ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹ್ಯಾಟ್ರಿಕ್ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡಾನ್; ಇದೇ ವಿಶ್ವಕಪ್​ನಲ್ಲಿ ಈ ಸಾಧನೆಗೈದ 3ನೇ ಆಟಗಾರ

ಹ್ಯಾಟ್ರಿಕ್ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡಾನ್; ಇದೇ ವಿಶ್ವಕಪ್​ನಲ್ಲಿ ಈ ಸಾಧನೆಗೈದ 3ನೇ ಆಟಗಾರ

Chris Jordan Hat-Trick: ಕ್ರಿಸ್ ಜೋರ್ಡಾನ್ ಟಿ20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಇಂಗ್ಲೆಂಡ್​ನ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಧ್ಯಮ ವೇಗದ ಬೌಲರ್ ಕ್ರಿಸ್ ಜೋರ್ಡಾನ್ ಇಂಗ್ಲೆಂಡ್​​ ತಂಡದ ಪರ ಇತಿಹಾಸ ಬರೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ಪಡೆದ ತಮ್ಮ ದೇಶದ ಮೊದಲ ಬೌಲರ್ ಎಂಬ ದಾಖಲೆಗೆ ಒಳಗಾಗಿದ್ದಾರೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಜೋರ್ಡಾನ್ ಈ ಸಾಧನೆ ಮಾಡಿದ್ದಾರೆ.
icon

(1 / 6)

ಟಾಸ್ ಸೋತ ಅಮೆರಿಕ ಮೊದಲು ಬ್ಯಾಟಿಂಗ್ ನಡೆಸಿತು. ಇನ್ನಿಂಗ್ಸ್​​ನ 19ನೇ ಓವರ್​​ ಬೌಲಿಂಗ್ ಮಾಡಿದ ಜೋರ್ಡಾನ್, ಒಂದೇ ಓವರ್​​​ನಲ್ಲೇ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದರು. ಓವರ್​​ನ ಮೊದಲ ಎಸೆತದಲ್ಲಿ ಕೋರಿ ಆಂಡರ್ಸನ್ ಅವರನ್ನು ಔಟ್ ಮಾಡಿದ ಜೋರ್ಡಾನ್, ಅಲಿ ಖಾನ್, ನೌಸ್ತೇಶ್ ಕೆಂಜಿಗೆ ಮತ್ತು ಸೌರಭ್ ನೇತ್ರವಾಲ್ಕರ್ ಅವರನ್ನು ಕ್ರಮವಾಗಿ 3, 4 ಮತ್ತು 5ನೇ ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ.
icon

(2 / 6)

ಇದರೊಂದಿಗೆ ಐರ್ಲೆಂಡ್ ತಂಡದ ವೇಗಿ ಕರ್ಟಿಸ್ ಕ್ಯಾಂಪರ್ ಅವರ ವಿಶಿಷ್ಟ ದಾಖಲೆಯನ್ನು ಮುಟ್ಟಿದ್ದಾರೆ. 2021ರ ಟಿ20 ವಿಶ್ವಕಪ್​​ನಲ್ಲಿ ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಒಂದು ಓವರ್​​​ನಲ್ಲಿ ಕರ್ಟಿಸ್ ಕ್ಯಾಂಪರ್ 4 ವಿಕೆಟ್ ಪಡೆದಿದ್ದರು. ಇದೀಗ ಜೋರ್ಡಾನ್ ಟಿ20 ವಿಶ್ವಕಪ್​​ನಲ್ಲಿ 4 ವಿಕೆಟ್ ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
icon

(3 / 6)

ಹಾಲಿ ವಿಶ್ವಕಪ್ 2024 ಟೂರ್ನಿಯಲ್ಲಿ ಹ್ಯಾಟ್ರಿಕ್ ಪಡೆದ ಮೂರನೇ ಆಟಗಾರ ಎನಿಸಿದ್ದಾರೆ ಜೋರ್ಡಾನ್. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ಪಡೆದ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಎದುರು ಎರಡು ಹ್ಯಾಟ್ರಿಕ್ ಪಡೆದಿದ್ದಾರೆ.
icon

(4 / 6)

ಹಾಲಿ ವಿಶ್ವಕಪ್ 2024 ಟೂರ್ನಿಯಲ್ಲಿ ಹ್ಯಾಟ್ರಿಕ್ ಪಡೆದ ಮೂರನೇ ಆಟಗಾರ ಎನಿಸಿದ್ದಾರೆ ಜೋರ್ಡಾನ್. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ಪಡೆದ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಎದುರು ಎರಡು ಹ್ಯಾಟ್ರಿಕ್ ಪಡೆದಿದ್ದಾರೆ.(AFP)

ಇಂಗ್ಲೆಂಡ್ ಬೌಲರ್​​ಗಳ ದಾಳಿಯಿಂದ ಅಮೆರಿಕ 18.5 ಓವರ್​ಗಲ್ಲಿ 115 ರನ್ ಗಳಿಸಿ ಆಲೌಟಾಯಿತು. ತಂಡದ ಪರ ನಿತೀಶ್ ಕುಮಾರ್ 30 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಕೋರಿ ಆಂಡರ್ಸನ್ 29 ರನ್, ಹರ್ಮೀತ್ ಸಿಂಗ್ 21 ರನ್ ಗಳಿಸಿದರು. ಆರೋನ್ ಜೋನ್ಸ್ 10 ರನ್ ಗಳಿಸಿದರು. ಉಳಿದವರಲ್ಲಿ ನಾಲ್ಕರು ಡಕೌಟ್, ಇತರರು ಒಂದಂಕಿ ಕೂಡ ದಾಟಲಿಲ್ಲ.
icon

(5 / 6)

ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ 4 ವಿಕೆಟ್ ಕಿತ್ತರೆ, ಆದಿಲ್ ರಶೀದ್ ಹಾಗೂ ಸ್ಯಾಮ್ ಕರನ್ ತಲಾ 2 ವಿಕೆಟ್ ಪಡೆದರು. ರೀಸ್ ಟಾಪ್ಲೆ ಮತ್ತು ಲಿಯಾಮ್ ಲಿವಿಂಗ್​ಸ್ಟನ್ ತಲಾ ಒಂದು ವಿಕೆಟ್ ಪಡೆದರು.
icon

(6 / 6)

ಇತರ ಗ್ಯಾಲರಿಗಳು