ಐಪಿಎಲ್ ಆಡಲು ಕೆಎಲ್ ರಾಹುಲ್ ಫಿಟ್; ಎಲ್‌ಎಸ್‌ಜಿ ಪರ ಆಡಲು ಕನ್ನಡಿಗ ಸಜ್ಜು, ವಿಕೆಟ್ ಕೀಪಿಂಗ್ ಮಾಡದಂತೆ ಸಲಹೆ
- ಐಪಿಎಲ್ 2024ರ ಆವೃತ್ತಿಗೂ ಮುಂಚಿತವಾಗಿ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಎನ್‌ಸಿಎ ಫಿಟ್ ಎಂದು ಘೋಷಿಸಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕನ್ನಡಿಗ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

(1 / 5)
ಐಪಿಎಲ್‌ನಲ್ಲಿ ಲಕ್ನೋ ತಂಡದ ನಾಯಕನಾಗಿರುವ ರಾಹುಲ್, ಕಳೆದ ಆವೃತ್ತಿಯ ಪಂದ್ಯಾವಳಿಯ ವೇಳೆ ಗಾಯಗೊಂಡ ರಾಹುಲ್, ಮಧ್ಯದಲ್ಲಿಯೇ ಟೂರ್ನಿಯಿಂದ ಹೊರಬಿದ್ದರು. (REUTERS)
(2 / 5)
ಕ್ವಾಡ್ರೈಸ್ಪ್ ಗಾಯದ ಕಾರಣ ಇತ್ತೀಚೆಗೆ ಅಂತ್ಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ನಾಲ್ಕು ಟೆಸ್ಟ್ ಪಂದ್ಯಗಳಿಂದಲೂ ರಾಹುಲ್ ಹೊರಬಿದ್ದಿದ್ದರು. ಹೀಗಾಗಿ ಎಲ್‌ಎಸ್‌ಜಿ ತಂಡದ ಸೇರಿಕೊಂಡು ಐಪಿಎಲ್ ಆಡುವುದು ಗೊಂದಲದಲ್ಲಿತ್ತು.(AFP)
(3 / 5)
ಸದ್ಯ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ವೈದ್ಯಕೀಯ ತಂಡವು ರಾಹುಲ್ ಅವರನ್ನು ಫಿಟ್ ಎಂದು ಘೋಷಿಸಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಅವರು ಎಲ್‌ಎಸ್‌ಜಿ ಶಿಬಿರ ಸೇರಿಕೊಳ್ಳಲಿದ್ದಾರೆ.(PTI)
(4 / 5)
ಫಿಟ್ನೆಸ್ ಕ್ಲಿಯರೆನ್ಸ್ ಮಾಡಿಕೊಂಡರೂ, ಕೆಲವೊಂದು ಷರತ್ತುಗಳು ಅನ್ವಯಿಸುತ್ತವೆ. ಪಂದ್ಯಾವಳಿಯ ಆರಂಭದ ಕೆಲವು ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಫಿಟ್ ಆದ ಮೇಲೆ ಕೀಪಿಂಗ್ ಮಾಡಬಹುದಾಗಿದೆ.(PTI)
ಇತರ ಗ್ಯಾಲರಿಗಳು