ ಸೇರಿದೆ. 2019 ಮತ್ತು 2023 ರ ನಡುವೆ ಆರ್​ಸಿಬಿ ಸತತ 12 ಬಾರಿ ಸೋತಿದೆ.
icon

(6 / 7)

(PTI)

ಸಿಎಸ್​ಕೆ 75 ರನ್‌ಗಳ ಒಳಗೆ 5 ವಿಕೆಟ್‌ ಕಳೆದುಕೊಂಡು 180 ಅಥವಾ ಅದಕ್ಕಿಂತ ಹೆಚ್ಚಿನ ಗುರಿ ಬೆನ್ನಟ್ಟಿದ 2ನೇ ತಂಡವಾಗಿದೆ. ಒಂದು ಹಂತದಲ್ಲಿ ಚೆನ್ನೈ 60ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಈವರೆಗಿನ ಅತಿದೊಡ್ಡ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ದಾಖಲೆ ಹೊಂದಿದೆ. ಇದೇ ಐಪಿಎಲ್​​ನಲ್ಲಿ ಲಕ್ನೋ ವಿರುದ್ಧ 65 ರನ್​​ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದರೂ 210 ರನ್ ಚೇಸ್ ಮಾಡಿತ್ತು.
icon

(7 / 7)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು