ಐಪಿಎಲ್ ಮೊದಲಾರ್ಧ ಮುಕ್ತಾಯ, ಕೋಟಿ ಕೋಟಿ ಪಡೆದು ಕೈ ಎತ್ತಿದ ಸ್ಟಾರ್ ಕ್ರಿಕೆಟರ್ಸ್; ಅಟ್ಟರ್ಫ್ಲಾಪ್ ಆದವರ ಪಟ್ಟಿ ಇಲ್ಲಿದೆ
- Most Expensive Players Fail : 17ನೇ ಆವೃತ್ತಿಯ ಐಪಿಎಲ್ ಮುಕ್ತಾಯಗೊಂಡಿದೆ. ಆದರೆ ಹರಾಜಿನಲ್ಲಿ ಮತ್ತು ಈ ಮೊದಲೇ ತಂಡದಲ್ಲಿದ್ದು ಕೋಟಿ ಕೋಟಿ ಪಡೆದಿದ್ದ ಆಟಗಾರರು ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಅದು ಮಿಚೆಲ್ ಸ್ಟಾರ್ಕ್ನಿಂದ ಸಮೀರ್ ರಿಜ್ವಿವರೆಗೂ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
- Most Expensive Players Fail : 17ನೇ ಆವೃತ್ತಿಯ ಐಪಿಎಲ್ ಮುಕ್ತಾಯಗೊಂಡಿದೆ. ಆದರೆ ಹರಾಜಿನಲ್ಲಿ ಮತ್ತು ಈ ಮೊದಲೇ ತಂಡದಲ್ಲಿದ್ದು ಕೋಟಿ ಕೋಟಿ ಪಡೆದಿದ್ದ ಆಟಗಾರರು ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಅದು ಮಿಚೆಲ್ ಸ್ಟಾರ್ಕ್ನಿಂದ ಸಮೀರ್ ರಿಜ್ವಿವರೆಗೂ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
(1 / 9)
ಈ ವರ್ಷದ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತು. ಆದರೆ ಸ್ಟಾರ್ಕ್ ಪ್ರದರ್ಶನ ತುಂಬಾ ನಿರಾಶಾದಾಯಕವಾಗಿದ್ದು, ಪವರ್ಪ್ಲೇನಲ್ಲಿ ವಿಕೆಟ್ಗಾಗಿ ಪರದಾಡುತ್ತಿದ್ದಾರೆ. ಅಲ್ಲದೆ, ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಡೆತ್ ಓವರ್ಗಳಲ್ಲಿ ಕನಿಷ್ಠ 4 ಓವರ್ ಎಸೆದ ಬೌಲರ್ಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ನ ಆನ್ರಿಚ್ ನೋಕಿಯಾ ಮತ್ತು ಎಸ್ಆರ್ಹೆಚ್ ಭುವನೇಶ್ವರ್ ಕುಮಾರ್ ನಂತರ ಸ್ಟಾರ್ಕ್ 3ನೇ ಕೆಟ್ಟ ಬೌಲರ್ ಆಗಿದ್ದಾರೆ. ಈವರೆಗೆ 6 ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದು, 10.54 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
(2 / 9)
ಮಿಚೆಲ್ ಸ್ಟಾರ್ಕ್ ಮಾತ್ರವಲ್ಲ, ಪ್ಯಾಟ್ ಕಮಿನ್ಸ್ ಫ್ಲಾಪ್ ಶೋ ನೀಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ 20.50 ಕೋಟಿ ಪಡೆದಿದ್ದು, ಬೌಲಿಂಗ್ನಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ನಾಯಕನಾಗಿ ಯಶಸ್ಸು ಕಂಡಿದ್ದರೂ ತನ್ನ ಪ್ರದರ್ಶನದಲ್ಲಿ ಮ್ಯಾಜಿಕ್ ನಡೆಸಲು ವಿಫಲರಾಗಿದ್ದಾರೆ. ಆಡಿರುವ 6 ಪಂದ್ಯಗಳಲ್ಲಿ 9 ವಿಕೆಟ್ ಮಾತ್ರ ಪಡೆದಿದ್ದಾರೆ.
(3 / 9)
ಐಪಿಎಲ್ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡ್ಯಾರಿಲ್ ಮಿಚೆಲ್, ಅವರನ್ನು 14 ಕೋಟಿ ರೂ.ಗೆ ಖರೀದಿಸಿತು. 2023ರ ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕಾರಣ ಹೆಚ್ಚಿನ ನಿರೀಕ್ಷೆಯೊಂದಿಗೆ ತಂಡಕ್ಕೆ ಕರೆತಂದಿತು. ಪ್ರಸ್ತುತ ಅವರು ವಿಫಲರಾಗಿದ್ದು, 6 ಇನ್ನಿಂಗ್ಸ್ಗಳಲ್ಲಿ 125 ಸ್ಟ್ರೈಕ್ರೇಟ್ನಲ್ಲಿ ಕೇವಲ 135 ರನ್ ಗಳಿಸಿದ್ದಾರೆ.
(4 / 9)
ಹರ್ಷಲ್ ಪಟೇಲ್ ಅವರನ್ನು ಪಂಜಾಬ್ ಕಿಂಗ್ಸ್ 11.75 ಕೋಟಿ ರೂ.ಗೆ ಖರೀದಿಸಿದೆ. ಆದರೆ ಪರಿಣಾಮಕಾರಿ ಬೌಲಿಂಗ್ ನಡೆಸುವಲ್ಲಿ ವಿಫಲರಾದರು. ವಿಕೆಟ್ ಪಡೆಯಲು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಮುಂಬೈ ವಿರುದ್ಧ 3 ವಿಕೆಟ್ ಪಡೆದಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದಾರೆ. 7 ಪಂದ್ಯಗಳಲ್ಲಿ 10.12ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು 10 ವಿಕೆಟ್ ಮಾತ್ರ ಪಡೆದಿದ್ದಾರೆ.
(5 / 9)
ಅಲ್ಜಾರಿ ಜೋಸೆಫ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 11.5 ಕೋಟಿ ರೂ.ಗೆ ಖರೀದಿಸಿತು, ಆರ್ಸಿಬಿ ಪರ ಆಡಿದ ಮೊದಲ 3 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ನಂತರ ಇಲೆವೆನ್ನಲ್ಲಿ ಅವಕಾಶ ಸಿಗಲಿಲ್ಲ. ಪ್ರತಿ ಓವರ್ಗೆ 11.89 ರನ್ ನೀಡುವ ಎಕಾನಮಿ ಹೊಂದಿದ್ದಾರೆ. ಕೇವಲ 1 ವಿಕೆಟ್ ಪಡೆದಿದ್ದಾರೆ. ಜೋಸೆಫ್ ಹೊಸ ಚೆಂಡಿನೊಂದಿಗೆ ಯಶಸ್ಸು ಸಾಧಿಸಲು ವಿಫಲರಾದ ಕೆರಿಬಿಯನ್ ಆಟಗಾರ, ಮತ್ತೆ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ.
(6 / 9)
ಸ್ಪೆನ್ಸರ್ ಜಾನ್ಸನ್ ಅವರನ್ನು ಗುಜರಾತ್ ಟೈಟಾನ್ಸ್ 10 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿತು, ಆದರೆ ಅವರ ಪ್ರದರ್ಶನ ನಿರಾಶಾದಾಯಕವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಡೆತ್ ಓವರ್ಗಳಲ್ಲಿ ಜಾನ್ಸನ್ ಪ್ರಭಾವಶಾಲಿ ಪರಿಣಾಮ ನೀಡಿದರು. ಆದರೆ ಆ ಬಳಿಕ ಜಾನ್ಸನ್ ಮೂರು ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಪ್ರತಿ ಓವರ್ಗೆ 9 ರನ್ಗಳಿಂದ ಹೆಚ್ಚು ಬಿಟ್ಟುಕೊಡುತ್ತಿದ್ದಾರೆ.
(7 / 9)
ಐಪಿಎಲ್ನಲ್ಲಿ ದುಬಾರಿ ಆಟಗಾರರ ಪೈಕಿ ಒಬ್ಬರಾದ ಆರ್ಸಿಬಿಯ ಕ್ಯಾಮರೂನ್ ಗ್ರೀನ್, ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದಾರೆ. 17.50 ಕೋಟಿ ಪಡೆದು ಮುಂಬೈ ಇಂಡಿಯನ್ಸ್ನಿಂದ ಆರ್ಸಿಬಿಗೆ ಟ್ರೇಡ್ ಆದ ಗ್ರೀನ್, ಆಡಿದ 5 ಪಂದ್ಯಗಳಲ್ಲಿ ಕೇವಲ 68 ರನ್ ಬಾರಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 17.00.(AFP)
(8 / 9)
ಆರ್ಸಿಬಿ ಪರ ಅಟ್ಟರ್ಫ್ಲಾಪ್ ಆದ ಮತ್ತೊಬ್ಬ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್. 2021ರಿಂದ ತಂಡದ ಭಾಗವಾಗಿದ್ದಾರೆ. ಆದರೆ 2024ರಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 6 ಪಂದ್ಯಗಳಲ್ಲಿ ಕೇವಲ 32 ರನ್ ಗಳಿಸಿದ್ದಾರೆ. ಒಟ್ಟು ಮೂರು ಬಾರಿ ಡಕೌಟ್ ಆಗಿದ್ದಾರೆ. ಸದ್ಯ ಅವರು ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದಾರೆ.(AP)
(9 / 9)
ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 8.4 ಕೋಟಿ ರೂ.ಗೆ ಖರೀದಿಸಿದೆ. ರಿಲೀ ರೊಸ್ಸೌ ಅವರನ್ನು ಪಂಜಾಬ್ ಕಿಂಗ್ಸ್ 8 ಕೋಟಿ ರೂ.ಗೆ ಖರೀದಿಸಿದೆ. ರೋವ್ಮನ್ ಪೊವೆಲ್ ಅವರನ್ನು ರಾಜಸ್ಥಾನ್ ರಾಯಲ್ಸ್ 7.4 ಕೋಟಿ ರೂ.ಗೆ ಖರೀದಿಸಿದೆ. ಶಾರುಖ್ ಖಾನ್ ಅವರನ್ನು ಪಂಜಾಬ್ ಕಿಂಗ್ಸ್ 7.4 ಕೋಟಿ ರೂ.ಗೆ ಖರೀದಿಸಿದೆ. ಆದರೆ ಇವರೆಲ್ಲರೂ ದಯನೀಯವಾಗಿ ವಿಫಲರಾಗಿದ್ದಾರೆ.
ಇತರ ಗ್ಯಾಲರಿಗಳು