Akash Madhwal Record: 15 ಎಸೆತ, 5 ರನ್, 5 ವಿಕೆಟ್; ಅನಿಲ್ ಕುಂಬ್ಳೆ, ಜಸ್ಪ್ರಿತ್ ಬೂಮ್ರಾ ದಾಖಲೆ ಸರಿಗಟ್ಟಿದ ಆಕಾಶ್ ಮಧ್ವಾಲ್
- ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿ ದಿಗ್ಗಜರ ಎಲೈಟ್ ಪಟ್ಟಿಗೆ ಸೇರಿದ್ದಾರೆ. ಆ ದಾಖಲೆ ಏನೆಂಬುದನ್ನು ಈ ಮುಂದೆ ನೋಡೋಣ.
- ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿ ದಿಗ್ಗಜರ ಎಲೈಟ್ ಪಟ್ಟಿಗೆ ಸೇರಿದ್ದಾರೆ. ಆ ದಾಖಲೆ ಏನೆಂಬುದನ್ನು ಈ ಮುಂದೆ ನೋಡೋಣ.
(1 / 6)
ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆದಿದೆ. (PTI)
(2 / 6)
ಈ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಆಕಾಶ್ ಮಧ್ವಾಲ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. 3.3 ಓವರ್ ಬೌಲಿಂಗ್ ಮಾಡಿ ಕೇವಲ 5 ರನ್ ನೀಡಿ 5 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.(PTI)
(3 / 6)
ಭರ್ಜರಿ ಬೌಲಿಂಗ್ ಪರ್ದರ್ಶನ ನೀಡಿದ ಆಕಾಶ್ ಮಧ್ವಾಲ್, ಐಪಿಎಲ್ನಲ್ಲಿ ದಿಗ್ಗಜ ಬೌಲರ್ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಜಸ್ಪ್ರಿತ್ ಬೂಮ್ರಾ ದಾಖಲೆ ಸಮಗೊಳಿಸಿದ್ದಾರೆ.(PTI)
(4 / 6)
ಐಪಿಎಲ್ ಇತಿಹಾಸದಲ್ಲಿ ನಲ್ಲಿ 5 ವಿಕೆಟ್ 5ನೇ ಬೌಲರ್ ಎನಿಸಿದ್ದಾರೆ. ಅನಿಲ್ ಕುಂಬ್ಳೆ 5 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಈಗ ಆಕಾಶ್ ಮಧ್ವಾಲ್ ಇದೇ ಸಾಧನೆ ಮಾಡಿದ್ದಾರೆ. ಜಸ್ಪ್ರಿತ್ ಬೂಮ್ರಾ 10 ರನ್ ನೀಡಿ 5 ವಿಕೆಟ್, ಇಶಾಂತ್ ಶರ್ಮಾ 12 ರನ್ ನೀಡಿ 5 ವಿಕೆಟ್, ಅಂಕಿತ್ ರಜಪೂತ್ 14 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ.
(5 / 6)
ಮುಂಬೈ ಇಂಡಿಯನ್ಸ್ ತಂಡದ ಪರ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ 3ನೇ ಬೌಲರ್ ಎನಿಸಿದ್ದಾರೆ. ಮೊದಲ ಸ್ಥಾನದಲ್ಲಿ ಅಲ್ಜಾರಿ ಜೋಸೆಫ್ ಇದ್ದಾರೆ. ಅವರು 6 ವಿಕೆಟ್ ಪಡೆದಿದ್ದರು. 2ನೇ ಸ್ಥಾನದಲ್ಲಿ ಜಸ್ಪ್ರಿತ್ ಬೂಮ್ರಾ ಇದ್ದಾರೆ.(PTI)
(6 / 6)
ಮೇ 26ರಂದು ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು, ಮುಂಬೈ ಇಂಡಿಯನ್ಸ್ ಎದುರಿಸಲಿದೆ.(PTI)
ಇತರ ಗ್ಯಾಲರಿಗಳು