England Troll: ಬಜ್ಬಾಲ್ ಕಥೆ ಏನಾಯ್ತು, ಇಂಗ್ಲೆಂಡ್ ತಂಡವನ್ನು ಫುಲ್ ರೋಸ್ಟ್ ಮಾಡಿದ ನೆಟಿಜನ್ಸ್; ಇಲ್ಲಿವೆ ಮತ್ತಷ್ಟು ಮೀಮ್ಸ್
- ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಪಂದ್ಯವನ್ನು ಕೈಚೆಲ್ಲಿದ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಟ್ರೋಲ್ಗೆ ಗುರಿಯಾಗಿದೆ. ಅದರಲ್ಲೂ ಬಜ್ಬಾಲ್ ಅನ್ನೇ ಗುರಿಯಾಗಿಸಿಕೊಂಡು ನೆಟ್ಟಿಗರು ಫುಲ್ ರೋಸ್ಟ್ ಮಾಡುತ್ತಿದ್ದಾರೆ ನೆಟ್ಟಿಗರು.
- ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಪಂದ್ಯವನ್ನು ಕೈಚೆಲ್ಲಿದ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಟ್ರೋಲ್ಗೆ ಗುರಿಯಾಗಿದೆ. ಅದರಲ್ಲೂ ಬಜ್ಬಾಲ್ ಅನ್ನೇ ಗುರಿಯಾಗಿಸಿಕೊಂಡು ನೆಟ್ಟಿಗರು ಫುಲ್ ರೋಸ್ಟ್ ಮಾಡುತ್ತಿದ್ದಾರೆ ನೆಟ್ಟಿಗರು.
(1 / 11)
ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಆ್ಯಷಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲೇ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣ ಬಡಿಸಿತು. ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ ಸಮರ ಸಾರಿದ ಆಸಿಸ್, ಗೆದ್ದು ಬೀಗಿದೆ.
(2 / 11)
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್, ಆಸಿಸ್ಗೆ 281 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ ಕೊನೆಯ ಹಂತದಲ್ಲಿ ಕಾಂಗರೂ ಪಡೆ ಗೆದ್ದು ಬೀಗಿತು. ನಾಯಕ ಪ್ಯಾಟ್ ಕಮಿನ್ಸ್ರ ಹೋರಾಟದಿಂದ 2 ವಿಕೆಟ್ಗಳ ರೋಚಕ ಜಯ ಸಾಧಿಸ್ತು.(AFP)
(3 / 11)
ತನ್ನ ತವರಿನಲ್ಲಿ ಪಂದ್ಯವನ್ನು ಕೈಚೆಲ್ಲಿದ ಬೆನ್ನಲ್ಲೇ ಇಂಗ್ಲೆಂಡ್ ಟ್ರೋಲ್ಗೆ ಗುರಿಯಾಗಿದೆ. ಅದರಲ್ಲೂ ಬಜ್ಬಾಲ್ ಅನ್ನೇ ಗುರಿಯಾಗಿಸಿಕೊಂಡು ರೋಸ್ಟ್ ಮಾಡುತ್ತಿದ್ದಾರೆ ನೆಟ್ಟಿಗರು. ಇದು ಭಾರತದ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಟ್ರೋಲ್ ಮಾಡಿರುವ ಟ್ವೀಟ್.
(4 / 11)
ಬಜ್ಬಾಲ್ ಎಂದರೆ ಟೆಸ್ಟ್ ಕ್ರಿಕೆಟ್ನಲ್ಲೂ ಏಕದಿನ ಕ್ರಿಕೆಟ್ನಂತೆ ಬ್ಯಾಟ್ ಬೀಸುವುದು. ಈ ಬಜ್ಬಾಲ್ನಿಂದ ಇಂಗ್ಲೆಂಡ್ ಸಾಕಷ್ಟು ಯಶಸ್ವಿಯಾಗಿತ್ತು. ಇದೀಗ ಅದೇ ಮುಳುವಾಯಿತು.
(5 / 11)
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು, 450 ರನ್ ಕಲೆ ಹಾಕುವ ಸಾಧ್ಯತೆ ಇತ್ತು. ಜೋ ರೂಟ್ ಶತಕ ಸಿಡಿಸಿ ಕ್ರೀಸ್ನಲ್ಲಿದ್ದರು. ಆದರೂ ನಾಯಕ ಬೆನ್ಸ್ಟೋಕ್ಸ್ ಡಿಕ್ಲೇರ್ ಘೋಷಿಸಿದ್ರು.
(6 / 11)
8 ವಿಕೆಟ್ ಕಳೆದುಕೊಂಡು 393 ರನ್ಗಳಿಗೆ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿತು. ಆಸಿಸ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 386 ರನ್ ಕಲೆ ಹಾಕಿತು. ಇದರಿಂದ 7 ರನ್ಗಳ ಮುನ್ನಡೆ ಪಡೆಯಿತು ಇಂಗ್ಲೆಂಡ್.
(7 / 11)
ಎರಡನೇ ಇನ್ನಿಂಗ್ಸ್ನಲ್ಲಿ ಕುಸಿತ ಕಂಡ ಬೆನ್ಸ್ಟೋಕ್ಸ್ ಪಡೆ, ಆಸಿಸ್ಗೆ 281 ರನ್ಗಳ ಟಾರ್ಗೆಟ್ ನೀಡಿತು. ಕೊನೆಯ ಹಂತದಲ್ಲಿ ಇಂಗ್ಲೆಂಡ್ ಸೋಲಿಗೆ ಶರಣಾಯಿತು.
(8 / 11)
ಡಿಕ್ಲೇರ್ ಘೋಷಿಸದೆ ಬ್ಯಾಟಿಂಗ್ ಮುಂದುವರೆಸಿದ್ದರೆ, ಇಂಗ್ಲೆಂಡ್ ಇನ್ನೂ ಹೆಚ್ಚಿನ ರನ್ ಗಳಿಸುತ್ತಿತ್ತು. ಇದರಿಂದ ಗೆಲುವು ಸಾಧಿಸ್ತಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ.
ಇತರ ಗ್ಯಾಲರಿಗಳು