2012ರ ಬಳಿಕ ಐಪಿಎಲ್‌ನಲ್ಲಿ ಮೊದಲ ಪಂದ್ಯ ಗೆದ್ದಿಲ್ಲ ಮುಂಬೈ ಇಂಡಿಯನ್ಸ್; ಸತತ 13 ಪಂದ್ಯ ಸೋತ 5 ಬಾರಿಯ ಚಾಂಪಿಯನ್
- ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಪಂದ್ಯದಲ್ಲಿ ಸೋಲುವ ಅಭ್ಯಾಸ ಮುಂದುವರೆಸಿದೆ. 2012ರಲ್ಲಿ ಕೊನೆಯ ಬಾರಿಗೆ ಎಂಐ ಮೊದಲ ಪಂದ್ಯ ಗೆದ್ದಿತ್ತು. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತ್ತು. ಆ ನಂತರ 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಬಳಿಕ ಮುಂಬೈ ತಂಡ ಐಪಿಎಲ್‌ನಲ್ಲಿ ಆಡುತ್ತಿರುವ ಮೊದಲ ಪಂದ್ಯ ಗೆದ್ದಿಲ್ಲ.
- ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಪಂದ್ಯದಲ್ಲಿ ಸೋಲುವ ಅಭ್ಯಾಸ ಮುಂದುವರೆಸಿದೆ. 2012ರಲ್ಲಿ ಕೊನೆಯ ಬಾರಿಗೆ ಎಂಐ ಮೊದಲ ಪಂದ್ಯ ಗೆದ್ದಿತ್ತು. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತ್ತು. ಆ ನಂತರ 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಬಳಿಕ ಮುಂಬೈ ತಂಡ ಐಪಿಎಲ್‌ನಲ್ಲಿ ಆಡುತ್ತಿರುವ ಮೊದಲ ಪಂದ್ಯ ಗೆದ್ದಿಲ್ಲ.
(1 / 6)
ಮುಂಬೈ ಇಂಡಿಯನ್ಸ್ ತಂಡ ಕಳೆದ 13 ವರ್ಷಗಳಿಂದ ಇದೇ ಪ್ರವೃತ್ತಿಯನ್ನು ಕಾಯ್ದುಕೊಳ್ಳುತ್ತಿದೆ. ಐಪಿಎಲ್‌ನಲ್ಲಿ ತಮ್ಮ ಆರಂಭಿಕ ಪಂದ್ಯವನ್ನು ಸೋಲುತ್ತಾ ಬಂದಿದೆ. ಈ ಪ್ರವೃತ್ತಿ 2025ರ ಋತುವಿನಲ್ಲಿಯೂ ಬದಲಾಗಲಿಲ್ಲ. 2012ರಲ್ಲಿ ಮುಂಬೈ ಕೊನೆಯ ಬಾರಿ ಐಪಿಎಲ್ ಗೆದ್ದಿತ್ತು. 2013ರ ಲೀಗ್ ಬಳಿಕ ಮುಂಬೈ ತಂಡ ಐಪಿಎಲ್‌ನಲ್ಲಿ ತಾನು ಆಡಿದ ಮೊದಲ ಪಂದ್ಯವನ್ನು ಗೆದ್ದಿಲ್ಲ. ಚಿತ್ರ: ಎಎನ್ಐ
(2 / 6)
ಐಪಿಎಲ್ 2025ರ ಎರಡನೇ ದಿನದ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಬಾರಿ ಸಿಎಸ್‌ಕೆ ವಿರುದ್ಧ ಮುಂಬೈ 4 ವಿಕೆಟ್‌ಗಳಿಂದ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ 5 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಗಳ ಜಯ ಸಾಧಿಸಿತು. ಫೋಟೋ: ಪಿಟಿಐ
(3 / 6)
ಐಪಿಎಲ್‌ನಲ್ಲಿ ಎರಡು ಅತ್ಯಂತ ಯಶಸ್ವಿ ತಂಡಗಳ ನಡುವಿನ ಹೋರಾಟ ಪ್ರತಿಬಾರಿಯೂ ರೋಚಕವಾಗಿರುತ್ತದೆ. ಮುಂಬೈ ಪರ ಡೆತ್ ಓವರ್‌ಗಳಲ್ಲಿ ದೀಪಕ್ ಚಹರ್ 15 ಎಸೆತಗಳಲ್ಲಿ 28 ರನ್ ಗಳಿಸಿ ತಂಡದ ಮೊತ್ತ ಹೆಚಚಿಸಿದ್ದರು. ಮುಂಬೈ ಪರ ತಿಲಕ್ ವರ್ಮಾ ಗರಿಷ್ಠ ಸ್ಕೋರ್ ಗಳಿಸಿದರು. ಅವರು 25 ಎಸೆತಗಳಲ್ಲಿ 31 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 29 ರನ್ ಸಿಡಿಸಿ ಔಟಾದರು. ಫೋಟೋ: ಪಿಟಿಐ
(4 / 6)
ವಾಸ್ತವವಾಗಿ, ಚೆಪಾಕ್ ಪಿಚ್ ಯಾವಾಗಲೂ ಸ್ಪಿನ್ನರ್‌ಗಳ ಸ್ವರ್ಗವಾಗಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ನೂರ್ ಅಹ್ಮದ್ ಮತ್ತು ರಚಿನ್ ರವೀಂದ್ರ ಅವರಂತಹ ನಾಲ್ವರು ಸ್ಪಿನ್ನರ್‌ಗಳು ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಫೋಟೋ: ರಾಯಿಟರ್ಸ್
(5 / 6)
ಚೆನ್ನೈ ತಂಡ 19.1 ಓವರ್‌ಗಳಲ್ಲಿ ಮುಂಬೈ ನೀಡಿದ ಗುರಿ ತಲುಪಿತು. ರಚಿನ್ ರವೀಂದ್ರ 45 ಎಸೆತಗಳಲ್ಲಿ 65 ರನ್ ಗಳಿಸಿ ಔಟಾಗದೆ ಉಳಿದರು. ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಕೂಡ ಅರ್ಧಶತಕ ಬಾರಿಸಿದರು. ಚೆನ್ನೈ ಈ ಪಂದ್ಯವನ್ನು 4 ವಿಕೆಟ್ ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಮುಂಬೈ ಸೋಲಿನ ದಾಖಲೆ ಮುಂದುವರೆದಿದೆ. ಫೋಟೋ: ಪಿಟಿಐ
ಇತರ ಗ್ಯಾಲರಿಗಳು