ನೇಪಾಳ ವಿರುದ್ಧ ಗೆದ್ದು ಸೂಪರ್​-8 ಪ್ರವೇಶಿಸಿದ ಬಾಂಗ್ಲಾದೇಶ; ಜೂನ್ 22ರಂದು ಭಾರತದ ವಿರುದ್ಧ ಸೆಣಸಾಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೇಪಾಳ ವಿರುದ್ಧ ಗೆದ್ದು ಸೂಪರ್​-8 ಪ್ರವೇಶಿಸಿದ ಬಾಂಗ್ಲಾದೇಶ; ಜೂನ್ 22ರಂದು ಭಾರತದ ವಿರುದ್ಧ ಸೆಣಸಾಟ

ನೇಪಾಳ ವಿರುದ್ಧ ಗೆದ್ದು ಸೂಪರ್​-8 ಪ್ರವೇಶಿಸಿದ ಬಾಂಗ್ಲಾದೇಶ; ಜೂನ್ 22ರಂದು ಭಾರತದ ವಿರುದ್ಧ ಸೆಣಸಾಟ

  • Bangladesh beat Nepal: ಟಿ20 ವಿಶ್ವಕಪ್​ ಟೂರ್ನಿಯಲ್ಲಿ  ಗುಂಪು ಹಂತದ 37ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲುವು ಸಾಧಿಸಿದ ಬಾಂಗ್ಲಾದೇಶ ಸೂಪರ್​-8 ಪ್ರವೇಶಿಸಿದೆ.

ಐಸಿಸಿ ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಗುಂಪು ಹಂತದ 37ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಬಾಂಗ್ಲಾದೇಶ 21 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿ ಅಧಿಕೃತವಾಗಿ ಸೂಪರ್​-8 ಪ್ರವೇಶಿಸಿತು.
icon

(1 / 5)

ತಂಜಿಮ್ ಹಸನ್ ಸಾಕಿಬ್ (4/7), ಮುಸ್ತಫಿಜುರ್​ ರೆಹಮಾನ್ (3/7) ಮತ್ತು ಶಕೀಬ್ ಅಲ್ ಹಸನ್ (9/2) ಅವರು ಬೆಂಕಿ-ಬಿರುಗಾಳಿ ಬೌಲಿಂಗ್ ನಡೆಸಿ ನೇಪಾಳವನ್ನು 85 ರನ್​ಗಳಿಗೆ ಆಲೌಟ್ ಮಾಡಿದರು.
icon

(2 / 5)

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ಕೂಡ ನಿರೀಕ್ಷಿತ ಬ್ಯಾಟಿಂಗ್ ನಡೆಸಲಿಲ್ಲ. 19.3 ಓವರ್​​ಗಳಲ್ಲಿ 106 ರನ್​ಗಳಿಗೆ ಆಲೌಟ್ ಆಯಿತು. ಶಕೀಬ್ ಅಲ್ ಹಸನ್ 17 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್.
icon

(3 / 5)

ಸೇಂಟ್ ವಿನ್ಸೆಂಟ್​ನ ಅರ್ನೋಸ್ ವೇಲ್ ಗ್ರೌಂಡ್​​ನಲ್ಲಿ ಸಾಧಾರಣ ಗುರಿ ಬೆನ್ನಟ್ಟಿದ ನೇಪಾಳ, ಬಾಂಗ್ಲಾ ಬೌಲಿಂಗ್ ದಾಳಿಗೆ ಕುಸಿಯಿತು. 19.2 ಓವರ್​​​ಗಳಲ್ಲಿ 85 ರನ್​​ಗಳಿಗೆ ಆಲೌಟ್ ಆಯಿತು.
icon

(4 / 5)

ಸೂಪರ್​-8 ಪ್ರವೇಶಿಸಿದ ಬಾಂಗ್ಲಾ, ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಜೂನ್ 22ರಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಲಿವೆ.
icon

(5 / 5)

ಇತರ ಗ್ಯಾಲರಿಗಳು