ಪಿಎನ್​ಜಿ ವಿರುದ್ಧ ಗೆದ್ದು ಸೂಪರ್​-8 ಪ್ರವೇಶಿಸಿದ ಅಫ್ಘಾನಿಸ್ತಾನ; ಬಲಿಷ್ಠ ನ್ಯೂಜಿಲೆಂಡ್ ಮೊದಲ ಬಾರಿಗೆ ಲೀಗ್​ನಿಂದಲೇ ಔಟ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಿಎನ್​ಜಿ ವಿರುದ್ಧ ಗೆದ್ದು ಸೂಪರ್​-8 ಪ್ರವೇಶಿಸಿದ ಅಫ್ಘಾನಿಸ್ತಾನ; ಬಲಿಷ್ಠ ನ್ಯೂಜಿಲೆಂಡ್ ಮೊದಲ ಬಾರಿಗೆ ಲೀಗ್​ನಿಂದಲೇ ಔಟ್

ಪಿಎನ್​ಜಿ ವಿರುದ್ಧ ಗೆದ್ದು ಸೂಪರ್​-8 ಪ್ರವೇಶಿಸಿದ ಅಫ್ಘಾನಿಸ್ತಾನ; ಬಲಿಷ್ಠ ನ್ಯೂಜಿಲೆಂಡ್ ಮೊದಲ ಬಾರಿಗೆ ಲೀಗ್​ನಿಂದಲೇ ಔಟ್

  • Afghanistan beat Papua New Guinea: ಪಪುವಾ ನ್ಯೂಗಿನಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ಸೂಪರ್​-8 ಹಂತಕ್ಕೆ ಪ್ರವೇಶಿಸಿದೆ. ಇದರೊಂದಿಗೆ ನ್ಯೂಜಿಲೆಂಡ್​ ಲೀಗ್​ನಿಂದಲೇ ಹೊರಬಿದ್ದಿದೆ.

ಟಿ20 ವಿಶ್ವಕಪ್ 2024 ಗುಂಪು ಹಂತದ 29ನೇ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ಅಫ್ಘಾನಿಸ್ತಾನ ಸೂಪರ್ ಡೂಪರ್ ಗೆಲುವು ಸಾಧಿಸಿ ಸೂಪರ್​​-8 ಪ್ರವೇಶಿಸಿತು. ಇದರೊಂದಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡವು ಲೀಗ್​ನಿಂದಲೇ ಹೊರಬಿದ್ದಿತು.
icon

(1 / 5)

(AFP)

ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನ್ಯೂಗಿನಿಯಾ 19.5 ಓವರ್​​​ಗಳಲ್ಲಿ 95 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಆಫ್ಘನ್ 15.1 ಓವರ್​​​ಗಳಲ್ಲಿ ಗೆದ್ದು ಬೀಗಿತು. ಇದರೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿತು.
icon

(2 / 5)

ಸಿ ಗುಂಪಿನಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೂಪರ್​ - 8ಕ್ಕೆ ಪ್ರವೇಶಿಸಿವೆ. ಪಪುವಾ ನ್ಯೂಗಿನಿಯಾ, ಉಗಾಂಡ ಮತ್ತು ನ್ಯೂಜಿಲೆಂಡ್ ತಂಡಗಳು ಲೀಗ್​ನಿಂದಲೇ ಹೊರ ಬಿದ್ದಿದೆ.
icon

(3 / 5)

ನ್ಯೂಜಿಲೆಂಡ್ ಆಡಿರುವ 2 ಪಂದ್ಯಗಳಲ್ಲಿ ಎರಡನ್ನೂ ಸೋತು ಲೀಗ್​ನಿಂದ ಹೊರಬಿದ್ದಿದ್ದು ಅಚ್ಚರಿ ಮೂಡಿಸಿತು. ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಎದುರು ಸೋಲು ಕಂಡಿತು. ಈಗ ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೂ ಸಹ ಮುಂದಿನ ಹಂತಕ್ಕೆ ಹೋಗುವುದಿಲ್ಲ.
icon

(4 / 5)

ಆಫ್ಘನ್ ಮತ್ತು ವಿಂಡೀಸ್ ತಂಡಗಳು ಈಗಾಗಲೇ ಸತತ 3 ಗೆಲುವು ದಾಖಲಿಸಿ 6 ಅಂಕ ಸಂಪಾದಿಸಿದೆ. ಆದರೆ, ಕಿವೀಸ್ ಉಳಿದ ಎರಡು ಗೆದ್ದರೂ 4 ಅಂಕ ಮಾತ್ರ ಪಡೆಯಲಿದೆ.
icon

(5 / 5)

ಇತರ ಗ್ಯಾಲರಿಗಳು