IND vs ENG 4th Test: ರಾಂಚಿ ಟೆಸ್ಟ್‌ನ ಈ 5 ಫೋಟೋ ನೋಡಿ ನೀವು ರೋಮಾಂಚನಗೊಳ್ಳುವುದು ಖಚಿತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ind Vs Eng 4th Test: ರಾಂಚಿ ಟೆಸ್ಟ್‌ನ ಈ 5 ಫೋಟೋ ನೋಡಿ ನೀವು ರೋಮಾಂಚನಗೊಳ್ಳುವುದು ಖಚಿತ

IND vs ENG 4th Test: ರಾಂಚಿ ಟೆಸ್ಟ್‌ನ ಈ 5 ಫೋಟೋ ನೋಡಿ ನೀವು ರೋಮಾಂಚನಗೊಳ್ಳುವುದು ಖಚಿತ

  • India vs England : ಇಂಗ್ಲೆಂಡ್‌ ವಿರುದ್ಧ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಧ್ರುವ್‌ ಜುರೆಲ್‌ ಪಂದ್ಯದ ಹೀರೋ ಆಗಿ ಮಿಂಚಿದರು. ಈ ಗೆಲುವಿನೊಂದಿಗೆ ಭಾರತ ಸರಣಿ ವಶಪಡಿಸಿಕೊಂಡಿತು. ರಾಂಚಿ ಪಂದ್ಯದ ಐದು ಸ್ಮರಣೀಯ ಫೋಟೋಗಳು ಇಲ್ಲಿವೆ.

ಇಂಗ್ಲೆಂಡ್‌ ವಿರುದ್ದದ ನಾಲ್ಕನೇ ಟೆಸ್ಟ್‌ ಪಂದ್ಯ ಗೆಲ್ಲುವ ಮೂಲಕ, ತವರು ನೆಲದಲ್ಲಿ ಸತತ 17ನೇ ಟೆಸ್ಟ್ ಸರಣಿ ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡವು 4 ಪಂದ್ಯಗಳ ನಂತರ 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಈ ರೋಚಕ ಪಂದ್ಯವನ್ನು ಭಾರತ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತು.
icon

(1 / 6)

ಪಂದ್ಯದ ಗೆಲುವಿನ ಹೀರೋಗಳಾದ ಧ್ರುವ್ ಜುರೆಲ್ ಮತ್ತು ಶುಭ್ಮನ್ ಗಿಲ್ ಆರನೇ ವಿಕೆಟ್‌ಗೆ 72 ರನ್‌ಗಳ‌ ಅಜೇಯ ಜೊತೆಯಾಟವಾಡಿ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು. ಗೆಲುವಿನ ರನ್ ಗಳಿಸಿದ ನಂತರ ಗಿಲ್ ಮತ್ತು ಜುರೆಲ್ ಅವರ ಸಂಭ್ರಮಾಚರಣೆ ಹೀಗಿತ್ತು.
icon

(2 / 6)

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಧ್ರುವ್ ಜುರೆಲ್, ತಮ್ಮ ಎರಡನೇ ಟೆಸ್ಟ್ ಪಂದ್ಯವನ್ನು ಆಡಿದರು. ಒತ್ತಡದ ಸಂದರ್ಭದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು, ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಗಳಿಸಿದರು. ಅಲ್ಲದೆ ಗೆಲುವಿನ ರನ್‌ ಗಳಿಸಿ ಮಿಂಚಿದರು. ಗೆಲುವಿನ ನಂತರ ಡ್ರೆಸ್ಸಿಂಗ್ ರೂಮ್‌ಗೆ ಹೋಗುತ್ತಿದ್ದಾಗ ತಂಡದ ನಾಯಕ ರೋಹಿತ್ ಶರ್ಮಾ, ಜುರೆಲ್‌ರನ್ನು ಅಪ್ಪಿಕೊಂಡರು.
icon

(3 / 6)

ಭಾರತ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರು, ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಅವರನ್ನು ಕೊಂಡಾಡಿದ್ದಾರೆ. ಅಪಾಯಕಾರಿ ರಾಂಚಿ ಪಿಚ್‌ನಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಆಡಿದ ಜುರೆಲ್‌, ತಂಡವನ್ನು ಗೆಲುವಿನತ್ತ ಮುನ್ನಡೆಸಿದರು ಈ ಪಂದ್ಯದಲ್ಲಿ ಭಾರತ ಜೀವಂತವಾಗಿ ಉಳಿದಿದ್ದು ಜುರೆಲ್‌ ಆಡಿದ ಇನ್ನಿಂಗ್ಸ್‌ನಿಂದ. ಹೀಗಾಗಿ ಪಂದ್ಯದ ನಂತರ ಗ್ರೇಟ್‌ ವಾಲ್‌ ಜುರೆಲ್‌ರನ್ನು ಅಪ್ಪಿಕೊಂಡರು.
icon

(4 / 6)

ಜಸ್ಪ್ರೀತ್ ಬುಮ್ರಾ ಅವರ ಸ್ಥಾನಕ್ಕೆ ಪದಾರ್ಪಣೆ ಮಾಡುವ ಅವಕಾಶ ಪಡೆದ ಆಕಾಶದೀಪ್, ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ದಿನದಲ್ಲೇ ಇಂಗ್ಲೆಂಡ್ ತಂಡದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಚೊಚ್ಚಲ ಕ್ಯಾಪ್ ಪಡೆದ ನಂತರ ಅವರು ತಮ್ಮ ತಾಯಿ ಪಾದಕ್ಕೆ ನಮಸ್ಕರಿಸಿದರು. ಆ ಕ್ಷಣ ಭಾವುಕವಾಗಿತ್ತು.
icon

(5 / 6)

ರಾಂಚಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ನಂತರ ಧ್ರುವ್ ಜುರೆಲ್ ಸೆಲ್ಯೂಟ್ ಮಾಡಿ ಸಂಭ್ರಮಿಸಿದರು. ಅವರ ತಂದೆ ಕಾರ್ಗಿಲ್‌ನಲ್ಲಿ ಕೆಲಸ ಮಾಡಿದ್ದಾರೆ. ದೇಶ ರಕ್ಷಣೆಯಲ್ಲಿ ತಮ್ಮ ಯೌವನವನ್ನು ಕಳೆದ ತಂದೆಗೆ ಮಗ ಗೌರವದಿಂದ ವಂದಿಸಿದರು. ಅವರ ಸಂಭ್ರಮಾಚರಣೆ ಎಲ್ಲೆಡೆ ಸುದ್ದಿಯಾಯಿತು.
icon

(6 / 6)

ಇತರ ಗ್ಯಾಲರಿಗಳು