ಕನ್ನಡ ಸುದ್ದಿ  /  Photo Gallery  /  Cricket News Even Mumbai Indians Lost Owners Nita Mukesh Ambani Got Thousands Of Crores Of Income From Ipl 2023 Prs

Nita Ambani: ಸೋತರೂ ಮುಂಬೈ ಮಾಲೀಕರಿಗೆ ಐಪಿಎಲ್​ನಿಂದ ಸಾವಿರಾರು ಕೋಟಿ ಆದಾಯ; ನೀತಾ, ಮುಕೇಶ್​ ಅಂಬಾನಿ ನಿವ್ವಳ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

May 29, 2023 09:45 PM IST Prasanna Kumar P N
  • Share on Twitter
  • Share on FaceBook
  • 16ನೇ ಆವೃತ್ತಿಯ ಐಪಿಎಲ್​ನ 2ನೇ ಕ್ವಾಲಿಫೈಯರ್​​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ಸೋತು ಹೊರ ನಡೆಯಿತು. ಇದರೊಂದಿಗೆ ಮತ್ತೊಂದು ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಆದರೂ ಸಾವಿರಾರು ಕೋಟಿ ಸಂಪಾದಿಸಿದ್ದಾರೆ ಮುಂಬೈ ತಂಡದ ಮಾಲೀಕರು.
ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು ಮುಕೇಶ್ ಅಂಬಾನಿ. ಅವರ ಪತ್ನಿ ನೀತಾ ಅಂಬಾನಿ ಮುಂಬೈ ಇಂಡಿಯನ್ಸ್​ ಮಾಲೀಕತ್ವ ಹೊಂದಿದ್ದಾರೆ. ಮುಂಬೈ ಫೈನಲ್​ಗೆ ಪ್ರವೇಶಿಸದಿದ್ದರೂ, ಪ್ರಸಕ್ತ ಐಪಿಎಲ್​​ನಲ್ಲಿ ನೀತಾ ಅಂಬಾನಿ ಮತ್ತು ಮುಕೇಶ್​ ಅಂಬಾನಿ ಸಾವಿರಾರು ಕೋಟಿ ಸಂಪಾದಿಸಿದ್ದಾರೆ.

1 / 7

ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ಐಪಿಎಲ್​ ತಂಡದ ಮುಂಬೈ ಶೇ.100ರಷ್ಟು ಪಾಲು ಹೊಂದಿದ್ದಾರೆ. 2008ರಲ್ಲಿ ತಂಡವನ್ನು ಖರೀದಿಸಲು ನೂರಾರು ಕೋಟಿಯನ್ನು ಖರ್ಚು ಮಾಡಿದ್ದರು. ಮುಂಬೈ ತಂಡವನ್ನು ಖರೀದಿಸಲು 916 ಕೋಟಿ ಖರ್ಚು ಮಾಡಿದ್ದರು.

2 / 7

ಮುಂಬೈ ಇಂಡಿಯನ್ಸ್‌ ಐಪಿಎಲ್​ನ ಅತ್ಯಂತ ಯಶಸ್ವಿ ತಂಡ. ಈವರೆಗೂ 5 ಟ್ರೋಫಿ ಗೆದ್ದಿದೆ. ಒಟ್ಟಾರೆ ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡವೂ ಆಗಿದೆ. ಬ್ರಾಂಡ್ ಉಳಿಸಿಕೊಂಡು ಹೆಚ್ಚಿನ ಸಂಖ್ಯೆಯಯಲ್ಲಿ ಪ್ರಾಯೋಜತ್ವ ಪಡೆಯುತ್ತಿದೆ.

3 / 7

ಮುಕೇಶ್ ಅಂಬಾನಿ ಅವರ ರಿಲಯನ್ಸ್ ಕಂಪನಿ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್‌ನ ಏಕೈಕ ಮಾಲೀಕರು. ಈವರೆಗೆ ಹೆಚ್ಚು ಲಾಭದಾಯಕ ಐಪಿಎಲ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ 10,070 ಕೋಟಿಗೂ ಅಧಿಕ ಬ್ರಾಂಡ್ ಮೌಲ್ಯ ಹೊಂದಿದೆ. ಕಳೆದ ವರ್ಷದಿಂದ ಸುಮಾರು 200 ಕೋಟಿ ಗಳಿಸಿದೆ.

4 / 7

ಇದರ ಹೊರತಾಗಿ ಸರಕು ಮತ್ತು ಟಿಕೆಟ್ ದರಗಳ ಮೂಲಕವೂ ಹಣ ಗಳಿಸುತ್ತಿದ್ದಾರೆ ಮುಂಬೈ ಮಾಲೀಕರು. ಮಾಧ್ಯಮ ಪ್ರಾಯೋಜಕತ್ವ ಮತ್ತು ಜಾಹೀರಾತುಗಳು ಪ್ರತ್ಯೇಕವಾಗಿ ಸೇರುತ್ತವೆ. ಮತ್ತೊಂದು ಆದಾಯದ ಮೂಲ ಎಂದರೆ ಜಿಯೋ ಸಿನಿಮಾಗೆ ಮಾರಾಟವಾದ ಐಪಿಎಲ್ ಹಕ್ಕುಗಳಿಂದಲೂ ಕೋಟಿ ಕೋಟಿ ಹರಿದು ಬರುತ್ತಿದೆ.

5 / 7

ರಿಲಯನ್ಸ್‌ ಬ್ರ್ಯಾಂಡ್ ವಯಾಕಾಮ್ 18 ಜಿಯೋ ಸಿನಿಮಾವು ಐಪಿಎಲ್ ಟೆಲಿಕಾಸ್ಟಿಂಗ್ ಹಕ್ಕುಗಳನ್ನು 22,290 ಕೋಟಿಗೆ ಖರೀದಿಸಿತು. ಜಿಯೋ ಸಿನಿಮಾ ಐಪಿಎಲ್‌ನ ಮೊದಲ ಹೋಸ್ಟಿಂಗ್ ಮೂಲಕ 23,000 ಕೋಟಿ ಮೌಲ್ಯದ ಆದಾಯ ಗಳಿಸಿದೆ. ಮುಂದಿನ ಆವೃತ್ತಿಗಳಲ್ಲಿ ಇದರ ಆದಾಯ ಮತ್ತಷ್ಟು ಹೆಚ್ಚಿರುವ ಸಾಧ್ಯತೆ ಇದೆ,

6 / 7

ನೀತಾ ಅಂಬಾನಿ ಮತ್ತು ಮುಕೇಶ್​ ಅಂಬಾನಿ ಅವರ ನಿವ್ವಳ ಆಸ್ತಿ ಮೌಲ್ಯ 83.4 ಶತಕೋಟಿ ಡಾಲರ್​ (ಫೆಬ್ರವರಿ 2023ಕ್ಕೆ) ಇದೆ. ಅಂದರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ 68 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಇದೀಗ ಐಪಿಎಲ್​ನಿಂದಲೂ ಆದಾಯ ಹೆಚ್ಚಿದ್ದು, ನಿವ್ವಳ ಮೌಲ್ಯದಲ್ಲೂ ಏರಿಕೆ ಕಂಡಿರುವ ಸಾಧ್ಯತೆ ಇದೆ,

7 / 7

ಇತರ ಗ್ಯಾಲರಿಗಳು