Cricketers Hate Dhoni: ಧೋನಿಯನ್ನು ಕಂಡರೆ ಇವರಿಗೆ ಮೈ ಉರಿ; ಮಾಹಿ ವಿರುದ್ಧ ಈ ದಿಗ್ಗಜ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cricketers Hate Dhoni: ಧೋನಿಯನ್ನು ಕಂಡರೆ ಇವರಿಗೆ ಮೈ ಉರಿ; ಮಾಹಿ ವಿರುದ್ಧ ಈ ದಿಗ್ಗಜ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?

Cricketers Hate Dhoni: ಧೋನಿಯನ್ನು ಕಂಡರೆ ಇವರಿಗೆ ಮೈ ಉರಿ; ಮಾಹಿ ವಿರುದ್ಧ ಈ ದಿಗ್ಗಜ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?

  • Cricketers Hate Dhoni: ಯುವಕರಿಗೆ ಹೆಚ್ಚು ಅವಕಾಶ ನೀಡಿದ ಧೋನಿ ಅವರ ಮೇಲೆ ಒಂದು ಆರೋಪವೂ ಇದೆ. ನಮ್ಮ ವೃತ್ತಿ ಜೀವನ ಹಾಳು ಮಾಡಿದರು ಎಂಬ ಆರೋಪವನ್ನು ಕೆಲವು ಕ್ರಿಕೆಟಿಗರು ಧೋನಿ ಮೇಲೆ ಹೊರಿಸಿದ್ದಾರೆ. ಧೋನಿಯನ್ನು ಕಂಡರೆ ಉರಿದು ಬೀಳುವ ಕ್ರಿಕೆಟಿಗರು ಯಾರು? ಈ ಮುಂದೆ ನೋಡೋಣ.

ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಅವರ ಕ್ರೇಜ್ ಕೊಂಚವೂ ತಗ್ಗಿಲ್ಲ. ದಿನೆದಿನೇ ಏರುತ್ತಲೇ ಇದೆ. ಸದ್ಯ ಐಪಿಎಲ್​​ನಲ್ಲಿ ಮಾತ್ರ ಸಕ್ರಿಯರಾಗಿರುವ ಮಾಹಿ, ಅದಕ್ಕೂ ನಿವೃತ್ತಿ ನೀಡುವ ಅಂಚಿನಲ್ಲಿದ್ದಾರೆ. ಬಹುಶಃ ಮುಂದಿನ ವರ್ಷ ವಿದಾಯ ಘೋಷಿಸಿದರೂ ಅಚ್ಚರಿ ಇಲ್ಲ‌.
icon

(1 / 13)

ಆದರೆ, ಇವರ ನಾಯಕತ್ವದಲ್ಲಿ ಆಡಿದ ಅದೆಷ್ಟೋ ಆಟಗಾರರು ಉತ್ತುಂಗದಲ್ಲಿದ್ದಾರೆ. ಸ್ಟಾರ್ ಗಿರಿ ಪಡೆದಿದ್ದಾರೆ. ಅವರ ಗರಡಿಯಲ್ಲಿ ಬೆಳೆದವರು ಕ್ರಿಕೆಟ್ ದುನಿಯಾವನ್ನು ಆಳುತ್ತಿದ್ದಾರೆ. ಕೋಟ್ಯಂತರ ಜನರಿಗೆ ಧೋನಿ ಮಾದರಿಯಾಗಿದ್ದಾರೆ. ಶಾಂತಿಯ ಪ್ರತೀಕ ಎಂಎಸ್ ಮಹೇಂದ್ರ ಸಿಂಗ್​ ಧೋನಿ.
icon

(2 / 13)

ಯುವಕರಿಗೆ ಹೆಚ್ಚು ಅವಕಾಶ ನೀಡಿದ ಧೋನಿ ಅವರ ಮೇಲೆ ಒಂದು ಆರೋಪವೂ ಇದೆ. ನಮ್ಮ ವೃತ್ತಿ ಜೀವನ ಹಾಳು ಮಾಡಿದರು ಎಂಬ ಆರೋಪವನ್ನು ಕೆಲವು ಕ್ರಿಕೆಟಿಗರು ಧೋನಿ ಮೇಲೆ ಹೊರಿಸಿದ್ದಾರೆ. ಧೋನಿಯನ್ನು ಕಂಡರೆ ಉರಿದು ಬೀಳುವ ಕ್ರಿಕೆಟಿಗರು ಯಾರು, ಯಾಕೆ? ಅನ್ನೋದನ್ನ ಈ ಮುಂದೆ ನೋಡೋಣ.
icon

(3 / 13)

ಎರಡು ವಿಶ್ವಕಪ್ (ಟಿ20 ಮತ್ತು ಏಕದಿನ ವಿಶ್ವಕಪ್)​ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿರುವ ಗೌತಮ್ ಗಂಭೀರ್, ಎರಡೂ ಫೈನಲ್​​​ಗಳಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದರು. ಸೌತ್​ ಆಫ್ರಿಕಾದಲ್ಲಿ ನಡೆದ 2007ರ ವಿಶ್ವಕಪ್ ಟಿ20 ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಮತ್ತು 2011ರ ಏಕದಿನ ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧ ಸೇರಿ ಎರಡರಲ್ಲೂ ಗಂಭೀರ್​ ಗರಿಷ್ಠ ಸ್ಕೋರ್ ಮಾಡಿದರು. 
icon

(4 / 13)

ಏಕದಿನ ವಿಶ್ವಕಪ್​ ಫೈನಲ್​​ನಲ್ಲಿ ಶ್ರೀಲಂಕಾ ವಿರುದ್ಧ 97 ರನ್‌ಗಳ ಅಮೂಲ್ಯವಾದ ಇನ್ನಿಂಗ್ಸ್​​ ಆಡಿದ್ದರೂ, ಅಭಿಮಾನಿಗಳು ಮತ್ತು ತಜ್ಞರು ವಿಶ್ವಕಪ್ ಗೆಲುವಿಗೆ ಸಾಕಷ್ಟು ಮನ್ನಣೆ ನೀಡಲಿಲ್ಲ ಎಂದು ಗಂಭೀರ್ ಭಾವಿಸಿದ್ದಾರೆ. 2020ರಲ್ಲಿ ಪೂರ್ವ ದೆಹಲಿ ಸಂಸದ ಗಂಭೀರ್ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ತಮ್ಮ ಹತಾಶೆ ಹೊರ ಹಾಕಿದ್ದರು.
icon

(5 / 13)

ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಅವರ ಐಕಾನಿಕ್ ಸಿಕ್ಸರ್ ಅನ್ನು ಇಎಸ್​ಪಿನ್​ ಕ್ರಿಕ್​ಇನ್ಫೋ ಸೆಲೆಬ್ರೇಟ್ ರೀತಿಯ ಪೋಸ್ಟ್​ ಹಾಕಿತ್ತು. ಆದರೆ ಗಂಭೀರ್​, ನೆನಪಿರಲಿ @ESPNcricinfo: #worldcup2011 ಅನ್ನು ಇಡೀ ಭಾರತ ಗೆದ್ದಿದೆ. ಇಡೀ ಭಾರತೀಯ ತಂಡ ಮತ್ತು ಎಲ್ಲಾ ಸಹಾಯಕ ಸಿಬ್ಬಂದಿ ಗೆದ್ದಿದ್ದಾರೆ. ಆದರೆ, ವಿಶ್ವಕಪ್ ಗೆದ್ದಿದ್ದು ಸಿಕ್ಸರ್​​​ನಿಂದಲ್ಲ ಎನ್ನುವಂತೆ ಪ್ರತಿಕ್ರಿಯಿಸಿದ್ದರು.
icon

(6 / 13)

ಒಂದು ಕಾಲದಲ್ಲಿ ಯುವರಾಜ್ ಸಿಂಗ್-ಧೋನಿ ಉತ್ತಮ ಗೆಳೆಯರಾಗಿದ್ದರು. ಆದರೀಗ ಅವರ ಸಂಬಂಧ ಹಳಸಿದೆ. ಇತರೆ ಹಿರಿಯ ಕ್ರಿಕೆಟಿಗರಿಗೆ ದ್ರೋಹ ಬಗೆದಿದ್ದಾರೆ. ಅರ್ಹರಿಗೆ ಬೆಂಬಲ ನೀಡಿಲ್ಲ ಎಂದು ಮಾಜಿ ಆಲ್​ರೌಂಡರ್​ ಅನೇಕ ಸಂದರ್ಭಗಳಲ್ಲಿ ಆರೋಪಿಸಿದ್ದರು. 350 ಏಕದಿನ ಕ್ರಿಕೆಟ್​​ಗಳನ್ನು ಆಡಿದ್ದು, ಅವರು ಉತ್ತಮ ಪ್ರದರ್ಶನ ನೀಡಿದ್ದರಿಂದ ಅಲ್ಲ. ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಅವರ ಬೆಂಬಲದಿಂದ ಎಂದು ಯುವಿ ಹೇಳಿದ್ದರು.
icon

(7 / 13)

ಕೆಲವು ಬಿಸಿಸಿಐ ಅಧಿಕಾರಿಗಳು ತನಗೆ ನೀಡಬೇಕಿದ್ದ ಜವಾಬ್ದಾರಿಯನ್ನು ಧೋನಿ ಅವರಿಗೆ ನೀಡಲಾಗಿತ್ತು. ಹಾಗಾಗಿ ಅವರಿಗೆ ಆದ್ಯತೆ ನೀಡಿದ್ದರಿಂದ ನಾನು ಭಾರತ ತಂಡದ ನಾಯಕನಾಗಲು ಸಾಧ್ಯವಾಗಲಿಲ್ಲ ಎಂದು ಯುವರಾಜ್ ಹೇಳಿಕೊಂಡಿದ್ದಾರೆ. ಇನ್ನು ಯುವಿ ಅವರ ತಂದೆ ಬಹಿರಂಗವಾಗಿಯೇ ಧೋನಿಯನ್ನು ಬೈದಿದ್ದರು. ಅವರಿಂದಲೇ ಯುವಿ ಭವಿಷ್ಯ ಹಾಳಾಯಿತು ಎಂದಿದ್ದರು.
icon

(8 / 13)

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಹಿರಿಯ ಆಟಗಾರರೊಂದಿಗೆ ಧೋನಿ ನಡೆದುಕೊಂಡ ವರ್ತನೆಗೆ ಸಾರ್ವಜನಿಕವಾಗಿಯೇ ಟೀಕಿಸಿದ್ದರು. 2012ರಲ್ಲಿ ಭಾರತ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ, ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗಂಭೀರ್ ಅವರನ್ನು ಧೋನಿ ಸ್ಲೋ ಫೀಲ್ಡರ್​​ಗಳು ಎಂದಿದ್ದರು. ಇದೇ ಕಾರಣದಿಂದ ಅವಕಾಶ ನೀಡಲಿಲ್ಲ ಎಂದಿದ್ದರು. ಇದರಿಂದ ಕುಪಿತಗೊಂಡ ಸೆಹ್ವಾಗ್, ಹಿಗ್ಗಾಮುಗ್ಗಾ ಜಾಡಿಸಿದ್ದರು. ತಮ್ಮ ಅಸಮಾಧಾನ ಹೊರಹಾಕಿದ್ದರು.
icon

(9 / 13)

ನಿವೃತ್ತಿಯಾದ ನಂತರ, ಹರ್ಭಜನ್ ಸಿಂಗ್ ಕೆಲವು ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಧೋನಿಯೇ ನನ್ನ ವೃತ್ತಿ ಜೀವನ ಹಾಳಾಗಲು ಕಾರಣ ಎಂದು ಆರೋಪಿಸಿದ್ದಾರೆ. 2011ರ ವಿಶ್ವಕಪ್ ಗೆಲ್ಲಲು ಭಾರತಕ್ಕೆ ಸಹಾಯ ಮಾಡಿದ ಹೆಚ್ಚಿನ ಹಿರಿಯ ಕ್ರಿಕೆಟಿಗರನ್ನು ತಿರಸ್ಕರಿಸಿ ತಂಡದಿಂದ ಹೊರಹಾಕಿದ್ದು, ದೊಡ್ಡ ಅವಮಾನ ಎಂದು ಕಿಡಿಕಾರಿದ್ದರು. 400 ವಿಕೆಟ್‌ ಪಡೆದಿರುವ ವ್ಯಕ್ತಿಯನ್ನು ತಿರಸ್ಕರಿಸಿದ್ದೇಗೆ ಎಂಬುದು ಒಂದು ನಿಗೂಢ ಎಂದಿದ್ದಾರೆ ಭಜ್ಜಿ.
icon

(10 / 13)

ನನಗಿಗಲೂ ಆಶ್ಚರ್ಯ. ಏನಾಯಿತು? ಕೈಬಿಟ್ಟಿದ್ದು ಯಾಕೆ? ತಂಡದಿಂದ ಕೈಬಿಟ್ಟಿದ್ದು ಯಾಕೆ ಎಂದು ಕೇಳಿದ್ದೆ. ಆದರೆ ನನಗೆ ಉತ್ತರ ನೀಡಲಿಲ್ಲ. ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿದ್ದು ಎಂದು ಎಲ್ಲರಿಗೂ ತಿಳಿದಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಯಾರು ಹೇಳದೇ ಇದ್ದರೆ, ಅದನ್ನು ಅಲ್ಲಿಗೆ ಬಿಟ್ಟುಬಿಡುವುದು ಉತ್ತಮ ಎಂದಿದ್ದರು ಆಫ್​ ಸ್ಪಿನ್ನರ್.
icon

(11 / 13)

ಭಾರತಕ್ಕೆ ಆಡಿದ ಕೊನೆಯ ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರೂ, ತನ್ನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಆಯ್ಕೆಯ ಉಸ್ತುವಾರಿ ವಹಿಸಿದ್ದವರನ್ನು ಇರ್ಫಾನ್ ಪಠಾಣ್ ಟೀಕಿಸಿದ್ದರು. 2008ರ ಆಸ್ಟ್ರೇಲಿಯಾ ಸರಣಿಯ ಸಂದರ್ಭದಲ್ಲಿ ಇರ್ಫಾನ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿಲ್ಲ ಎಂದು ಮಹಿ (ಎಂಎಸ್ ಧೋನಿ) ನನ್ನ ಬಗ್ಗೆ ನೀಡಿದ ಹೇಳಿಕೆ ನೀಡಿದ್ದರು. 
icon

(12 / 13)

ನಾನು ಇಡೀ ಸರಣಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದೆ. ಹಾಗಾಗಿ ನಾನು ಸ್ಪಷ್ಟೀಕರಣಕ್ಕಾಗಿ ಮತ್ತು ಉತ್ತಮವಾಗಲು ನಾನು ಏನು ಮಾಡಬೇಕೆಂದು ಕೇಳಿದೆ.  2008ರಲ್ಲಿ ಶ್ರೀಲಂಕಾದಲ್ಲಿ ಪಂದ್ಯ ಗೆದ್ದ ನಂತರ ನನ್ನನ್ನು ಕೈಬಿಡಲಾಯಿತು. ದೇಶಕ್ಕಾಗಿ ಪಂದ್ಯವನ್ನು ಗೆದ್ದ ನಂತರ ಯಾರು ಕೈಬಿಡುತ್ತಾರೆ? ಪಂದ್ಯ ವಿಜೇತರನ್ನು ಹೊರಗೆ ಕೂರಿಸಲು ಸಾಧ್ಯವೇ ಎಂದು ಪಠಾಣ್, ಬೇಸರ ವ್ಯಕ್ತಪಡಿಸಿದ್ದರು.
icon

(13 / 13)

ಇತರ ಗ್ಯಾಲರಿಗಳು