ODI Cricket: ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ ಸೂಪರ್ ಸ್ಟಾರ್ ಆಟಗಾರರು; ಆದರೆ ಏಕದಿನದಲ್ಲಿ ಮಾತ್ರ ಅಟ್ಟರ್ ಫ್ಲಾಪ್ ಸ್ಟಾರ್ಸ್
- 5 Indians Who Great In Test But Failed In ODI: ಏಕದಿನದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಿಫಲರಾದ 5 ಭಾರತೀಯ ಟೆಸ್ಟ್ ಆಟಗಾರರು ಯಾರು ಅನ್ನೋದನ್ನ ನೋಡೋಣ.
- 5 Indians Who Great In Test But Failed In ODI: ಏಕದಿನದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಿಫಲರಾದ 5 ಭಾರತೀಯ ಟೆಸ್ಟ್ ಆಟಗಾರರು ಯಾರು ಅನ್ನೋದನ್ನ ನೋಡೋಣ.
(1 / 6)
ಏಕದಿನ, ಟೆಸ್ಟ್ ಅಥವಾ ಟಿ20 ಮೂರು ಫಾರ್ಮೆಟ್ನಲ್ಲೂ ಅನೇಕ ಆಟಗಾರರು ಮಿಂಚಿದ್ದಾರೆ. ಕೆಲವರು ಏಕದಿನ, ಟೆಸ್ಟ್, ಕೆಲವರು ಟಿ20 ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಆದರೀಗ ನಾವು ಹೇಳಲು ಹೊರಟಿರುವುದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಿ ಹೀರೋಗಳಾದವರು, ಏಕದಿನದಲ್ಲಿ ಅಟ್ಟರ್ಫ್ಲಾಪ್ ಆದವರ ಬಗ್ಗೆ. ಏಕದಿನದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಿಫಲರಾದ 5 ಭಾರತೀಯ ಟೆಸ್ಟ್ ಆಟಗಾರರು ಯಾರು ಅನ್ನೋದನ್ನ ನೋಡೋಣ.
(2 / 6)
ವಿವಿಎಸ್ ಲಕ್ಷ್ಮಣ್ ಭಾರತದ ಶ್ರೇಷ್ಠ ಟೆಸ್ಟ್ ಆಟಗಾರರಲ್ಲಿ ಒಬ್ಬರು. ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಲಕ್ಷ್ಮಣ್ ಟ್ರಬಲ್ ಶೂಟರ್ ಆಗಿ ಕ್ರೀಸ್‌ಗೆ ಬರುತ್ತಿದ್ದರು. ಅವರು ಟೆಸ್ಟ್‌ನಲ್ಲಿ 8781 ರನ್ ಗಳಿಸಿದ್ದಾರೆ. ಆದರೆ, ಏಕದಿನದಲ್ಲಿ ಅವರ ಕೊಡುಗೆ ಅಷ್ಟಕಷ್ಟೆ. 86 ಏಕದಿನದಲ್ಲಿ ವೃತ್ತಿಜೀವನದಲ್ಲಿ ಲಕ್ಷ್ಮಣ್, 30.76ರ ಸರಾಸರಿಯಲ್ಲಿ 2338 ರನ್ ಗಳಿಸಿದ್ದಾರೆ.
(3 / 6)
ಇಶಾಂತ್ ಶರ್ಮಾ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ವೇಗಿಗಳಲ್ಲಿ ಎಣಿಸಲ್ಪಟ್ಟಿದ್ದಾರೆ. 100ಕ್ಕೂ ಹೆಚ್ಚು ಟೆಸ್ಟ್‌ಗಳನ್ನು ಆಡಿದ್ದಾರೆ. ಹೆಸರಲ್ಲಿ 311 ವಿಕೆಟ್‌ಗಳೂ ಇವೆ. ಆದರೆ, ಅವರ ಏಕದಿನದಲ್ಲಿ 80 ಪಂದ್ಯಗಳನ್ನು ಆಡಿದ್ದು, 115 ವಿಕೆಟ್‌ಗಳನ್ನು ಪಡೆದರು.
(4 / 6)
ಟೆಸ್ಟ್‌ನಲ್ಲಿ 10,000 ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಸುನಿಲ್ ಗವಾಸ್ಕರ್. ನಿವೃತ್ತಿಯ ಸಮಯದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಹೊಂದಿದ್ದರು. ಆದರೆ, ಏಕದಿನದಲ್ಲಿ ಗವಾಸ್ಕರ್ 108 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 3090 ರನ್ ಮಾತ್ರ ಗಳಿಸಿದ್ದಾರೆ. ಅವರು ಕೇವಲ ಒಂದು ಶತಕ ಗಳಿಸಿದ್ದಾರೆ.
(5 / 6)
ಭಾರತ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿರುವ ಚೇತೇಶ್ವರ ಪೂಜಾರ 7195 ರನ್ ಗಳಿಸಿದ್ದಾರೆ. ಅವರು ದೀರ್ಘಕಾಲದವರೆಗೆ ಭಾರತದ ಬ್ಯಾಟಿಂಗ್‌ಗೆ ಬೆನ್ನೆಲುಬಾಗಿದ್ದಾರೆ. ಅವರ ಹೆಸರಿನಲ್ಲಿ 19 ಶತಕಗಳಿವೆ. ತಮ್ಮ ಏಕದಿನ ವೃತ್ತಿಜೀವನದಲ್ಲಿ ಪೂಜಾರ 5 ಪಂದ್ಯಗಳಲ್ಲಿ ಮಾತ್ರ ಅವಕಾಶ ಪಡೆದರು. ಇದರಲ್ಲಿ 10ರ ಸರಾಸರಿಯಲ್ಲಿ 51 ರನ್ ಗಳಿಸಿದ್ದಾರೆ.
ಇತರ ಗ್ಯಾಲರಿಗಳು