BAN vs SL: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ರೋಚಕ ಗೆಲುವು; ಸಿಂಹಳೀಯರಿಗೆ ಸತತ ಎರಡನೇ ಸೋಲು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ban Vs Sl: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ರೋಚಕ ಗೆಲುವು; ಸಿಂಹಳೀಯರಿಗೆ ಸತತ ಎರಡನೇ ಸೋಲು

BAN vs SL: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ರೋಚಕ ಗೆಲುವು; ಸಿಂಹಳೀಯರಿಗೆ ಸತತ ಎರಡನೇ ಸೋಲು

  • Bangladesh Beat Sri Lanka : ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 15ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎರಡು ವಿಕೆಟ್​​ಗಳಿಂದ ಬಾಂಗ್ಲಾದೇಶ ಸೋಲಿಸಿದೆ.

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದ 15ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಶ್ರೀಲಂಕಾ ಸತತ ಎರಡು ಸೋಲು ಕಂಡು ಸೂಪರ್​-8ನಿಂದ ಹೊರಬೀಳುವ ಆತಂಕಕ್ಕೆ ಸಿಲುಕಿದೆ.
icon

(1 / 5)

ಬಾಂಗ್ಲಾದೇಶ ತನ್ನ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದೆ. ಡಲ್ಲಾಸ್​ನ ಗ್ರ್ಯಾಂಡ್ ಪ್ರೈರೀ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಂಕಾವನ್ನು ಬಾಂಗ್ಲಾದೇಶ ಎರಡು ವಿಕೆಟ್​ಗಳಿಂದ ಸೋಲಿಸಿತು. 2 ಅಂಕ ಪಡೆದು ಗ್ರೂಪ್​ ಡಿನಲ್ಲಿ ಮೂರನೇ ಸ್ಥಾನ ಪಡೆದಿದೆ.
icon

(2 / 5)

(PTI)

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಶ್ರೀಲಂಕಾ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಪಾಥುಮ್ ನಿಸ್ಸಾಂಕ 47 ರನ್ ಗಳಿಸಿದ್ದೇ ಗರಿಷ್ಠ ಮೊತ್ತವಾಗಿದೆ. ಮುಸ್ತಾಫಿಜುರ್ ರೆಹಮಾನ್ ಮತ್ತು ರಿಶಾದ್ ಹೊಸೈನ್ ತಲಾ 3 ವಿಕೆಟ್ ಉರುಳಿಸಿದ್ದಾರೆ.
icon

(3 / 5)

125 ರನ್​ಗಳ ಅಲ್ಪಗುರಿ ಹಿಂಬಾಲಿಸಿದ ಬಾಂಗ್ಲಾ ಕೂಡ ತಿಣುಕಾಡಿತು. ಆದರೆ, ಕೊನೆಗೂ 19 ಓವರ್​ಗಳಲ್ಲಿ ಗೆಲುವು ಸಾಧಿಸಿತು. ಲಿತ್ತನ್ ದಾಸ್ (36) ಮತ್ತು ತೌಹಿದ್ ಹೃದೋಯ್ (40) ಉತ್ತಮ ಪ್ರದರ್ಶನ ನೀಡಿದರು. ನುವಾನ್ ತುಷಾರ 4 ವಿಕೆಟ್ ಪಡೆದರೂ ಗೆಲುವು ದಕ್ಕಲಿಲ್ಲ.
icon

(4 / 5)

(AP)

ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದ ಬಾಂಗ್ಲಾದೇಶ, ತನ್ನ ಮುಂದಿನ ಪಂದ್ಯದಲ್ಲಿ ಜೂನ್ 10ರಂದು ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಸೋತ ಶ್ರೀಲಂಕಾ, ಜೂನ್ 11ರಂದು ನೇಪಾಳವನ್ನು ಎದುರಿಸಲಿದೆ.
icon

(5 / 5)

ಇತರ ಗ್ಯಾಲರಿಗಳು