ರಣಜಿ ಟ್ರೋಫಿಯ ಸತತ 2ನೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಗೋಲ್ಡನ್ ಡಕ್; ಕಂಬ್ಯಾಕ್ ಹಾದಿ ಮತ್ತಷ್ಟು ಕಠಿಣ
- Ajinkya Rahane: ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಅಜಿಂಕ್ಯ ರಹಾನೆ, 2024ರ ರಣಜಿ ಟ್ರೋಫಿಯಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಅವರು ಗೋಲ್ಡನ್ ಡಕ್ ಆಗಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾಗೆ ಮತ್ತೆ ಕಂಬ್ಯಾಕ್ ಮಾಡುವ ಅವಕಾಶಗಳು ಮತ್ತಷ್ಟು ದೂರವಾಗುವ ಸಾಧ್ಯತೆ ಇದೆ.

(1 / 5)
ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕನಾಗಿರುವ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ, ಜನವರಿ 19ರ ಶುಕ್ರವಾರ ತಿರುವನಂತಪುರದಲ್ಲಿ ಆರಂಭವಾಗಿರುವ ರಣಜಿ ಪಂದ್ಯದಲ್ಲಿ ಆಡುತ್ತಿದ್ದಾರೆ. ಕೇರಳ ವಿರುದ್ಧ ಎಲೈಟ್ ಗುಂಪಿನ ಬಿ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಸತತ ಎರಡು ಪಂದ್ಯಗಳಲ್ಲಿ ಗೋಲ್ಡನ್ ಡಕ್ ಮುಖಭಂಗ ಅನುಭವಿಸಿದ್ದಾರೆ.
(2 / 5)
ಕೇರಳ ವಿರುದ್ಧದ ಪಂದ್ಯದಲ್ಲಿ ರಹಾನೆ ಎರಡನೇ ಎಸೆತದಲ್ಲಿ ಔಟಾದರು. ಸೇಂಟ್ ಕ್ಸೇವಿಯರ್ಸ್ ಕೇರಳ ಕ್ರಿಕೆಟ್ ಅಸೋಸಿಯೇಷನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದ ಮೊದಲ ಎಸೆತದಲ್ಲಿ ಮುಂಬೈನ ಆರಂಭಿಕ ಆಟಗಾರ ಜೋಯ್ ಬೀಸ್ಟ್ ಅವರನ್ನು ಥಂಪಿ ಔಟ್ ಮಾಡಿದರು. ಏರಡನೇ ಎಸೆತದಲ್ಲಿ ರಹಾನೆ ಕೂಡಾ ಔಟಾದರು.
(4 / 5)
ಭಾರತದ ಪರ 85 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ರಹಾನೆ, "ರಣಜಿ ಟ್ರೋಫಿ ಮತ್ತು ಭಾರತದ ಪರ 100 ಟೆಸ್ಟ್ ಪಂದ್ಯಗಳಲ್ಲಿ ಆಡುವುದು ನನ್ನ ಗುರಿ" ಎಂದು ಹೇಳಿದ್ದರು. ಸದ್ಯ, ರಹಾನೆ ಅವರ ಸತತ ವೈಫಲ್ಯ ನೋಡಿದರೆ, ಅವರು ಟೀಮ್ ಇಂಡಿಯಾಗೆ ಮತ್ತೆ ಕಂಬ್ಯಾಕ್ ಮಾಡುವ ಹಾದಿ ಕಷ್ಟಕರವಾಗಿದೆ.
ಇತರ ಗ್ಯಾಲರಿಗಳು