ಭಾರತ vs ನ್ಯೂಜಿಲೆಂಡ್ 2ನೇ ಟೆಸ್ಟ್‌ಗೂ ಮುನ್ನ ಕಿವೀಸ್‌ಗೆ ಆಘಾತ; ಅನುಭವಿ ಆಟಗಾರ‌ ತಂಡದಿಂದ ಔಟ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ Vs ನ್ಯೂಜಿಲೆಂಡ್ 2ನೇ ಟೆಸ್ಟ್‌ಗೂ ಮುನ್ನ ಕಿವೀಸ್‌ಗೆ ಆಘಾತ; ಅನುಭವಿ ಆಟಗಾರ‌ ತಂಡದಿಂದ ಔಟ್

ಭಾರತ vs ನ್ಯೂಜಿಲೆಂಡ್ 2ನೇ ಟೆಸ್ಟ್‌ಗೂ ಮುನ್ನ ಕಿವೀಸ್‌ಗೆ ಆಘಾತ; ಅನುಭವಿ ಆಟಗಾರ‌ ತಂಡದಿಂದ ಔಟ್

  • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್‌ 24ರಂದು ಆರಂಭವಾಗಲಿದೆ. ಈಗಾಗಲೇ ಸರಣಿಯಲ್ಲಿ ಕಿವೀಸ್ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಏತನ್ಮಧ್ಯೆ, ಕಿವೀಸ್ ಬಳಗಕ್ಕೆ ಕಹಿ ಸುದ್ದಿ ಸಿಕ್ಕಿದೆ. ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಎರಡನೇ ಟೆಸ್ಟ್‌ನಿಂದ ಅವರು ಹೊರಬಿದ್ದಿದ್ದಾರೆ.

ಭಾರತ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿದ್ದಿದ್ದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್, ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಆಡಲು ಸಾಧ್ಯವಾಗುವುದಿಲ್ಲ. ಗಾಯದಿಂದ ಸಂಪೂರ್ಣವಾಗಿ ಗುಣಮುಖವಾದರೆ ಮಾತ್ರ ಕಿವೀಸ್ ಸ್ಟಾರ್ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಡಲಿದ್ದಾರೆ.
icon

(1 / 5)

ಭಾರತ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿದ್ದಿದ್ದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್, ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಆಡಲು ಸಾಧ್ಯವಾಗುವುದಿಲ್ಲ. ಗಾಯದಿಂದ ಸಂಪೂರ್ಣವಾಗಿ ಗುಣಮುಖವಾದರೆ ಮಾತ್ರ ಕಿವೀಸ್ ಸ್ಟಾರ್ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಡಲಿದ್ದಾರೆ.(AP)

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಅಕ್ಟೋಬರ್ 24ರಂದು ಪ್ರಾರಂಭವಾಗಲಿದೆ. ಕಿವೀಸ್‌ ತಂಡದ ಮಾಜಿ ನಾಯಕ ಶ್ರೀಲಂಕಾದಲ್ಲಿ ಆಡುವಾಗ ಸೊಂಟದ ನೋವಿನಿಂದ ಬಳಲುತ್ತಿದ್ದರು. ಬಳಿಕ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಟಾಮ್ ಲಾಥಮ್ ನಾಯಕನಾಗಿದ್ದಾರೆ.
icon

(2 / 5)

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಅಕ್ಟೋಬರ್ 24ರಂದು ಪ್ರಾರಂಭವಾಗಲಿದೆ. ಕಿವೀಸ್‌ ತಂಡದ ಮಾಜಿ ನಾಯಕ ಶ್ರೀಲಂಕಾದಲ್ಲಿ ಆಡುವಾಗ ಸೊಂಟದ ನೋವಿನಿಂದ ಬಳಲುತ್ತಿದ್ದರು. ಬಳಿಕ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಟಾಮ್ ಲಾಥಮ್ ನಾಯಕನಾಗಿದ್ದಾರೆ.(AFP)

ವಿಲಿಯಮ್ಸನ್ ಸದ್ಯಕ್ಕೆ ತಮ್ಮ ದೇಶ ನ್ಯೂಜಿಲೆಂಡ್‌ನಲ್ಲಿಯೇ ಉಳಿಯಲಿದ್ದಾರೆ. ಗಾಯದಿಂದ ಚೇತರಿಸಿಕೊಂಡರೆ ಮಾತ್ರ ಕ್ರಿಕೆಟಿಗ ಮೂರನೇ ಟೆಸ್ಟ್ ಆಡಲು ಭಾರತಕ್ಕೆ ಬರಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಅವರ ಬದಲಿಗೆ ವಿಲ್ ಯಂಗ್ ಅವರನ್ನು ಆಡಿಸಲಾಯಿತು. ಬೆಂಗಳೂರು ಟೆಸ್ಟ್‌ನಲ್ಲಿ ಯಂಗ್ ಭಾರತದ ವಿರುದ್ಧ ಎರಡು ಇನ್ನಿಂಗ್ಸ್‌ಗಳಲ್ಲಿ 33 ಮತ್ತು 48 ರನ್ ಗಳಿಸಿದ್ದರು.
icon

(3 / 5)

ವಿಲಿಯಮ್ಸನ್ ಸದ್ಯಕ್ಕೆ ತಮ್ಮ ದೇಶ ನ್ಯೂಜಿಲೆಂಡ್‌ನಲ್ಲಿಯೇ ಉಳಿಯಲಿದ್ದಾರೆ. ಗಾಯದಿಂದ ಚೇತರಿಸಿಕೊಂಡರೆ ಮಾತ್ರ ಕ್ರಿಕೆಟಿಗ ಮೂರನೇ ಟೆಸ್ಟ್ ಆಡಲು ಭಾರತಕ್ಕೆ ಬರಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಅವರ ಬದಲಿಗೆ ವಿಲ್ ಯಂಗ್ ಅವರನ್ನು ಆಡಿಸಲಾಯಿತು. ಬೆಂಗಳೂರು ಟೆಸ್ಟ್‌ನಲ್ಲಿ ಯಂಗ್ ಭಾರತದ ವಿರುದ್ಧ ಎರಡು ಇನ್ನಿಂಗ್ಸ್‌ಗಳಲ್ಲಿ 33 ಮತ್ತು 48 ರನ್ ಗಳಿಸಿದ್ದರು.(Reuters)

ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೀಡ್ ಮಾತನಾಡಿ, “ನಾವು ಕೇನ್ ವಿಲಿಯಮ್ಸನ್ ಅವರ ಗಾಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಚೇತರಿಸಿಕೊಳ್ಳಲು ಅವರಿಗೆ ಇನ್ನೂ ಸ್ವಲ್ಪ ಸಮಯ ನೀಡುತ್ತಿದ್ದೇವೆ. ಮೂರನೇ ಟೆಸ್ಟ್‌ ವೇಳೆಗೆ ಅವರು ಗಾಯದಿಂದ ಮರಳುತ್ತಾರೆ ಎಂದು ಆಶಿಸುತ್ತೇವೆ. ಆದರೆ ಅವರ ವಿಚಾರದಲ್ಲಿ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ. ಪ್ರಸ್ತುತ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ” ಎಂದಿದ್ದಾರೆ.
icon

(4 / 5)

ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೀಡ್ ಮಾತನಾಡಿ, “ನಾವು ಕೇನ್ ವಿಲಿಯಮ್ಸನ್ ಅವರ ಗಾಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಚೇತರಿಸಿಕೊಳ್ಳಲು ಅವರಿಗೆ ಇನ್ನೂ ಸ್ವಲ್ಪ ಸಮಯ ನೀಡುತ್ತಿದ್ದೇವೆ. ಮೂರನೇ ಟೆಸ್ಟ್‌ ವೇಳೆಗೆ ಅವರು ಗಾಯದಿಂದ ಮರಳುತ್ತಾರೆ ಎಂದು ಆಶಿಸುತ್ತೇವೆ. ಆದರೆ ಅವರ ವಿಚಾರದಲ್ಲಿ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ. ಪ್ರಸ್ತುತ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ” ಎಂದಿದ್ದಾರೆ.

ತಂಡದ ಅತ್ಯಂತ ಅನುಭವಿ ಬ್ಯಾಟರ್‌ ಕೇನ್ ವಿಲಿಯಮ್ಸನ್ ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೂ ಕಿವೀಸ್ ಗೆಲ್ಲುವುದನ್ನು ತಡೆಯಲಾಗಲಿಲ್ಲ. ರಚಿನ್ ರವೀಂದ್ರ ಅವರ ಅದ್ಭುತ ಪ್ರದರ್ಶನ ನೀಡಿದರು. ಎಡಗೈ ಬ್ಯಾಟರ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿದರು.
icon

(5 / 5)

ತಂಡದ ಅತ್ಯಂತ ಅನುಭವಿ ಬ್ಯಾಟರ್‌ ಕೇನ್ ವಿಲಿಯಮ್ಸನ್ ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೂ ಕಿವೀಸ್ ಗೆಲ್ಲುವುದನ್ನು ತಡೆಯಲಾಗಲಿಲ್ಲ. ರಚಿನ್ ರವೀಂದ್ರ ಅವರ ಅದ್ಭುತ ಪ್ರದರ್ಶನ ನೀಡಿದರು. ಎಡಗೈ ಬ್ಯಾಟರ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿದರು.(AP)


ಇತರ ಗ್ಯಾಲರಿಗಳು